ಬಜಕೂಡ್ಲು: ಅಮೃತಧಾರಾ ಗೋಶಾಲೆಯಲ್ಲಿ ಕಾರ್ತಿಕ ಶು.ಪಾಡ್ಯದಿಂದ ಅಷ್ಟಮೀವರೆಗೆ ನಡೆಯುವ ಗೋಮಾತಾಸಪರ್ಯಾ ಹಾಗೂ ಗೋಪಾಷ್ಟಮೀ ಮಹೋತ್ಸವ ದ ಏಳನೆಯ ದಿನದ ವಿವಿಧ ಕಾರ್ಯಕ್ರಮ ನಡೆಯಿತು.
ನ.೩ರ ಆದಿತ್ಯವಾರದಂದು ಸಾಯಂಕಾಲ ೪.೩೦ ರಿಂದ ಗುರುವಂದನೆ, ದೇಶೀ ಹಸುವಿನ ಗೋಮಯನಿರ್ಮಿತ ಭವ್ಯ ಗೋವರ್ಧನ ಪರ್ವತದಲ್ಲಿ ಗೋಪಾಲಕೃಷ್ಣ ಪೂಜೆ, ಭಕ್ತರಿಂದ ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀನೃಸಿಂಹಕರಾವಲಂಬಸ್ತೋತ್ರ ಪಠಣ, ಗೋಪೂಜೆ, ತುಳಸೀಪೂಜೆ ಹಾಗೂ ದೀಪೋತ್ಸವ ಗಳನ್ನು ನಡೆಸುವ ಮೂಲಕ ಸಂಪನ್ನಗೊಂಡಿತು.
ವಿಶೇಷವಾಗಿ ಶ್ರೀ ಲಕ್ಷ್ಮೀನೃಸಿಂಹಪೂಜೆ ಯನ್ನು ನೆರವೇರಿಸಲಾಯಿತು. ಪೆರ್ಲದ ಶ್ರೀದುರ್ಗಾ ಬಂಟ ಮಹಿಳಾ ಭಜನಾ ಸಂಘದವರು ಭಜನಾ ಸೇವೆ ನಡೆಸಿಕೊಟ್ಟರು. ಶ್ರೀಲಕ್ಷ್ಮೀನೃಸಿಂಹಪೂಜೆಯ ಯಜಮಾನತ್ವ ಸೇವೆಯನ್ನು ಮುಳ್ಳೇರಿಯಾ ಮಂಡಲ ಮುಷ್ಟಿಭಿಕ್ಷಾಪ್ರಧಾನರಾದ ಕುಂಬಳೆಯ ಡಾ.ಡಿ.ಪಿ.ಭಟ್ ದಂಪತಿಗಳು ವಹಿಸಿದರು.
ನ.೪ ಸೋಮವಾರದಂದು ದಿನಪೂರ್ತಿ ಗೋಪಾಷ್ಟಮೀ ಮಹೋತ್ಸವ ಸಂಭ್ರಮದಿಂದ ನಡೆಯಲಿದೆ.