ಬಜಕೂಡ್ಲುವಿನಲ್ಲಿ ಗೋಪಾಷ್ಟಮೀ ಮಹೋತ್ಸವ

ಗೋಶಾಲಾ

ಬಜಕೂಡ್ಲು: ಅಮೃತಧಾರಾ ಗೋಶಾಲೆಯಲ್ಲಿ ಅ.೨೮ರಿಂದ ನ.೪ರವರೆಗೆ ನಡೆಯುವ ಗೋಮಾತಾಸಪರ್ಯಾ ಹಾಗೂ ಗೋಪಾಷ್ಟಮೀ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

 

ಗುರುವಂದನೆ, ದೇಶೀ ಹಸುವಿನ ಗೋಮಯನಿರ್ಮಿತ ಭವ್ಯ ಗೋವರ್ಧನ ಪರ್ವತದಲ್ಲಿ ಗೋಪಾಲಕೃಷ್ಣ ಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀನೃಸಿಂಹಕರಾವಲಂಬಸ್ತೋತ್ರ ಪಠಣ, ಗೋಪೂಜೆ, ತುಳಸೀಪೂಜೆ ಹಾಗೂ ದೀಪೋತ್ಸವ ಮಹಾಮಂಡಲ ಧರ್ಮಕರ್ಮ ಖಂಡದ ಸಂಯೋಜಕರಾದ ವೇ. ಮೂ. ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ವಲಯ, ಮಂಡಲ ಮತ್ತು ಗೋಶಾಲಾ ಪದಾಧಿಕಾರಿಗಳು ಹಾಗೂ ಗೋಭಕ್ತರ ಸಹಭಾಗಿತ್ವದಲ್ಲಿ ಸಂಪನ್ನಗೊಂಡಿತು.

 

ಕಾರ್ಯಕ್ರಮಗಳು ನ.೩ರವರೆಗೆ ಪ್ರತಿದಿನ ಸಾಯಂಕಾಲ ೪.೩೦ ರಿಂದ ೭.೦೦ ರ ತನಕ ನಡೆಯಲಿದ್ದು, ನ.೪ರಂದು ದಿನಪೂರ್ತಿ ಗೋಪಾಷ್ಟಮೀ ಮಹೋತ್ಸವ ನಡೆಯಲಿದೆ.

Author Details


Srimukha

Leave a Reply

Your email address will not be published. Required fields are marked *