ಗಿರಿನಗರ: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಹಾಸಂಕಲ್ಪಗಳಲ್ಲಿ ಒಂದಾದ ರಾಮಾಯಣ ಪಾರಾಯಣ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಡೆಸುತ್ತಿರುವುದು ವಿಶೇಷವಾಗಿದೆ.
ಪ್ರತಿಯೊಬ್ಬನ ಹೃದಯದಲ್ಲಿ ರಾಮನು ಆಡಿದಾಗ ಬದುಕು ಪಾವನವಾಗುತ್ತದೆ ಎಂಬ ನಿಟ್ಟಿನಲ್ಲಿ ಶ್ರೀಸಂಸ್ಥಾನದವರು ಶಿಷ್ಯಕೋಟಿಗೆ ಪ್ರತಿನಿತ್ಯ ಸಾಧ್ಯವಾದಷ್ಟು ರಾಮಾಯಣ ಪಾರಾಯಣ ಮಾಡುವಂತೆ ಕರೆ ನೀಡಿದ್ದರು.
ಇದರ ಫಲ ಎಂಬಂತೆ ಮುಳ್ಳೇರಿಯಾ ಮಂಡಲದ ಸುಳ್ಯ ವಲಯದ ಅರಂಬೂರು ವೇದ ವಿದ್ಯಾಲಯದ ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಪ್ರಸಾದ, ಪ್ರಜ್ವಲ್ ಕುಮಾರ್, ಆಶ್ರಿತರಾಮ, ಶ್ರೀಹರಿ ಭಟ್ಟ, ಆದಿತ್ಯ, ರವಿ ಕೃಷ್ಣ, ಹರ್ಷ ಕೃಷ್ಣ ಭಟ್, ಚಂದ್ರಗಿರಿ ವಲಯದ ಅನಿರುದ್ಧ ಶರ್ಮ ಅವರು ರಾಮಾಯಣ ಪಾರಾಯಣ ನಡೆಸುತ್ತಿದ್ದಾರೆ.
೧೦೦೮ ರಾಮಾಯಣ ಪಾರಾಯಣ ಸಂದರ್ಭದಲ್ಲಿ ಅರಂಬೂರು ಶ್ರೀ ಕಾಂಚಿಕಾಮಕೋಟಿ ವೇದವಿದ್ಯಾಲಯ ಭಾರದ್ವಾಜ ಆಶ್ರಮದ ಏಳು ಮಂದಿ ವಿದ್ಯಾರ್ಥಿಗಳು ಶ್ರೀ ಗುರು ಸಂಕಲ್ಪ ಸಿದ್ಧಿಗಾಗಿ ಪಾರಾಯಣ ನಡೆಸುತ್ತಿದ್ದಾರೆ. ವ್ಯವಸ್ಥಾಪಕ ರವಿಶಂಕರ್ ಭಾರದ್ವಾಜ್, ಅಧ್ಯಾಪಕ ವೇ. ಮೂ. ವೆಂಕಟೇಶ ಶಾಸ್ತ್ರಿ ಪಾರಾಯಣ ನಡೆಸುತ್ತಿರುವುದು ವಿಶೇಷವಾಗಿದೆ.