ಪುಣ್ಯಕೋಟಿ ನಗರ: ದೇಶೀ ಹಸುಗಳ ಸಂವರ್ಧನೆ, ಸಂರಕ್ಷಣೆ ಧ್ಯೇಯವಾಗಿರಿಸಿಕೊಂಡು ಗೋಶಾಲೆಗಳ ಮೇಲೆ ಕಿಡಿಗೇಡಿಗಳ ಆಕ್ರಮಣ ಹೆಚ್ಚುತ್ತಿದ್ದ ಸಂದರ್ಭದಲ್ಲಿ, ಗೋ ರಕ್ಷಣೆಯ ದೀಕ್ಷಾಕಂಕಣ ತೊಟ್ಟು ಅಹರ್ನಿಶಿ ಸತ್ಯಾಗ್ರಹ ನಡೆಸಿ ಮಾಡಿದ ಚಳುವಳಿಯ ಸ್ಪೂರ್ತಿಯ ಹಿನ್ನೆಲೆಯಲ್ಲಿ ಗೋವಿನ ರಕ್ಷಣೆಯ ಸಂಕಲ್ಪದೊಂದಿಗೆ ಗೋವಿನೊಂದಿಗಿರುವ ನಿಕಟ ಸಂಬಂಧವನ್ನು ಸಾರ್ವತ್ರಿಕಗೊಳಿಸಲು ಹಮ್ಮಿಕೊಳ್ಳಲಾಗಿರುವ ಗೋ ಸೇವಾ ಮಾಸಾಚರಣೆಯು ದಕ್ಷಿಣ ಕನ್ನಡ ಜಿಲ್ಲೆಯ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ 14-01-2026 ಬುಧವಾರ ಸಂಜೆ 5.00 ಗಂಟೆಗೆ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ.
ಫೆ. 12 ರ ವರೆಗೆ ಒಂದು ತಿಂಗಳ ಕಾಲ ನಡೆಯುವ ಈ ಮಾಸಾಚರಣೆಯ ವಿಶೇಷ ಆಕರ್ಷಣೆಯಾಗಿ ಪ್ರತಿದಿನ ಸಂಜೆ ದೀಪ ಪ್ರಜ್ವಲನೆಯೊಂದಿಗೆ ಭಜನಾ ಕಾರ್ಯಕ್ರಮ ಆರಂಭವಾಗಲಿದೆ. ಪ್ರತೀ ದಿನ ಸಂಜೆ 5.00 ರಿಂದ 6.00 ಗಂಟೆಯ ತನಕ ಮುಡಿಪು ಭಗವದ್ಗೀತಾ ಪಾರಾಯಣ ಬಳಗದಿಂದ ಗೀತಾ ಜ್ಞಾನ ಯಜ್ಞ – ಭಗವದ್ಗೀತಾ ಪಾರಾಯಣ ನಡೆಯಲಿದೆ.
ಮಾತ್ರವಲ್ಲದೆ ಗೋಮಾಸಾಚರಣೆಯ ಅವಧಿಯಲ್ಲಿ ಭಕ್ತಿ, ಸಂಸ್ಕೃತಿಗಳ ಸಂಗಮವನ್ನು ಪ್ರತಿಬಿಂಬಿಸುವ ಸಂಗೀತ, ನೃತ್ಯ, ಹರಿಕಥಾ ಸತ್ಸಂಗ, ಯಕ್ಷಗಾನವೇ ಮೊದಲಾದ ಕಾರ್ಯಕ್ರಮಗಳು ವಿವಿಧ ದಿನಗಳಲ್ಲಿ ನಡೆಯಲಿವೆ.
ಗೋಮಾತೆಯ ಸೇವೆಯಲ್ಲಿ ಸಾರ್ವಜನಿಕರು ತೊಡಗಿಸಿಕೊಂಡು ಗೋಪೂಜೆ, ಗೋಗ್ರಾಸ ಸಮರ್ಪಣೆ, ಗೋಸೇವೆಗೆ ಧನಸಹಾಯವನ್ನು ನೀಡುವ ಅವಕಾಶವಿದೆ.
