ವಿಟ್ಲ: ಮಂಗಳೂರು ಹವ್ಯಕ ಮಂಡಲಾಂತರ್ಗತ ವಿಟ್ಲ ಹವ್ಯಕ ವಲಯದ ೨೧ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪದೋನ್ನತಿ ಹೊಂದಿದ ವಲಯ ಕೋಶಾಧಿಕಾರಿಯವರ ಸಮ್ಮಾನ ಸಮಾರಂಭ ವಿಟ್ಲ ಬೊಬ್ಬೆಕೇರಿ ಸೌಪರ್ಣಿಕಾ ಸಭಾಭವನದಲ್ಲಿ ಭಾನುವಾರ ನಡೆಯಿತು.
ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿ, ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಸಂಘಟನೆ ಬಲಿಷ್ಠವಾಗಿದೆ. ಪರಂಪರೆಯ ಮಹತ್ವವನ್ನು ಸಾರುತ್ತ, ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಾಧನೆಯನ್ನು ಸಮಾಜಕ್ಕೆ ಅರ್ಪಿಸಿದ ಅವರು ದೇಸೀ ಗೋಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇದೀಗ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಲಿದ್ದಾರೆ ಎಂದು ಹೇಳಿದರು.
ಮಂಡಲ ಕೋಶಾಧ್ಯಕ್ಷರಾಗಿ ಪದೋನ್ನತಿ ಹೊಂದಿದ ಮುರಳಿಕೃಷ್ಣ ಕುಕ್ಕಿಲ ಅವರನ್ನು ಸಮ್ಮಾನಿಸಲಾಯಿತು. ಶಿಕ್ಷಣ, ಕರಾಟೆ, ಸಂಗೀತ ಇತ್ಯಾದಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೨೧ ವಿದ್ಯಾರ್ಥಿಗಳಾದ ಚಿನ್ಮಯಿ ಎ., ಸ್ನೇಹಭಾರತಿ ಯು., ನಿಶಾಂತ್‌ಗಣೇಶ್ ಭಟ್, ಮನ್ವಿತಾ ಎಸ್., ಮಾನಸ ಎಸ್., ಮಹೇಶ ಕೆ., ನವ್ಯಶ್ರೀ, ಅಮೃತಶಂಕರ್, ಸ್ನೇಹಭಾರತಿ ಯು., ಸ್ನೇಹ ಎಸ್., ಧನ್ಯಶ್ರೀ ಬಿ., ಗೋವಿಂದಪ್ರಸಾದ್ ಡಿ., ಕೇಶವಶ್ರವಣ, ಕೈಝನ್, ಆತ್ಮಶ್ರೀ, ರಂಜಿತ್ ಬಲಿಪಗುಳಿ, ರಚನಗಂಗಾ ಬಲಿಪಗುಳಿ, ಸಂಜಯ ಶರ್ಮ ಕೆ., ಪಿ.ಅನಿತಾಲಕ್ಷ್ಮೀ, ಅತುಲ್, ತನ್ವಿಗೌರಿ, ನಿಶಿತ್ ಗಣೇಶ್ ಭಟ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉಪಾಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್, ಮೂಲ ಮಠದ ರಮೇಶ್ ಭಟ್ ಸರವು, ಮಾತೃತ್ವಮ್‌ನ ಸುಮಾ ರಮೇಶ್, ಮಂಡಲ ಶಿಷ್ಯ ಮಾಧ್ಯಮ ಪ್ರಧಾನ ಶ್ರೀಪ್ರಕಾಶ್ ಕುಕ್ಕಿಲ, ವಲಯ ಉಪಾಧ್ಯಕ್ಷ ಗೋವಿಂದ ಭಟ್ ಕಜೆಹಿತ್ತಿಲು, ಕೋಶಾಧಿಕಾರಿ ಗಣೇಶಪ್ರಸಾದ ಬೀರಂತಡ್ಕ, ಸಂಘಟನ ಕಾರ್ಯದರ್ಶಿ ಸತೀಶ ಪಂಜಿಗದ್ದೆ, ವಿದ್ಯಾರ್ಥಿವಾಹಿನಿ ಪ್ರಧಾನ ಎನ್.ಶಿವರಾಮ ಭಟ್, ಪದಾಧಿಕಾರಿಗಳು ಮತ್ತು ಗುರಿಕ್ಕಾರರು ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ ಹವ್ಯಕ ವಲಯ ಅಧ್ಯಕ್ಷ ಚಂದ್ರಶೇಖರ ಭಟ್ ಪಡಾರು ಸ್ವಾಗತಿಸಿ, ಪ್ರಸ್ತಾವನೆಗೈದರು. ಪಿ.ಅನಿತಾಲಕ್ಷ್ಮೀ ನಿರೂಪಿಸಿದರು. ಅಂಕಿತಾ ನೀರ್ಪಾಜೆ ಪುರಸ್ಕೃತರ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ರಾಜನಾರಾಯಣ ಸರವು ವಂದಿಸಿದರು.