ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಪ್ರವಾಹಪೀಡಿತ ಗ್ರಾಮಗಳ ಸಂತ್ರಸ್ತರಿಗೆ ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಪರಿಹಾರ ಸಾಮಗ್ರಿ ವಿತರಿಸಲಾಯಿತು.
ಹುಬ್ಬಳ್ಳಿಯ ಪ್ರಸಾದ ಪಾಟೀಲ ಸಹಯೋಗದಲ್ಲಿ ರಾಮಚಂದ್ರಾಪುರ ಮಠದ ಕಾರ್ಯಕರ್ತರು ಡೋಂಗ್ರಿ ಪಂಚಾಯತ್ ವ್ಯಾಪ್ತಿಯ ಹೆಗ್ಗಗಣೆ, ನೇರಳೆಬೈಲ್, ಹೊಸಗದ್ದೆ, ಡೋಂಗ್ರಿ, ಬಿದರಳ್ಳಿ, ಸುಂಕನಾಳ ಪಂಚಾಯತ್ ವ್ಯಾಪ್ತಿಯ ರಾಜನಗುಳಿ, ಹೊಳೆಗದ್ದೆ, ಸುಂಕದಗುಳಿ, ಹಿಲ್ಲೂರು ಪಂಚಾಯ್ತಿ ವ್ಯಾಪ್ತಿಯ ತೊಗಸೆ, ಹೊಸಕಂಬಿ, ಹೊಳೆಮಕ್ಕಿ, ಹಡಿನಗದ್ದೆ, ಎಕ್ಕೆಗುಳಿ, ಮಾಸ್ತಿಕಟ್ಟೆ, ಆಚಾರಿಮನೆಕೇರಿ, ಮೊಗಟಾ ಪಂಚಾಯ್ತಿಯ ಮಂಗನಖಾನ, ಮೊರಳ್ಳಿ, ಆಂಡ್ಲೆ, ಮೊಗಟಾ ಬ್ರಹ್ಮೂರು ಪ್ರದೇಶದ ಸಂತ್ರಸ್ತರ ಮನೆಗಳಿಗೆ ತೆರಳಿ ಪರಿಹರ ಸಾಮಗ್ರಿ ಹಸ್ತಾಂತರಿಸಿದರು.
ಅಕ್ಕಿ, ತೊಗರಿಬೇಳೆ, ರವೆ, ರುಚಿ ಗೋಲ್ಡ್ ಎಣ್ಣೆ, ಬೆಂಕಿಪೊಟ್ಟಣ, ಜೀರಿಗೆ, ಸಾಸಿವೆ, ಸಾಂಬಾರ್ ಪುಡಿ, ಚಹಾ ಪುಡಿ, ಪಾರ್ಲೆಜಿ ಬಿಸ್ಕೇಟ್, ದನಿಯಾ ಪುಡಿ, ಮೆಣಸಿನಪುಡಿ, ಹಾಲಿನ ಪುಡಿ, ಉಪ್ಪು, ಬೆಡ್‍ಶೀಟ್, ಲುಂಗಿ, ಟಿ-ಷರ್ಟ್, ಟವೆಲ್, ನೈಟಿಗಳನ್ನು ಸಂತ್ರಸ್ತರ ಅಗತ್ಯಕ್ಕೆ ಅನುಸಾರವಾಗಿ ವಿತರಿಸಲಾಯಿತು.
ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಆಶಯದಂತೆ ಮಠದ ಕಾರ್ಯಕರ್ತರಾದ ವಿ.ಡಿ.ಭಟ್ಟ, ಗಣಪತಿ ನಾಗೇಂದ್ರ ಭಟ್ಟ ಜಡ್ಡಿಗದ್ದೆ, ಶ್ರೀ ಭರವೇಶ್ವರ ಗಣಪಯ್ಯ ಭಟ್ಟ, ಗೋವಿಂದ ಬಟ್ಟ, ಉದಯ ಪುಟ್ಟಯ್ಯ ಶೇರುಗಾರ, ಪುಟ್ಟಾ ಸಿದ್ದಿ, ಮಾದೇವ ನಾಯಕ ಸಂತ್ರಸ್ತರ ಮನೆಗಳಿಗೆ ತೆರಳಿ ಪರಿಹಾರ ವಸ್ತುಗಳನ್ನು ಹಸ್ತಾಂತರಿಸಿದರು.
ಡೋಂಗ್ರಿ ಪಂಚಾಯ್ತಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಉಪಾಧ್ಯಕ್ಷೆ ಗೌರಿ ಸಿದ್ದಿ, ಸುಂಕನಾಳ ಪಂಚಾಯತ್ ಅಧ್ಯಕ್ಷೆ ಶೈಲಾ ಅಗೇರ್, ಹಿಲ್ಲೂರು ಪಂಚಾಯ್ತಿ ಅಧ್ಯಕ್ಷೆ ಗೀತಾ ನಾಯ್ಕ, ಮೊಗಟಾ ಪಂಚಾಯ್ತಿ ಅಧ್ಯಕ್ಷೆ ಭಾಗ್ಯಶ್ರೀ ನಾಯಕ ಅವರು ಫಲಾನುಭವಿಗಳನ್ನು ಗುರುತಿಸುವಲ್ಲಿ ಸಹಕರಿಸಿದರು.