ಗೋವಿನ ಬಗ್ಗೆ ಸಮಾಜದಲ್ಲಿ ಉತ್ತಮ ಸ್ಪಂದನೆ ಇದೆ: ರಾಜರಾಜೇಶ್ವರಿ ಬೆಂಗಳೂರು

ಮಾತೃತ್ವಮ್

ಕೆದಿಲ ಗ್ರಾಮದ ಬಡೆಕ್ಕಿಲ ಶಂಕರ ಭಟ್,ಶಂಕರಿ ಅಮ್ಮ ಇವರ ಪುತ್ರಿಯಾದ ರಾಜರಾಜೇಶ್ವರಿ ಅವರು ಶಿರಂಕಲ್ಲು ಉಬರು ಮನೆತನದ ಗಣಪತಿ ಭಟ್ ಅವರನ್ನು ವಿವಾಹವಾಗಿ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಅನ್ನಪೂರ್ಣೇಶ್ವರಿ ವಲಯದ ಆರೋಗ್ಯ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಕಾಲ ಒಂದು ಹಸುವನ್ನು ಸಾಕುವ ಹೊಣೆ ಹೊತ್ತು ಮಾಸದ ಮಾತೆಯ ಗುರಿ ತಲುಪಿದವರು.
ಹಲವಾರು ವರ್ಷಗಳಿಂದ ಶ್ರೀ ಮಠದ ನಿರಂತರ ಸಂಪರ್ಕದಿಂದಾಗಿ ಮಠದ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ರಾಜರಾಜೇಶ್ವರಿ ಈ ಹಿಂದೆ ಮುಷ್ಟಿ ಭಿಕ್ಷಾ ಕಾರ್ಯದರ್ಶಿಯಾಗಿ ಮನೆ ಮನೆ ಸಂಪರ್ಕ ಮಾಡಿದವರು.

ಅಭಯಾಕ್ಷರ ಅಭಿಯಾನದ ಮೂಲಕ ಸುಮಾರು ಐವತ್ತು ಸಾವಿರದಷ್ಟು ಸಹಿ ಸಂಗ್ರಹಿಸಿದ್ದಾರೆ.ಹಾಲಿನ ಮಹತ್ವವನ್ನು ಸಾರುವ ಹಾಲು ಹಬ್ಬದಲ್ಲೂ ಪಾಲ್ಗೊಂಡ ಅನುಭವವಿದೆ.
ಸಾವಿರದ ಸುರಭಿ ಯೋಜನೆಯ ಮೂಲಕ ಒಂದು ಲಕ್ಷ ಸಂಗ್ರಹಿಸಿ ಲಕ್ಷಭಾಗಿನಿಯಾಗಿ ಶ್ರೀಗಳಿಂದ ಬಾಗಿನವನ್ನೂ ಸ್ವೀಕರಿಸಿದ್ದಾರೆ.

“ಶ್ರೀ ಮಠದ ಸಂಪರ್ಕವಿರುವುದರಿಂದ ನಮ್ಮ ಮಠದ ವಿವಿಧ ಯೋಜನೆಗಳ ಬಗ್ಗೆ ಇತರ ಸಮಾಜದವರಿಗೂ ಮನದಟ್ಟು ಮಾಡಿಸಿ,ಅವರಿಗೂ ಗೋವುಗಳ ಶ್ರೇಷ್ಠತೆಯನ್ನು ಪರಿಚಯಿಸಿದೆ.ಇದು ಮಾಸದ ಮಾತೆಯ ಗುರಿ ತಲುಪುವಂತೆ ಮಾಡಲು ತುಂಬಾ ಸಹಕಾರಿಯಾಯಿತು” ಎನ್ನುವ ರಾಜರಾಜೇಶ್ವರಿಗೆ ಇತ್ತೀಚೆಗೆ ಭಾರತೀಯ ಗೋ ತಳಿಗಳ ಪ್ರಾಮುಖ್ಯತೆಯನ್ನು ಸಮಾಜ ಅರ್ಥ ಮಾಡಿಕೊಳ್ಳುತ್ತಿದೆ.’ಗೋವು ಎಂದಾಗ ನಾವು’ ಎಂದು ಗೋ ಸೇವಾ ಕೈಂಕರ್ಯಕ್ಕೆ ಸಂತಸದಿಂದಲೇ ಕೈ ಜೋಡಿಸುತ್ತಿರುವುದು ಖುಷಿ ತಂದ ವಿಚಾರ.

ಗೋ ಮಾತೆಯ ಸೇವೆಗಾಗಿ ಹೊರಟಾಗ ಹಲವಾರು ಜನರ ಪರಿಚಯವಾಯಿತು.ಅವರೆಲ್ಲರಲ್ಲೂ ಹಸುವಿನ ಬಗ್ಗೆ ಪೂಜ್ಯ ಭಾವನೆ ಮೂಡಿದಾಗ ತಾನು ಮಾಡುವ ಈ ಸೇವೆಯಲ್ಲಿ ಸಾರ್ಥಕತೆಯಿದೆ ಎಂಬ ನೆಮ್ಮದಿ ಮೂಡುತ್ತದೆ ಎನ್ನುತ್ತಾರೆ ಇವರು.

ಮಾಸದ ಮಾತೆಯಾಗಿ ಗುರಿ ತಲುಪುವಲ್ಲಿ ಪತಿಯ ಸಹಕಾರವೂ ಇದೆ ,ಇನ್ನು ಮುಂದೆಯೂ ಗೋಸೇವೆಯಲ್ಲಿ ಮುಂದುವರಿಯ ಬೇಕು.ಮಠದ ಇತರ ಯೋಜನೆಗಳಲ್ಲೂ ಸಾಧ್ಯವಾದಷ್ಟು ತೊಡಗಿಸಿ ಕೊಳ್ಳಬೇಕು ಎಂಬುದೇ ರಾಜರಾಜೇಶ್ವರಿಯವರ ಗುರಿ.

Author Details


Srimukha

Leave a Reply

Your email address will not be published. Required fields are marked *