ಇಂಗ್ಲಿಷ್ ಸಂವಹನ ಕೌಶಲ್ಯ ವೃದ್ಧಿ – ಕಾರ್ಯಾಗಾರ

ಸುದ್ದಿ

ಬದಿಯಡ್ಕ: ಶ್ರೀ ಭಾರತೀ ವಿದ್ಯಾಪೀಠ ಶಾಲೆಯಲ್ಲಿ ಅಧ್ಯಾಪಕರಿಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಇಂಗ್ಲಿಷ್ ಸಂವಹನ ಕೌಶಲ್ಯ ವೃದ್ಧಿ – ಕಾರ್ಯಾಗಾರ ನಡೆಯಿತು.

 

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಂಗಡಿಮೊಗರು ಸರಕಾರೀ ಪ್ರೌಢ ಶಾಲೆಯ ಅಧ್ಯಾಪಕ ರವಿಶಂಕರ್ ನೆಗಳಗುಳಿ ಅಧ್ಯಾಪಕನಾದವನು ನಿರಂತರ ವಿದ್ಯಾರ್ಥಿ ಎಂಬುದನ್ನು ಉಲ್ಲೇಖಿಸುತ್ತಾ ಆಗಾಗ ಇಂತಹ ಕಾರ್ಯಾಗಾರವನ್ನು ಏರ್ಪಡಿಸುತ್ತಿರುವ ಆಡಳಿತ ಮಂಡಳಿಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಹಾಡು, ಕಥೆ, ನಾಟಕ ಮೂಲಕ ಇಂಗ್ಲೀಷ್ ಸಂವಹನಕ್ಕೆ ಉತ್ತೇಜನ ನೀಡಿದರು.

 

ಶಾಲಾಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಇವರು ಸ್ವಾಗತಿಸಿ, ಶಿಕ್ಷಕಿ ಸರೋಜಾ ಕಾನತ್ತಿಲ ವಂದಿಸಿದರು.

Author Details


Srimukha

Leave a Reply

Your email address will not be published. Required fields are marked *