ಶ್ರೀರಾಮಚಂದ್ರಾಪುರಮಠದ ನೂತನ ಅಂಗಸಂಸ್ಥೆ ‘ಸಮರಸ’ದಲ್ಲಿ ಗಣಪತಿ ಹವನ ಸಂಪನ್ನ

ಸುದ್ದಿ

ಮುಳ್ಳೇರಿಯಾ: ಮುಳ್ಳೇರಿಯ ಹವ್ಯಕ ಮಂಡಲ ಚಂದ್ರಗಿರಿ ವಲಯದಲ್ಲಿ ಮುಳ್ಳೇರಿಯದ ದೇಲಂಪಾಡಿ ಪರಿಸರದಲ್ಲಿ ನಿರ್ಮಾಣವಾಗಲಿರುವ ‘ಸಮರಸ’ ಭೂಮಿಯಲ್ಲಿ 24.11.2018ರಂದು ಗಣಪತಿ ಹವನ ಸಂಪನ್ನವಾಯಿತು.

 

ವಲಯ ವೈದಿಕ ಪ್ರಧಾನರಾದ ಶ್ರೀ ನರಸಿಂಹರಾಜ ಪಯ ಅವರು ಗಣಪತಿ ಹವನದ ನೇತೃತ್ವ ವಹಿಸಿದರು. ಸಮರಸ ಟ್ರಸ್ಟಿನ ಅಧ್ಯಕ್ಷರಾದ ಡಾ. ವಿ ವಿ. ರಮಣ ಧ್ವಜಾರೋಹಣ ನೆರವೇರಿಸಿದರು. ಆ ಬಳಿಕ ಭಜನ ರಾಮಾಯಣ ಪಠಣ ನಡೆಯಿತು.

 

ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮರಸ ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ರಾಜಗೋಪಾಲ ಕೈಪ್ಪಂಗಳ ಯೋಜನೆಯ ಸಮಗ್ರ ಮಾಹಿತಿಗಳನ್ನು ವಿವರಿಸಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿಗಳನ್ನಿತ್ತರು.
ಸಮರಸ ಟ್ರಸ್ಟ್ ನ ಸ್ಥಳಕ್ಕೆ ಬೇಕಾದ ನಾಮಫಲಕವನ್ನು ಶ್ರೀ ಜಿ. ಕೆ. ಭಟ್ ಕುಳೂರು ನೀಡಿದರು.

 

ಶ್ರೀಮಠದ ನಿರ್ಮಾಣ ವಿಭಾಗ ಕಾರ್ಯದರ್ಶಿ ಶ್ರೀ ಕೆ. ನಾರಾಯಣ ಭಟ್ ಬೆಳ್ಳಿಗೆ, ಮಹಾಮಂಡಲ ಉಲ್ಲೇಖ ವಿಭಾಗ ಶ್ರೀ ಗೋವಿಂದ ಬಳ್ಳಮೂಲೆ, ಮಂಡಲ ಮತ್ತು ವಲಯ ಪದಾಧಿಕಾರಿಗಳು, ಗುರಿಕ್ಕಾರರು ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *