ಇದು ಮರದ ಕತೆಯಲ್ಲ, ರಾಮನ ಕತೆ.

ಸುದ್ದಿ

ಬೆಂಗಳೂರು: ಬೀಜ ಬೆಳೆದು ಮರ, ಮರ ಬೆಳೆದು ಹೆಮ್ಮರವಾಗಬೇಕು. ಇದು ಮರದ ಕತೆಯಲ್ಲ, ರಾಮನ ಕತೆ. ನನಗೆ ತಂದೆಯಿಂದ ರಾಜ್ಯದ ಹಕ್ಕು ಬಂದಿದೆ. ಅದನ್ನು ನಿನಗೆ ಸಮರ್ಪಣೆ ಮಾಡುವೆ ಎಂದ ಭರತ. ’ತಾ’ ಎಂದರೆ ತಾತ, ಮುತ್ತಾತರಿಗೆ ಗೊತ್ತಿದೆ. ಈಚೆಗೆ ಕೊಡು ಎಂದರ್ಥ. ಕೊ ಎಂದರೆ ಕೊಡು. ಅದು ಕುಲಕೋಟಿಗೂ ಗೊತ್ತಿಲ್ಲ. ತನ್ನದಲ್ಲ ಎನ್ನುವ ಸ್ವಭಾವ ಭರತನಂಥವರದ್ದು ಎಂದು ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

 

ಅವರು ಗಿರಿನಗರ ಶ್ರೀರಾಮಾಶ್ರಮದಲ್ಲಿ ನಡೆದ ಧಾರಾ ರಾಮಾಯಣದ ೫೪ನೇ ದಿನ ಪ್ರವಚನ ನೀಡಿದರು.

 

ನೀನು ರಾಜ್ಯದ ಚಕ್ರವರ್ತಿ, ನಾನು ವನವಾಸಿ ಎಂದ ರಾಮ. ಭರತ – “ನೀನು ಉತ್ತಮ ಅಶ್ವ. ನಾನು ಕತ್ತೆ. ನೀನು ಗರುಡ, ನಾನು ಸಾಮಾನ್ಯ ಪಕ್ಷಿ.” ನಾವು ಇನ್ನೊಬ್ಬರನ್ನು ಆಶ್ರಯಿಸಿ ಬದುಕುವುದು ತುಚ್ಛವಾದುದು. ದಶರಥ ಕೃಷಿಕ, ಶ್ರೀರಾಮನೇ ಕಲ್ಪವೃಕ್ಷ. ’ಜೀವ’ನ ಇಚ್ಛೆ ಈಡೇರುವಂಥದ್ದಲ್ಲ. ನಮ್ಮ ಬದುಕು ಮರಣದಲ್ಲಿ ಮುಕ್ತಾಯ. ನೀನು ನಾಡು ಬಿಟ್ಟು ಕಾಡು ಸೇರಿದುದು ಎಲ್ಲರಿಗೂ ನಷ್ಟ ಉಂಟುಮಾಡಿದೆ- ಭರತ ಎಂದರು.

 

ವಿದ್ಯೆಯಲ್ಲಿ ನೀನು ಹಿರಿಯವ, ನಾನು ಬಾಲಕ. ಸ್ಥಾನದಲ್ಲೂ ನಾನು ಚಿಕ್ಕವ. – ಭರತ. ಅಮ್ಮನ ಪಾಪವನ್ನು ಕಳೆ ಎಂದ ಭರತ. ಎಲ್ಲರೂ ಶ್ರೀರಾಮನಲ್ಲಿ ಅಯೋಧ್ಯೆಗೆ ಬರುವಂತೆ ಬೇಡಿಕೊಂಡರು. ಶ್ರದ್ಧೆಯಿಂದ ಶ್ರಾದ್ಧ ಮಾಡಿದರೂ ಗಯಾದಲ್ಲಿ ಸೇರಬೇಕು. ’ಪುತ್’ ಎಂದರೆ ನರಕ, ’ರ’ ಎಂದರೆ ಕಾಪಾಡು. ತಂದೆಯನ್ನು ನರಕದಿಂದ ಕಾಪಾಡುವವನೇ ಪುತ್ರ. ಮನುಷ್ಯರಿಗೆ ನೀನು ರಾಜನಾಗು; ನಾನು ಪ್ರಾಣಿಗಳಿಗೆ ರಾಜರಾಜನಾಗುತ್ತೇನೆ ಎಂದ ರಾಮ ಎಂದು ತಿಳಿಸಿದರು.

 

ಶ್ವೇತಚ್ಛತ್ರಗಳು ಕಾಡಿನ ಶುಭ ವೃಕ್ಷಗಳು. ಹಣಕ್ಕಾಗಿ, ಧರ್ಮಕ್ಕಾಗಿ ಹೆಚ್ಚು ಪ್ರಯತ್ನ ಮಾಡಬಾರದು ಎಂದರು ಜಾಬಾಲಿ. ಚಿತ್ರಕ್ಕೆ ಚೌಕಟ್ಟಿದ್ದರೆ ಚೆಂದ. ಪ್ರಪಂಚವು ನಂಬಿಕೆಯ ಮೇಲೆ ನಿಂತಿದೆ. ಸತ್ಯವೇ ನಿಷ್ಠೆ, ರಾಜವೃತ್ತ. ಸತ್ಯವೇ ಈಶ್ವರ, ಧರ್ಮ. ಎಲ್ಲದಕ್ಕೂ ಸತ್ಯವೇ ಮೂಲ, ನೆಲೆಗಟ್ಟು. ಲೋಭ, ಮೋಹಕ್ಕಾಗಿ ಸತ್ಯವನ್ನು ಮೀರಲಾರೆ ಎಂದ ರಾಮ ಎಂದರು.

Author Details


Srimukha

Leave a Reply

Your email address will not be published. Required fields are marked *