ಗುಂಪೆ: ಮುಳ್ಳೇರಿಯಾ ಮಂಡಲಾಂತರ್ಗತ ಗುಂಪೆ ವಲಯದ ಸಭೆ ಹಳಕೋಡ್ಲು ಘಟಕದ ಅಧ್ಯಕ್ಷರಾದ ಗಣಪತಿ ಭಟ್ ಅವರ ನಿವಾಸದಲ್ಲಿ ನ.೩ರಂದು ಜರಗಿತು.
ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್ ವಹಿಸಿದರು. ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಗತ ಸಭೆಯ ವರದಿ, ಮಹಾಮಂಡಲ ಸುತ್ತೋಲೆ,ಮಂಡಲ ವರದಿಗಳನ್ನು ಮಂಡಿಸಿದರು. ಪದಾಧಿಕಾರಿಗಳು ವಹಿಸಿಕೊಂಡಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ವಿಭಾಗವಾರು ಮಾಹಿತಿಗಳನ್ನು ನೀಡಿದರು.
ಜನವರಿ ತಿಂಗಳಿನಲ್ಲಿ ಸಮರ್ಪಿಸುವ ದೀಪಕಾಣಿಕೆ,ಗುರುಕುಲ ಕಾಣಿಕೆ, ಹಾಗೂ ಬೆಳೆ ಸಮರ್ಪಣೆ, ಉತ್ಸವ ಕಾಣಿಕೆಯ ಬಗ್ಗೆ ಮಾಹಿತಿ ನೀಡಿ ಮಾಹಿತಿ ನೀಡಿ, ಪ್ರತಿ ಮನೆಯ ಶಿಷ್ಯ ಭಕ್ತರು ಕಡ್ಡಾಯವಾಗಿ ಗುರಿಕ್ಕಾರರ ಮನೆಗೆ ಹೋಗಿ ಸಮರ್ಪಿಸುವ ನಿರ್ಣಯ ಕೈಗೊಳ್ಳಲಾಯಿತು.
ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ವಲಯಾಧ್ಯಕ್ಷರು ಕರೆ ನೀಡಿದರು.ಬಜಕ್ಕೂಡ್ಳು ಗೋಶಾಲೆಯಲ್ಲಿ ನಡೆಯುತ್ತಿರುವ ಗೋಮಾತಾ ಸಪರ್ಯಾ ಹಾಗೂ ಗೋಪಾಷ್ಟಮೀ ಮಹೋತ್ಸವದಲ್ಲಿ ವಲಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂದು ಆಹ್ವಾನಿಸಿದರು.
ಇತ್ತೀಚೆಗೆ ನಿಧನರಾದ ಹಳ್ಳಕೋಡ್ಳು ಘಟಕದ ಮೂಕಾಂಬಿಕಾ ಅಮ್ಮನವರ ಆತ್ಮಕ್ಕೆ ಸದ್ಗತಿ ಕೋರಿ ಶ್ರೀ ರಾಮ ತಾರಕ ಮಂತ್ರವನ್ನು ಪಠಿಸಲಾಯಿತು. ಈ ಸಂದರ್ಭದಲ್ಲಿ ಹಳ್ಳಕೋಡ್ಳು ಘಟಕದ ಬಾಳಿಕೆ ಎಸ್.ಜಯರಾಮ ಭಟ್ ಅವರು ವಿಷ್ಣು ಗುಪ್ತ ವಿದ್ಯಾಪೀಠಕ್ಕೆ ದೇಣಿಗೆ ಸಮರ್ಪಿಸಿದರು.
ಶಂಖನಾದ,ಗುರುವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮ, ರಾಮತಾರಕ ಮಂತ್ರ, ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.