ಬಜಕೂಡ್ಲು: ಅಮೃತಧಾರಾ ಗೋಶಾಲೆಯಲ್ಲಿರುವ ಗೋವುಗಳ ಉದರಂಭರಣಕ್ಕಾಗಿ ಹಸಿಹುಲ್ಲನ್ನು ಕತ್ತರಿಸಿ ಕೊಡುವ ಕಾರ್ಯಕ್ರಮ ಕಾಸರಗೋಡು ವಲಯಾಧ್ಯಕ್ಷ ಅರ್ಜುನಗುಳಿ ಶಂಕರನಾರಾಯಣ ಭಟ್ ನೇತೃತ್ವದಲ್ಲಿ ನ.೩ರಂದು ಕಾಸರಗೋಡು ವಿದ್ಯಾನಗರ ಕುರುಡರಶಾಲೆಯ ಎದುರಿರುವ ಮಹಾತ್ಮಗಾಂಧಿ ಕಾಲೊನಿ ಯಲ್ಲಿ ನಡೆಯಿತು.
ಕಾಸರಗೋಡು ವಲಯಾಧ್ಯಕ್ಷ ಯಸ್ ಯನ್ ಭಟ್ ಅರ್ಜುನಗುಳಿ, ವಲಯ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಮನ್ನಿಪ್ಪಾಡಿ, ಸಂಘಟನಾ ಕಾರ್ಯದರ್ಶಿ ಮಹೇಶ ಮನ್ನಿಪ್ಪಾಡಿ, ಶಿಷ್ಯ ಮಾಧ್ಯಮ ಪ್ರಧಾನ ಈಶ್ವರ ಭಟ್ ಕಿಳಿಂಗಾರು, ಗುಂಪೆ ವಲಯದ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ವೈ.ಕೆ.ಗೋವಿಂದ ಭಟ್, ಸುಲೋಚನಾ ಕಾರಿಂಜ ಹಳೆಮನೆ ಉಪಸ್ಥಿತರಿದ್ದು ಹುಲ್ಲು ಕತ್ತರಿಸುವಲ್ಲಿ ಸಹಕರಿಸಿದರು.
ಕಾಸರಗೋಡು ಸೇವಾ ಪ್ರಧಾನ ಮುರಳಿ ಮೊಗ್ರಾಲ್ ಅವರು ಯಂತ್ರದ ವ್ಯವಸ್ಥೆ ಮಾಡುವ ಜತೆಗೆ ಹುಲ್ಲು ಕಟಾವು ಮಾಡಿ ಸಹಕರಿಸಿದರು. ಮೇವು ಸಾಗಾಟ ಹಾಗೂ ಪೆಟ್ರೋಲ್ ಪ್ರಾಯೋಜಕತ್ವವನ್ನು ಕಾಸರಗೋಡು ವಲಯ ವಹಿಸಿತ್ತು. ವೈ ಕೆ ಗೋವಿಂದ ಭಟ್ ಹಾಗೂ ಡಾ. ರಾಜೇಶ್ವರಿ ಯೇತಡ್ಕ ತಿಂಡಿ ಹಾಗೂ ಪಾನೀಯ ವ್ಯವಸ್ಥೆ ಕಲ್ಪಿಸಿದರ್.