ಹನೂರು: ಕೌದಳ್ಳಿಯಲ್ಲಿ ಗೋಫಲ ಟ್ರಸ್ಟ್‌ನ ಘಟಕಕ್ಕೆ ಶ್ರೀಕ್ಷೇತ್ರ ಸಿದ್ಧಗಿರಿ ಮಹಾಸಂಸ್ಥಾನ, ಕನ್ನೇರಿ ಮಠದ ಪೀಠಾಧಿಪತಿಗಳಾದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರು ಭೇಟಿ ನೀಡಿದರು.
2017 ರಲ್ಲಿ ಹನೂರು ತಾಲೂಕಿನಲ್ಲಿ ಬರಗಾಲ ಸಂದರ್ಭದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ರಾಮಚಂದ್ರಪುರ ಮಠವು ಗೋವುಗಳಿಗೆ ಮೇವು ಕೊಟ್ಟಿರುವುದನ್ನು ಗಮನಕ್ಕೆ ತರಲಾಯಿತು.
ಶ್ರೀ ರಾಮಚಂದ್ರಾಪುರ ಮಠವು ಈಗ ಗೋಫಲ ಟ್ರಸ್ಟಿನ ಮೂಲಕ ಸಾವಯವ ಗೊಬ್ಬರ ಘಟಕ ಮಾಡಿ ಗೋಪಾಲಕರಿಂದ ಉತ್ತಮ ಮೌಲ್ಯದೊಂದಿಗೆ ಸೆಗಣಿ ಖರೀದಿ ಮಾಡುವುದರ ಮೂಲಕ ಗೋಪಾಲಕರಿಗೆ ಆರ್ಥಿಕವಾಗಿ ಸಹಾಯವಾಗುವಂತೆ ಮಾಡಿರುವುದನ್ನು ಮತ್ತು ಮಹಿಳೆಯರು ಸೇರಿ 25 ರಷ್ಟು ಜನಗಳಿಗೆ ಉದ್ಯೋಗ ಸೃಷ್ಟಿ ಮಾಡಿರುವುದರ ಮಾಹಿತಿ ಪಡೆದರು.
ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳು ಕೃಷಿಕರಿಗೆ ಉತ್ತಮ ಸಾವಯವ ಪ್ರಾಮಾಣಿಕೃತ ಗೊಬ್ಬರ ಕೊಡುವುದರ ಬಗ್ಗೆ ಶ್ಲಾಘಿಸಿದರು. ಡಳ್ಳಿಯ ಭಾಗದಲ್ಲಿ ಗೋಮಾಳಗಳ ಬಗ್ಗೆಯೂ ವಿಚಾರಿಸಿದರು. ಗೋವಿನ ವಿಚಾರದಲ್ಲಿ ನಿಮ್ಮೊಂದಿಗೆ ನಾವು ಕೈಜೋಡಿಸುತ್ತೇವೆ ಎಂದು ಹೇಳಿದರು.