ಮುಳ್ಳೇರಿಯಾ: ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಶ್ರೀ ಮುಳಿಯಾರು ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ, ಕಾಸರಗೋಡು ಜಿಲ್ಲಾಅಂಧತ್ವ ನಿವಾರಣಾಸಮಿತಿ ಇವರ ಆಶ್ರಯದಲ್ಲಿ ಚಂದ್ರಗಿರಿ ಹವ್ಯಕ ವಲಯದ ವತಿಯಿಂದ ಕಣ್ಣಿನ ಪೊರೆ ತಪಾಸಣಾ ಉಚಿತ ಶಿಬಿರವು ಮುಳಿಯಾರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅ.೨೦ರಂದು ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಮುಳಿಯಾರು ಶ್ರೀಸುಬ್ರಹ್ಹಣ್ಯ ಕ್ಷೇತ್ರದ ಮೊಕ್ತೇಸರರಾದ ಸೀತಾರಾಮ ಬಳ್ಳುಳ್ಳಾಯ ನಡೆಸಿದರು. ಶಿಬಿರದಲ್ಲಿ ನೇತ್ರತಜ್ಞರಾಗಿ ಡಾ ಉನೈಸ ಸಹಕರಿಸಿದರು. ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆದರು. ಅರ್ಜುನಗುಳಿ ಯಸ್.ಯನ್.ಭಟ್ ಶುಭ ಹಾರೈಸಿದರು.
ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ಆಡಳಿತಾಧಿಕಾರಿಗಳಾದ ಡಾ. ಯಂ.ಶ್ರೀಧರ ಭಟ್ ಪ್ರಾಸ್ತಾವನೆಗೈದರು. ಚಂದ್ರಗಿರಿ ವಲಯಾಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಮೀನಗದ್ದೆ ಸ್ವಾಗತಿಸಿ, ವಂದಿಸಿದರು. ವಲಯದ ಸಹಾಯ ವಿಭಾಗ ಪ್ರಧಾನ ಡಾ ಶ್ರೀಕ್ರಷ್ಣರಾಜ ಕಾಟಿಪ್ಪಳ್ಳ ಕಾರ್ಯಕ್ರಮ ನಿರೂಪಿಸಿದರು.