ಗೋಸೇವಾ ಮಾಸಾಚರಣೆ ಆಯೋಜನಾ ಸಮಿತಿ
ಅಮೃತಧಾರಾ ಗೋಶಾಲೆ, ಪುಣ್ಯಕೋಟಿನಗರ
*ಉದ್ಘಾಟನಾ ಸಮಾರಂಭ*
ದಿನಾಂಕ 14-01-2026ನೆಯ ಬುಧವಾರ ಸಂಜೆ ಘಂಟೆ 5.00ಕ್ಕೆ
ಸಭಾಧ್ಯಕ್ಷರು : ಶ್ರೀ ಚಂದ್ರಹಾಸ ಪೂಂಜ, ಕಿಲ್ಲೂರುಗುತ್ತು.
ಆಡಳಿತ ಮೊಕ್ತೇಸರರು, ಇನೋಳಿ ಶ್ರೀಸೋಮನಾಥ ದುರ್ಗಾಪರಮೇಶ್ವರೀ ದೇವಸ್ಥಾನ ದೇವಂದಬೆಟ್ಟ,
ಉದ್ಘಾಟಕರು
: ಶ್ರೀ ದೀನ್ ರಾಜ್ ಕಳವಾರು ಭಜನಾ ಸಂಕೀರ್ತನಕಾರರು ಹಾಗೂ ತರಬೇತುದಾರರು.
ಮುಖ್ಯ ಅತಿಥಿಗಳು :
ಶ್ರೀ ದೇವಿಪ್ರಸಾದ್ ಪೊಯ್ಯತ್ತಾಯರು, ಆಡಳಿತ ಮೊಕ್ತೇಸರರು. ಶ್ರೀ ಕ್ಷೇತ್ರ ಕಣಂತೂರು.
: ಶ್ರೀ ಪದ್ಮನಾಭ ರೈ ಯಾನೆ ಮಂಜು ಭಂಡಾರಿಯವರು ನಾರ್ಯಗುತ್ತು.
ಗಡಿ ಪ್ರಧಾನರು ಹಾಗೂ ಅನುವಂಶಿಕ ಮೊಕ್ತೇಸರರು ಶ್ರೀ ಕ್ಷೇತ್ರ ಕಣಂತೂರು
: ಶ್ರೀ ಪೆರಡೆ ತಿರುಮಲೇಶ್ವರ ಭಟ್, ಅಧ್ಯಕ್ಷರು, ಹವ್ಯಕ ವಲಯ ಮುಡಿಪು
: ಶ್ರೀ ಶೈಲೇಂದ್ರ ಭರತ್ ನಾಯ್ಕ ನಚ್ಚ, ಆಡಳಿತ ಮೊಕ್ತೇಸರರು, ಶ್ರೀ ಉಳ್ಳಾಲ್ತಿ ಕ್ಷೇತ್ರ ಕೂಟತ್ತಜೆ.
: ಡಾ. ಹರಿಕಿರಣ್ ಟಿ. ಬಂಗೇರ, ಖ್ಯಾತ ಎಲುಬು ತಜ್ಞರು, ಮೊಕ್ತೇಸರರು, ಶ್ರೀ ಉಳ್ಳಾಲ್ತಿ ಕ್ಷೇತ್ರ ಕೂಟತ್ತಜೆ
: ಶ್ರೀ ಸುಭಾಷ್ ಧರ್ಮನಗರ ಉಪಾಧ್ಯಕ್ಷರು ಬ್ರಹ್ಮಶ್ರೀ ನಾರಾಯಣಗುರು ಸೇವಾಸಮಿತಿ ಗ್ರಾಮಚಾವಡಿ,
: ಶ್ರೀ ಚಂದ್ರಹಾಸ ಕಣಂತೂರು, ಅಧ್ಯಕ್ಷರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು.
