ಗೋಆಶ್ರಮದಲ್ಲಿ ಗೋಪೂಜೆ

ಗೋಶಾಲಾ

ಮಾಲೂರು: ಹೊಸಕೋಟೆ ತಾಲೂಕು ಈ ಮುತ್ಸಂದ್ರ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಜಲಜಾಕ್ಷಿಯವರು ತಮ್ಮ ಜನ್ಮದಿನಾಚರಣೆಯನ್ನು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋಪೂಜೆಯೊಂದಿಗೆ ವಿಶೇಷವಾಗಿ ಆಚರಿಸಿದರು.

ಇದೇ ಸಂದರ್ಭದಲ್ಲಿ ಸಂಸ್ಕೃತಿ ಕಲಾ ಸಂಘ ಹೊಸಕೋಟೆ ಇವರ ವತಿಯಿಂದ ಕನ್ನಡ ರಾಜ್ಯೋತ್ಸವವನ್ನೂ ಆಚರಿಸಲಾಯಿತು. ಗೋಆಶ್ರಮದ ಕೃಷ್ಣ ಭಟ್ ಇವರು ರಾಜ್ಯೋತ್ಸವದ ಬಗ್ಗೆ ಮಾತಾನಾಡುವ ಜೊತೆಗೆ, ಗೋಆಶ್ರಮದ ಬಗ್ಗೆ ಹಾಗೂ ಭಾರತೀಯ ಗೋವಂಶದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ರಾಜಮ್ಮ, ಕರುಣಾ, ರವಿಪ್ರಕಾಶ್, ಗೋಆಶ್ರಮದ ರಾಮಚಂದ್ರ ಅಜ್ಜಕಾನ, ಲಕ್ಷ್ಮೀಶ, ಅನಂತ ಹೆಗಡೆ ಉಪಸ್ಥಿತರಿದ್ದರು.

Author Details

Avatar
Srimukha

Leave a Reply

Your email address will not be published. Required fields are marked *