ಗೋವುಗಳ ಮೇವುಗಾಗಿ ಮುಳಿಹುಲ್ಲು ಸಂಗ್ರಹ

ಗೋಶಾಲಾ

ಬಜಕೂಡ್ಲು: ಅಮೃತಧಾರಾ ಗೋಶಾಲೆಯ ಗೋವುಗಳ ಮೇವುಗಾಗಿ ಮುಳಿಹುಲ್ಲು ಸಂಗ್ರಹಿಸುವ ಶ್ರಮದಾನವು ಜ.೧೨ ದಂದು ಪೆರ್ಲ ಪರಿಸರದಲ್ಲಿ ಜರಗಿತು.

ಶ್ರಮದಾನದಲ್ಲಿ ಅಕ್ಷಯ ಯುವಕ ಮಂಡಲ ಬಿರ್ಮುಲೆಯ ಮಾಧವ, ಪ್ರಕಾಶ್ ಕಾಮತ್, ರವಿ, ರಮೇಶ, ಸದಾಶಿವ, ವಿನೋದ, ಗಂಗಾಧರ, ರೋಹಿತ್ ಕುಲಾಲ್, ರಮೇಶ ನಾಯಕ್, ಹಾಗು ಹುಲ್ಲು ಕತ್ತರಿಸುವ ಯಂತ್ರದಲ್ಲಿ ಉತ್ತರ ಪ್ರದೇಶದ ಗೌತಮ್, ಬಿಮಲ್,ಶೇರ್ ಸಿಂಗ್ ಹಾಗು ಅನಿಲ್ ಮತ್ತು ಹುಲ್ಲು ಸಾಗಾಟದಲ್ಲಿ ಶಿವಪ್ರಸಾದ್ ಟ್ರನ್ಸಪೋರ್ಟನ ರಾಮಣ್ಣ ಸಹಕರಿಸಿದರು.

ಶ್ರಮದಾನದಲ್ಲಿ ಮುಳ್ಳೇರಿಯಾ ಮಹಾಮಂಡಲದ ಅಧ್ಯಕ್ಷರು, ಎಣ್ಮಕಜೆ ಹವ್ಯಕ ವಲಯದ ಅಧ್ಯಕ್ಷ, ಕಾರ್ಯದರ್ಶಿ, ಮಾತೃಪ್ರಧಾನೆ ಹಾಗು ಗುರುಭಕ್ತರು, ಅಮೃತಧಾರಾ ಗೋಶಾಲೆಯ ಅಧ್ಯಕ್ಷ ಕೋಶಾಧಿಕಾರಿ ಹಾಗು ಪದಾಧಿಕಾರಿಗಳು ಗೋಭಕ್ತರೆಲ್ಲ ಸೇರಿ ೩೧ ಮಂದಿ ಶ್ರಮದಾನವಿತ್ತರು.

Author Details


Srimukha

Leave a Reply

Your email address will not be published. Required fields are marked *