: ಶ್ರೀ ಸುರೇಶ್ ಆಚಾರ್ಯ ದೇರಳಕಟ್ಟೆ ಅಧ್ಯಕ್ಷರು ವಿಶ್ವಕರ್ಮ ಸಂಘ (ರಿ.) ಮುಡಿಪು
: ಶ್ರೀ ಪೂವಪ್ಪ ಕಡಂಬಾರು. ನಿವೃತ್ತ ಯೋಧರು, ನಿರ್ದೇಶಕರು ಕೈರಂಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ),
ಸಂಜೆ ಘಂಟೆ 6.30ರಿಂದ *ಕುಣಿತ ಭಜನೆ* ಶಾರದಾಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ
ನಿರ್ದೇಶನ : ಶ್ರೀ ದೀನ್ ರಾಜ್ ಕಳವಾರು
14-01-2026ನೆಯ ಬುಧವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಕಟ್ಟೆ ಫ್ರೆಂಡ್ಸ್, ಮುಡಿಪು
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ದೀನ್ ರಾಜ್ ಕಳವಾರು ಇವರ ನಿರ್ದೇಶನದಲ್ಲಿ ಶಾರದಾಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ
15-01-2026ನೆಯ ಗುರುವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಮಿತ್ತಾವು ಫ್ರೆಂಡ್ಸ್, ಮಿತ್ತಾವು.
ಭಜನಾ ಸೇವೆ – 6.00ರಿಂದ 8:00: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮುಡಿಪು
16-01-2026ನೆಯ ಶುಕ್ರವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಕುರ್ನಾಡು ಫ್ರೆಂಡ್ಸ್ ಸರ್ಕಲ್ (ರಿ.), ಕೆ. ಎಫ್. ಸಿ ಮಹಿಳಾ ಸಂಘ
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ವೈದ್ಯನಾಥ ಭಜನಾ ಮಂಡಳಿ ಹೂಹಾಕುವಕಲ್ಲು ಸನ್ನಿಧಿ
17-01-2026ನೆಯ ಶನಿವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ವೈದ್ಯನಾಥ ಸೇವಾ ಸಂಘ, ಕಣಂತೂರು
18-01-2026ನೆಯ ಆದಿತ್ಯವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಶ್ರೀ ಕೃಷ್ಣ ಭಜನಾ ಮಂಡಳಿ,
ಸರ್ವೋದಯ ಯುವಕ ಮಂಡಲ(ರಿ), ಸುದರ್ಶನನಗರ ಪಜೀರು
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀರಾಮ ಭಜನಾ ಮಂಡಳಿ ಕೋಟೆಕಣಿ, ಸಜಿಪಪಡು
19-01-2026ನೆಯ ಸೋಮವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಜನನಿ ಸೇವಾ ಸಮಿತಿ, ತಂಜರೆ
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ದುರ್ಗಾಲಾಯಿ ಸೇವಾ ಸಮಿತಿ, ದುರ್ಗಾಲಾಪು, ಬಾಳೆಪುಣಿ
ಶ್ರೀದೇವಿ ಸೇವಾ ಸಮಿತಿ ಗರಡಿಪಳ್ಳ, ಮುಡಿಪು
20-01-2026ನೆಯ ಮಂಗಳವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿ(ರಿ), ಕುರ್ನಾಡು
ಭಜನಾ ಸೇವೆ – ಸಂಜೆ 6.00ರಿಂದ 8:00: ಬಂಟರ ಸಂಘದ ಭಜನಾ ತಂಡ ಮೊಂಟೆಪದವು ವಲಯ, ನರಿಂಗಾನ, ಕೈರಂಗಳ
ಶ್ರೀಕೃಷ್ಣ ಭಜನಾ ಮಂದಿರ ಕೃಷ್ಣನಗರ ನೆತ್ತಿಲ
21-01-2026ನೆಯ ಬುಧವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಸ್ನೇಹ ಫ್ರೆಂಡ್ಸ್ ಆಯೋಧ್ಯಾನಗರ ಮುಡಿಪು
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ರಾಮಾರ್ಪಣ ಭಜನಾ ತಂಡ, ಮುಡಿಪು
