ಗೋಸ್ವರ್ಗ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಸಣೂರಿನ ಪ್ರಕೃತಿ ಕಾಲೇಜಿನ ವಿದ್ಯಾರ್ಥಿಗಳು ಗೋಸ್ವರ್ಗಕ್ಕೆ ಭೇಟಿ ನೀಡಿದ್ದರು.
ರಾತ್ರಿ ಆಗಿದ್ದರೂ ಕೂಡ ಉತ್ಸುಕತೆಯಿಂದ ಗೋಸ್ವರ್ಗವನ್ನು ವೀಕ್ಷಿಸಿ ಸಂಪೂರ್ಣ ಮಾಹಿತಿ ಪಡೆದರು. ಗೋಸ್ವರ್ಗದ ಪ್ರಶಾಂತ ಪರಿಸರದಲ್ಲಿ ರಾತ್ರಿ ವಿಶ್ರಾಂತಿ ಮಾಡಿ ಬೆಳಿಗ್ಗೆ ಪುನಹ ಗೋಸ್ವರ್ಗಕ್ಕೆ ತೆರಳಿ ಇನ್ನಷ್ಟು ಮಾಹಿತಿಗಳನ್ನು ಪಡೆದರು. ಯುವ ಸಮೂಹದ ಈ ಉತ್ಸುಕತೆ, ದೇಸೀ ಗೋವುಗಳ ಕುರಿತು ಇರುವ ಕಾಳಜಿ ನಿಜಕ್ಕೂ ಶ್ಲಾಘನೀಯ.
ಯುವ ಸಮುದಾಯಕ್ಕೆ ದೇಸೀ ಗೋವುಗಳ ಬಗೆಗೆ ಮಾಹಿತಿ ನೀಡುವ ಸದುದ್ದೇಶದಿಂದ ಗೋಸ್ವರ್ಗಕ್ಕೆ ಕರೆತಂದ ಕಾಲೇಜಿನ ಅಧ್ಯಾಪಕರಾದ ಟಿ.ವಿ ವೆಂಕಟಗಿರಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ.