ವಿದ್ಯಾರ್ಥಿವಾಹಿನಿಯಿಂದ ವಿಕಸನ ಕಾರ್ಯಾಗಾರ

ಮಠ

ಗಿರಿನಗರ: ಶ್ರೀರಾಮಚಂದ್ರಾಪುರಮಠದ ವಿದ್ಯಾರ್ಥಿವಾಹಿನಿಯಿಂದ ಹೊನ್ನಾವರ ಹಾಗೂ ಮುಳ್ಳೇರಿಯಾ ಮಂಡಲಗಳಲ್ಲಿ ವಿಕಸನ ಕಾರ್ಯಾಗಾರಗಳು ಭಾನುವಾರ ನಡೆಯಿತು.

ಹೊನ್ನಾವರ ಮಂಡಲದ ಕಾರ್ಯಾಗಾರದಲ್ಲಿ ೭೭ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಮಾಲತಿ ಪ್ರಕಾಶ, ವೇ. ಮೂ. ನೀಲಕಂಠ ಯಾಜಿ ಅವರು ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಮುಳ್ಳೇರಿಯಾ ಮಂಡಲದಲ್ಲಿ ೫೮ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಂಡೇಮನೆ ವಿಶ್ವೇಶ್ವರ ಭಟ್, ವಿದ್ಯಾ. ಎಸ್. ಅವರು ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಹೊನ್ನಾವರ ಮಂಡಲದ ಕಾರ್ಯಾಗಾರದಲ್ಲಿ ೮೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರು ಭಾಗವಹಿಸಿ, ಹದಿಹರೆಯದ ಮಕ್ಕಳ ಪಾಲಕರಾಗಿ ಮಾಡಬೇಕಾದ ಕರ್ತವ್ಯಗಳ ಮಾಹಿತಿಯನ್ನು ಪಡೆದುಕೊಂಡರು. ಗಂಡುಮಕ್ಕಳಿಗೆ ವೇ. ಮೂ. ನೀಲಕಂಠ ಯಾಜಿಯವರು ಅನುಷ್ಠಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.

ಪರಿಣಾಮಕಾರಿ ಅಧ್ಯಯನ ಕಲೆ, ಶ್ರೀಮಠದ ಪರಿಚಯ ಸಂಘಟನೆಯ ಮಹತ್ವ – ಅಗತ್ಯ, ಶ್ರೀಮಠದಿಂದ ಮಕ್ಕಳ ನಿರೀಕ್ಷೆ, ಶ್ರೀಮಠಕ್ಕೆ (ಸಂಘಟನೆಗೆ) ಮಕ್ಕಳಿಂದ ನಿರೀಕ್ಷೆ, ಹದಿಹರೆಯದ ಸಹಜ ಸಮಸ್ಯೆಗಳು ಅವುಗಳನ್ನು ಎದುರಿಸುವ ನಿಭಾಯಿಸುವ ಕೌಶಲವೃದ್ಧಿ ಎಂಬ ಮೂರು ಅಂಶಗಳ ಹೆಚ್ಚಿನ ಗಮನ ವಹಿಸಿ ಕಾರ್ಯಾಗಾರ ಆಯೋಜಿಸಲಾಗಿತ್ತು.

Author Details


Srimukha

Leave a Reply

Your email address will not be published. Required fields are marked *