ಶ್ರೀ ಮಹಾಗಣಪತಿ ಭಜನಾ ಮಂಡಳಿ ಮದಂಗಲ್ಲುಕಟ್ಟೆ
22-01-2026ನೆಯ ಗುರುವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಹಿಂದೂ ಜಾಗರಣ ವೇದಿಕೆ ಮುಡಿಪು ವಲಯ
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ, ಸುಳ್ಯಮೆ, ಪೊಯ್ಯತ್ತಬೈಲ್
ಶ್ರೀ ಪಾಂಡುರಂಗ ಭಜನಾ ಮಂಡಳಿ, ಮುದುಂಗಾರುಕಟ್ಟೆ
23-01-2026ನೆಯ ಶುಕ್ರವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ಪೂರ್ಣಗಿರಿ ಮುಲಾರ, ಕೊಣಾಜೆ
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ಸತ್ಯಸಾಯಿ ಸೇವಾ ಸಮಿತಿ, ಮುಡಿಪು
ಸಂಘ ಮಿತ್ರರು ಮಂಗಳಾನಗರ ನಾಟೆಕಲ್ಲು
24-01-2026ನೆಯ ಶನಿವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಶ್ರೀ ರಕ್ತೇಶ್ವರಿ ಬಳಗ, ಸೋಮೇಶ್ವರ
ಭಜನಾ ಸೇವೆ – ಸಂಜೆ 6.00ರಿಂದ 8:00: ವೀರ ಮಾರುತಿ ಮಂದಿರ ಶಾಂತನಗರ, ನರಿಂಗಾನ
25-01-2026ನೆಯ ಅದಿತ್ಯವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಶ್ರೀರಾಮ ಫ್ರೆಂಡ್ಸ್ ಸರ್ಕಲ್ ಕಕ್ಕೆಮಜಲು
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಕುರುಡಪದವು
26-01-2026ನೆಯ ಸೋಮವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಅಮ್ಮೆಂಬಳ ಸೇವಾ ಸಹಕಾರಿ ಸಂಘ (ನಿ.) ಮುಡಿಪು ಸಿಬ್ಬಂಧಿ ವರ್ಗ
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ಕೃಷ್ಣ ಭಜನಾ ಮಂಡಳಿ (ರಿ.)
ತುಳಸಿ ಮಾತೃ ಮಂಡಳಿ, ಸುದರ್ಶನನಗರ, ಪಜೀರು
27-01-2026ನೆಯ ಮಂಗಳವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಶ್ರೀ ಅರಸು ಮುಂಡಿತ್ತಾಯ ಸೇವಾ ಸಮಿತಿ ಅಡ್ಕ, ಪಜೀರು
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ಉಳ್ಳಾಲ್ತಿ ಅಮ್ಮನವರ ಸೇವಾ ಸಮಿತಿ ಕೂಟತ್ತಜೆ
28-01-2026ನೆಯ ಬುಧವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಶ್ರೀ ಪಾಂಡುರಂಗ ಭಜನಾ ಮಂಡಳಿ, ಮುದುಂಗಾರುಕಟ್ಟೆ
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ಮಜಿ ಮಹಮ್ಮಾಯಿ ಸೇವಾ ಸಮಿತಿ, ಬೋಳಿಯಾರು
29-01-2026ನೆಯ ಗುರುವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಶ್ರೀ ಉಳ್ಳಾಲ್ತಿ ಅಮ್ಮನವರ ಸೇವಾ ಸಮಿತಿ ಕೂಟತ್ತಜೆ
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀರಾಮ ಭಜನಾ ಮಂಡಳಿ, ಚೌಕ, ನರಿಂಗಾನ
30-01-2026ನೆಯ ಶುಕ್ರವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಅನುಗ್ರಹ ಚೇಳೂರು ಯುಗಾದಿ ಉತ್ಸವ ಸಮಿತಿ, ಚೇಳೂರು
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ನಾಗಬ್ರಹ್ಮ ಭಜನಾ ಮಂಡಳಿ, ಪಟ್ಟೋರಿ
ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಅಸೈಗೋಳಿ
31-01-2026ನೆಯ ಶನಿವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ನಾಗದೇವತಾ ರಕ್ತೇಶ್ವರಿ ಸೇವಾ ಸಮಿತಿ ನೀರ್‌ದೀಪಿಕಟ್ಟೆ, ಪೂಪಾಡಿಕಲ್ಸ್
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀಕೃಷ್ಣ ಭಜನಾ ಮಂಡಳಿ ಗೋವರ್ಧನಗಿರಿ ನೂಜಿ, ಮಂಚಿ
01-02-2026ನೆಯ ಆದಿತ್ಯವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಪಾದಲ್ಪಾಡಿ ಫ್ರೆಂಡ್ಸ್,
ಓಂ ಶಕ್ತಿ ಫ್ರೆಂಡ್ಸ್ ಬಟ್ರೆಬೈಲು
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀರಾಮ ಭಜನಾ ಮಂಡಳಿ ಒಡಿಕ್ಕಿನಕಟ್ಟೆ ಬೋಳಿಯಾರು
02-02-2026ನೆಯ ಸೋಮವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಅಸೈಗೋಳಿ
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ದೇರಳಕಟ್ಟೆ
03-02-2026ನೆಯ ಮಂಗಳವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಓಂ ಶ್ರೀ ಗಣೇಶ ಯುವಕ ಮಂಡಲ ಹಾಗೂ ಯುವತಿ ಮಂಡಲ, ಪಾಣೇಲ
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ರಕ್ತೇಶ್ವರಿ ಮಹಿಳಾ ಭಜನಾ ಸೇವಾ ಸಮಿತಿ ರಕ್ತೇಶ್ವರಿ ಕಟ್ಟೆ, ವಿದ್ಯಾನಗರ
04-02-2026ನೆಯ ಬುಧವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ವೈದ್ಯನಾಥ ಸೇವಾ ಸಮಿತಿ ಕಣಂತೂರು
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ದೀನ್‌ರಾಜ್ ಕಳವಾರು ಮತ್ತು ಬಳಗ ಮಂಗಳೂರು
05-02-2026ನೆಯ ಗುರುವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಯುವ ಬಳಗ (ರಿ.) ಬೋಳಿಯಾರು
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ನಾಗದೇವತಾ ರಕ್ತೇಶ್ವರಿ ಸನ್ನಿಧಿ ಕುಕ್ಕುದಕಟ್ಟೆ, ಹೂಹಾಕುವಕಲ್ಲು
06-02-2026ನೆಯ ಶುಕ್ರವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ನಮೋ ಫ್ರೆಂಡ್ಸ್ ಕೆಂಜಿಲ, ಇರಾ
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ಅರ್ಧನಾರೀಶ್ವರ ದೇವಸ್ಥಾನ ಭಜನಾ ತಂಡ ಸಂಪಿಗೆದಡಿ, ಹರೇಕಳ
07-02-2026ನೆಯ ಶನಿವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಮಜಿ ಮಹಮ್ಮಾಯಿ ಸೇವಾ ಸಮಿತಿ,
ವೀರ ಕೇಸರಿ ಫ್ರೆಂಡ್ಸ್,
ಮಹಿಳಾ ಸಮಿತಿ ಮಜಿ.
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿ (ರಿ.) ಕುರ್ನಾಡು
08-02-2026ನೆಯ ಆದಿತ್ಯವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಶ್ರೀ ಕೃಷ್ಣ ವರಲಕ್ಷ್ಮಿ ವೇದಿಕೆ, ಧರ್ಮಕ್ಕಿ ಕೈರಂಗಳ
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ
ಶ್ರೀ ಕೃಷ್ಣ ವರಲಕ್ಷ್ಮಿ ವೇದಿಕೆ, ಧರ್ಮಕ್ಕಿ ಕೈರಂಗಳ
