ಹವ್ಯಕ ಸಭಾಭವನ ಉದ್ಘಾಟನೆ

ಇತರೆ

ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಪುತ್ತೂರಿನಲ್ಲಿ ನೂತನವಾಗಿ ನಿರ್ಮಿಸಿರುವ ‘ಹವ್ಯಕ ಸಭಾಭವನ’ ದ ಉದ್ಘಾಟನಾ ಕಾರ್ಯಕ್ರಮ ಜನವರಿ 2 ಭಾನುವಾರ 11.30 ಕ್ಕೆ ನಡೆಯಲಿದೆ.

ಶ್ರೀರಾಮಚಂದ್ರಾಪುರಮಠದ ಗೋಕರ್ಣಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಲಿದ್ದು, ಕೇಂದ್ರ ಮಾಜಿ ಸಚಿವರಾದ ಡಿ.ವಿ ಸದಾನಂದ ಗೌಡ ಸಭಾಭವನವನ್ನು ಉದ್ಘಾಟಿಸಲಿದ್ದಾರೆ. ಅಭ್ಯಾಗತರಾಗಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ, ಸಚಿವರಾದ ಎಸ್ ಅಂಗಾರ, ಸುನಿಲ್ ಕುಮಾರ್, ಸಂಸದ ಹಾಗು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಶಾಸಕ ಸಂಜೀವ ಮಟಂದೂರು, ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ಪುತ್ತೂರು ನಗರಸಭಾಧ್ಯಕ್ಷ ಜೀವಂಧರ್ ಜೈನ್, ಹವ್ಯಕ ಮಹಾಮಂಡಲದ ಆರ್ ಎಸ್ ಹೆಗಡೆ, ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಅಧ್ಯಕ್ಷರಾದ ಕೇಶವಪ್ರಸಾದ ಮುಳಿಯ ಮುಂತಾದವರು ಭಾಗವಹಿಸಲಿದ್ದು, ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ.ಗಿರಿಧರ ಕಜೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ.

ಸಭಾಭವನ ಸಮರ್ಪಣಮ್ ಮೂಲಕವಾಗಿ ಈ ಸಭಾಭವನವು ಸಮಾಜಕ್ಕೆ ಸಮರ್ಪಿತವಾಗುತ್ತಿದೆ.

Author Details


Srimukha

Leave a Reply

Your email address will not be published. Required fields are marked *