ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಅಮೃತಧಾರ ಗೋಶಾಲೆಯಲ್ಲಿ ಪ್ರತಿ ವರ್ಷ ಶ್ರಾವಣ ಮಾಸದ ಶ್ರವಣ ನಕ್ಷತ್ರಕ್ಕೆ ಜರಗುವ ಗೋವರ್ಧನಧಾರಿ ಗೋಪಾಲಕೃಷ್ಣ ಪೂಜೆ,ಗೋಪೂಜೆ ಯು ಸೋಮವಾರ ವೇ.ಮೂ ಮಿತ್ತೂರು ತಿರುಮಲೇಶ್ವರ ಭಟ್ ರವರ ನೇತೃತ್ವದಲ್ಲಿ ನಡೆಯಿತು. ಶೀಮಠದ ಮ್ಯಾನೇಜರ್ ಶಿವಪ್ರಸಾದ್ ರವರು ಪೂಜಾಕೈಂಕರ್ಯ ವನ್ನು ನೆರವೇರಿಸಿದರು. ಸೇವಾಸಮಿತಿ ಯ ಅಧ್ಯಕ್ಷರಾದ ಹಾರಕರೆ ನಾರಾಯಣ ಭಟ್ ರವರು ಈ ಕಾರ್ಯಕ್ರಮ ದಲ್ಲಿ ಬಾಗವಹಿಸಿದರು.