09-02-2026ನೆಯ ಸೋಮವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ಪಟ್ಟೋರಿ
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ಶಾರದಾಂಭ ಭಜನಾ ಮಂಡಳಿ ಶಾರದಾನಗರ, ಮೊಂಟೆಪದವು,
ಶ್ರೀ ಜನಾರ್ಧನ ಬೆಳಾಲು ಮತ್ತು ಬಳಗ ಮಂಗಳೂರು
10-02-2026ನೆಯ ಮಂಗಳವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಭುವಿ ಯುವಕ ಮಂಡಲ, ಬೀರೂರು
ಭಜನಾ ಸೇವೆ – ಸಂಜೆ 6.00ರಿಂದ 8:00: ನೃತ್ಯಲಹರಿ (ರಿ.) ಪಜೀರು
11-02-2026ನೆಯ ಬುಧವಾರ
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಶ್ರೀ ವೈದ್ಯನಾಥ ಫ್ರೆಂಡ್ಸ್ ಮತ್ತು ಹೂಹಾಕುವಕಲ್ಲು ಸನ್ನಿಧಿ, ಹೂಹಾಕುವಕಲ್ಲು
ಭಜನಾ ಸೇವೆ – ಸಂಜೆ 6.00ರಿಂದ 8:00: ಶ್ರೀ ವಿಶ್ವಕರ್ಮ ಸಂಘ (ರಿ.) ಮುಡಿಪು
12-02-2026
ಗೋಸೇವೆ – ಬೆಳಿಗ್ಗೆ 7:೦೦ ರಿಂದ: ಭಗತ್ ಲಯನ್ಸ್, ಶಿವನಗರ ಪೂಪಾಡಿಕಲ್ಲ್
ಭಜನಾ ಸೇವೆ – ಸಂಜೆ 6.00ರಿಂದ 8:00: ವಸುಧೈವ ಭಜನಾ ಕುಟುಂಬ, ಅಖಂಡ ಭಾರತ
*ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ*
ದಿನಾಂಕ 17-01-2026ನೆಯ ಶನಿವಾರ ರಾತ್ರಿ ಘಂಟೆ 8.00ರಿಂದ
*ಗೀತಾ ಸಂಗೀತ ವೈಭವ*
ವಿದುಷಿ ಶ್ರೀಮತಿ ಶಿಲ್ಪಾ ವಿಶ್ವನಾಥ ಭಟ್ “ರಾಗಸುಧಾ ಸಂಗೀತ ಶಾಲೆ ಮಂಜೇಶ್ವರ” ಇವರ ವಿದ್ಯಾರ್ಥಿಗಳಿಂದ
ದಿನಾಂಕ 24-01-2026ನೆಯ ಶನಿವಾರ ರಾತ್ರಿ ಘಂಟೆ 8.00ರಿಂದ
*ಸತ್ಸಂಗ ಸಂಗೀತಧಾರೆ*
ಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಕಾರಂತ ಮಂಗಳೂರು ಇವರಿಂದ
ದಿನಾಂಕ 26-01-2026ನೆಯ ಸೋಮವಾರ ರಾತ್ರಿ ಘಂಟೆ 8.00ರಿಂದ
*ನೃತ್ಯ ಸಂಭ್ರಮ*
ನೃತ್ಯಗುರು ವಿದುಷಿ ಶ್ರೀಮತಿ ರೇಶ್ಮಾ ನಿರ್ಮಲ್ ಭಟ್ ಮತ್ತು
ಶಿಷ್ಯ ವೃಂದದವರಿಂದ
ನೃತ್ಯಲಹರಿ ನಾಟ್ಯಾಲಯ (ರಿ.) ಪಜೀರು
ದಿನಾಂಕ 29-01-2026ನೆಯ ಗುರುವಾರ ರಾತ್ರಿ ಘಂಟೆ 8.00ರಿಂದ
*ಶ್ರೀಮತೀ ಪರಿಣಯ*
ಶ್ರೀ ಶೇಣಿ ಮುರಳಿಯವರಿಂದ ಹರಿಕಥಾ ಸತ್ಸಂಗ
ದಿನಾಂಕ 03-02-2026ನೆಯ ಮಂಗಳವಾರ ರಾತ್ರಿ ಘಂಟೆ 8.00ಕ್ಕೆ
ಅಮೃತಧಾರಾ ಗೋಶಾಲೆಯ ವಾರ್ಷಿಕೋತ್ಸವದ ಪ್ರಯುಕ್ತ
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಗಾನ ಬಯಲಾಟ
*ಶ್ರೀ ತುಳಸಿ*
ದಿನಾಂಕ 08-02-2026ನೆಯ ಆದಿತ್ಯವಾರ ರಾತ್ರಿ ಘಂಟೆ 8.00ಕ್ಕೆ
*ವೀಣಾ ಮೃದಂಗ ವೈಭವ*
“ಸಂಗೀತ ಕಲಾ ದಂಪತಿ” ವಿದುಷಿ ವೈ.ಜಿ. ಶ್ರೀಲತಾ ನಿಕ್ಷಿತ್ ಮತ್ತು ವಿದ್ವಾನ್ ಪುತ್ತೂರು ನಿಕ್ಷಿತ್ ಇವರಿಂದ
ದಿನಾಂಕ 12-02-2026ನೆಯ ಗುರುವಾರ
ರಾತ್ರಿ ಘಂಟೆ 8.00ಕ್ಕೆ
*ದೀಪೋತ್ಸವ*
ಪ್ರತೀ ದಿನ ಸಂಜೆ 5.00ರಿಂದ 6.00ರ ತನಕ
ಗೀತಾ ಜ್ಞಾನ ಯಜ್ಞ ಭಗವದ್ಗೀತಾ ಪಾರಾಯಣ ಬಳಗ, ಮುಡಿಪು ಇವರಿಂದ
*ಭಗವದ್ಗೀತಾ ಪಾರಾಯಣ ಸೇವೆ*
*ಗೋಶಾಲೆಯಲ್ಲಿ ಸೇವಾ ವಿವರ*:
* ಗೋಸೇವಾ ಮಾಸಾಚರಣೆಯಲ್ಲಿ ಗೋವುಗಳಿಗೆ ಕುಂಕುಮಾರ್ಚನೆ, ಗೋಪೂಜೆ, ಗೋಗ್ರಾಸ ನೀಡಲು ಅವಕಾಶವಿದೆ.
