ಮುಳ್ಳೇರಿಯಾ ಮಂಡಲದಿಂದ ಮುಂದುವರಿದ ಗೋವಿಗಾಗಿ ಮೇವು ಕಾರ್ಯಕ್ರಮ

ಸುದ್ದಿ

ಬಜಕೂಡ್ಲು: ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿರುವ ಗೋವುಗಳ ಉದರಂಭರಣಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಹಾಳಾಗಿ ಹೋಗುವ ಹಸಿ ಹುಲ್ಲನ್ನು ಶ್ರಮಸೇವೆಯ ಮೂಲ ಕತ್ತರಿಸಿ ಕೊಡುವ ಮಹಾ ಕಾರ್ಯ ಅ.೨೦ರ ಭಾನುವಾರ ವಿದ್ಯಾನಗರ ಕುರುಡರಶಾಲೆಯ ಮುಂಭಾಗದ ಮಹಾತ್ಮಗಾಂಧಿ ಕಾಲೊನಿಯಲ್ಲಿ ನಡೆಯಿತು.

 

ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಸಾಮಾಜಮುಖೀ ಕಾರ್ಯಕ್ರಮಗಳಲ್ಲಿ ಒಂದಾದ ಗೋವಿಗಾಗಿ ಮೇವು ಮೇವಿಗಾಗಿ ನಾವು ಎರಡನೇ ಕಾರ್ಯಕ್ರಮ ಕಾಸರಗೋಡು ವಲಯಾಧ್ಯಕ್ಷ ಅರ್ಜುನಗುಳಿ ಶಂಕರನಾರಾಯಣ ಭಟ್ ನೇತೃತ್ವದಲ್ಲಿ ಗೋಪ್ರೇಮಿಗಳಿಂದ ನಡೆಯಿತು. ಬಜಕೂಡ್ಲು ಗೋಶಾಲೆಯ ಗಣರಾಜ ಕಡಪ್ಪು ನೇತೃತ್ವದಲ್ಲಿ ಗೋಶಾಲೆಗೆ ಕಳುಹಿಸಿ ಕೊಡಲಾಯಿತು.

ಡಾ. ವೆಂಕಟತೇಜಸ್ವಿ ಅವರು ತಮ್ಮ ಹಿತ್ತಲಿನ ಮೇವನ್ನು ತಂದುದಲ್ಲದೆ ಹುಲ್ಲು ಕತ್ತರಿಸುವಲ್ಲಿ ಸಹಕರಿಸಿದರು. ತೆಕ್ಕೆಕೆರೆ ಈಶ್ವರ ಚಂದ್ರ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಸವಿನೆನಪಿಗಾಗಿ ಕಾರ್ಯಕರ್ತರಿಗೆಲ್ಲಾ ಸಿಹಿತಿಂಡಿ ವಿತರಿಸಿದುದಲ್ಲದೆ ಹುಲ್ಲು ಕತ್ತರಿಸುವಲ್ಲಿ ಸಹಕರಿಸಿದರು. ಕಾಸರಗೋಡು ಸೇವಾ ಪ್ರಧಾನ ಮುರಳಿ ಮೊಗ್ರಾಲ್ ಹುಲ್ಲು ಕಟಾವು ಮಾಡಿ ಸಹಕರಿಸಿದರು. ಮೇವು ಸಾಗಾಟಕ್ಕೆ ಹಾಗೂ ಪೆಟ್ರೋಲ್ ಪ್ರಾಯೋಜಕತ್ವವನ್ನು ಅಂಬಿಕಾ ವೆಂಕಟೇಶ ದಂಪತಿಗಳು ಬೆಂಗಳೂರು ಮಾಡಿದರು.

 

ಕಾಸರಗೋಡು ಹವ್ಯಕ ಸೇವಾಭಾರತಿಯ ಕಾರ್ಯದರ್ಶಿ ಕೃಷ್ಣಪ್ರಸಾದ ಕೋಟೆಕಣಿ, ಡಾ.ರಾಜಗೋಪಾಲಭಟ್ ಬಾಜ, ಮುಳ್ಳೇರಿಯಾ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಬಿಂಧು-ಸಿಂಧು ಪ್ರಧಾನ ಈಶ್ವರ ಭಟ್ ಉಳುವಾನ, ಕಾಸರಗೋಡು ವಲಯ ಉಪಾಧ್ಯಕ್ಷ ಬಿ.ಮಹಾಬಲ ಭಟ್, ಸಂಘಟನಾ ಕಾರ್ಯದರ್ಶಿ ಮಹೇಶ ಮನ್ನಿಪ್ಪಾಡಿ, ಕೋಶಾಧಿಕಾರಿ ರಮೇಶ ಭಟ್, ಸಹಾಯ ಪ್ರಧಾನ ಟಿ. ಯನ್. ಬಾಲಕೃಷ್ಣ ಭಟ್, ಶಿಷ್ಯ ಮಾಧ್ಯಮ ಪ್ರಧಾನ ಈಶ್ವರ ಭಟ್ ಕಿಳಿಂಗಾರು, ಗುರಿಕ್ಕಾರ ಶಿರಂತಡ್ಕ ಗೋಪಾಲಕೃಷ್ಣ ಭಟ್, ಸವಿತಾ ಯಸ್.ಯನ್.ಭಟ್, ಚಂದ್ರಾವತಿ ಯನ್ ಭಟ್, ದಿವ್ಯಾಮಹೇಶ, ದಿಶಾ, ಗುಂಪೆ ವಲಯದ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ಉಪಸ್ಥಿತರಿದ್ದು ಹುಲ್ಲು ಕತ್ತರಿಸುವಲ್ಲಿ ಸಹಕರಿಸಿದರು.

Author Details


Srimukha

Leave a Reply

Your email address will not be published. Required fields are marked *