ಗೋಸ್ವರ್ಗ: ಶ್ರೀರಾಮದೇವ ಭಾನ್ಕುಳಿ ಮಠದ ಸಹಸ್ರ ಗೋವುಗಳ ಆಶ್ರಯ ತಾಣದಲ್ಲಿ ದೀಪಾವಳಿಯ ಅಂಗವಾಗಿ ವಿವಿಧ ಕಾರ್ಯಕ್ರಗಳು ನಡೆಯಿತು.
ಗೋಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾಮೂಹಿಕ ಗೋಪೂಜೆ ಮೂಲಕ ನೂರಾರು ಭಕ್ತರು ಗೋಸೇವೆಗೈದರು. ತೀರ್ಥರಾಜ ಮಹಾಸ್ನಾನ ನೆರವೇರಿತು. ಗೋತುಲಾಭಾರ ಸೇವೆಯಲ್ಲಿ ಗೋವುಗಳ ಆಹಾರವಾದ ಹಿಂಡಿಯಿಂದ ತುಲಾಭಾರ ನಡೆಯಿತು.
ಗೋಸ್ವರ್ಗಕ್ಕೆ ಆಗಮಿಸುವ ಪ್ರವಾಸಿಗರಿಗೆ ದೇಸೀ ಗೋವಿನ ಉತ್ಪನ್ನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸ್ವರ್ಗಸುಧಾ ತಾಜಾ ಆಹಾರ ಮಳಿಗೆ ಚಾಲನೆ ನೀಡಲಾಯಿತು. ಸಿದ್ಧಾಪುರದ ತಹಸೀಲ್ದಾರರಾದ ಮಂಜುಳಾ ಭಜಂತ್ರಿ ಅವರು ಗೋಸ್ವರ್ಗಕ್ಕೆ ಭೇಟಿನೀಡಿ ಗೋಗ್ರಾಸ ನೀಡಿ, ವ್ಯವಸ್ಥೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಜೆ ಸ್ವರ್ಗಸಂಗೀತ ಕಾರ್ಯಕ್ರಮದಲ್ಲಿ ಶ್ರೀಪ್ರಕಾಶ ಹೆಗಡೆ ಕಲ್ಲಾರೆಮನೆ ಯವರು ಕೊಳಲು ವಾದನ ನಡೆಸಿಕೊಟ್ಟರು. ತಬಲಾದಲ್ಲಿ ನಿತಿನ್ ಹೆಗಡೆ ಕಲ್ಗದ್ದೆ ಸಹಕರಿಸಿದರು.
ಗೋಗಂಗಾರತಿ, ಗೋದೀಪೋತ್ಸವದ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು. ಸಂಜೆ ಸುರಿದ ಭಾರಿ ಮಳೆಯ ನಡುವೆಯೂ ಮಳೆಯನ್ನೂ ಲೆಕ್ಕಿಸದೆ ಅಪಾರ ಗೋಪ್ರೇಮಿಗಳು ಗೋದೀಪೋತ್ಸವದಲ್ಲಿ ಭಾಗವಹಿಸಿದ್ದರು. ಎಲ್ಲಾ ಭಕ್ತರಿಗೂ ಗೋಸೇವಾ ಪ್ರಸಾದವನ್ನು ನೀಡಲಾಯಿತು.