* ಗೋಶಾಲೆಯಲ್ಲಿ ಗೋಪೂಜೆ ಮಾಡಿಸಲು ಅವಕಾಶವಿದೆ.
* ಗೋವುಗಳ ಹಸಿವೆ ನೀಗಿಸಲು ಹಿಂಡಿ, ಕ್ಯಾಟಲ್ ಫೀಡ್, ಹಸಿಹುಲ್ಲು, ಒಣಗಿದ ಬೈಹುಲ್ಲು ಬಾಳೆಹಣ್ಣು ಮತ್ತು ತರಕಾರಿಗಳನ್ನು ನೀಡಲು ಅವಕಾಶವಿದೆ.
+ ಬಾಳೆದಿಂಡು ಮತ್ತು ಒಣ ಅಡಿಕೆ ಹಾಳೆಗಳನ್ನು ಹಸುಗಳು ತುಂಬಾ ಇಷ್ಟಪಡುತ್ತವೆ.
+ ಗೋಸೇವಾ ಚಟುವಟಿಕೆಗಳಿಗೆ ಸಹಾಯವಾಗುವಂತೆ ಉದಾರ ಧನಸಹಾಯವನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು.
* ಕುಟುಂಬದ ಸದಸ್ಯರ ಜನ್ಮದಿನ, ವಿವಾಹ ವರ್ಧಂತಿ ಹಾಗೂ ಇತರ ಶುಭ ಸಮಾರಂಭಗಳಲ್ಲಿ ಹಸುಗಳಿಗೆ ಸೇವೆ ಮಾಡಬಲ್ಲಂತಹ ಸಹಾಯಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು.
* ಗೋವುಗಳನ್ನು ಸಾಕುವ ನಮ್ಮ ಪ್ರಯತ್ನಕ್ಕೆ ತಾವುಗಳು ತಮ್ಮ ಇಷ್ಟಮಿತ್ರರಿಂದಲೂ ಸಹಾಯವನ್ನು ಕೊಡಿಸಿಕೊಡಬೇಕೆಂದು ತಮ್ಮಲ್ಲಿ ಕೋರಿಕೆ.
* ದಿನಾಂಕ 16-01-2026, 23-01-2026, 30-01-2026, 06-02-2026ನೆಯ ಶುಕ್ರವಾರದಂದು ಸಂಜೆ ಘಂಟೆ 6.30ಕ್ಕೆ ಸಾಮೂಹಿಕ ವಿಶೇಷ ಗೋಪೂಜೆ ನಡೆಯಲಿರುವುದು
ನಮ್ಮ ಗೋಶಾಲೆಯ ಬ್ಯಾಂಕ್ ಖಾತೆಯ ವಿವರ:
ಅಮ್ಮೆಂಬಳ ಸೇವಾ ಸಹಕಾರಿ ಸಂಘದಲ್ಲಿ ಖಾತೆ ವಿವರ
S.B. A/c No: 2879
AMRITHADHARA GAUSHALE
A/c No. 0771101024293 IFSC: CNRB0000771
Canara Bank, Ammembal Branch