ಗಾಯತ್ರಿ ಮಂತ್ರದ ಮಹಿಮೆಯನ್ನು ತಿಳಿಸುವ ಸಲುವಾಗಿ ಶ್ರೀ ಅಖಿಲ ಹವ್ಯಕ ಮಹಾಸಭೆಯ ಹವ್ಯಕ ಭವನದಲ್ಲಿ 09.02.2020 ಭಾನುವಾರ “ಗಾಯತ್ರಿ ಮಹೋತ್ಸವ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಂತ್ರಾರ್ಥವನ್ನು ತಜ್ಞ ವಿದ್ವಾಂಸರು ವಿಭಿನ್ನ ದೃಷ್ಟಿಕೋನದಿಂದ ವಿಶ್ಲೇಷಿಸುವ , ಸಂಧ್ಯಾವಂದನೆಯ ಮಹತ್ವವನ್ನು ತಿಳಿಸುವ ವಿವಿಧ ವಿಚಾರ ಗೋಷ್ಠಿಗಳು ಈ ಕಾರ್ಯಕ್ರಮದಲ್ಲಿ ನಡೆಯಲಿದೆ.
ಗಾಯತ್ರಿ ದೇವಿಯ ಮೆರವಣಿಗೆ, ಜ್ಯೋತಿ ಜ್ವಾಲನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಗೌರವಾನ್ವಿತ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಹಾಗೂ ಮಾನ್ಯ ಶಾಸಕರಾದ ಶ್ರೀ ರವಿಸುಬ್ರಹ್ಮಣ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಶತಾವಧಾನಿ ಡಾ| ಆರ್. ಗಣೇಶ್ ‘ಗಾಯತ್ರಿ ತತ್ತ್ವ’ದ ಕುರಿತಾಗಿ ವಿಚಾರಗಳನ್ನು ಹಂಚಿಕೊಳ್ಳಲಿದ್ದು, ವಿದ್ವಾನ್ ಶಿವರಾಮ ಅಗ್ನಿಹೋತ್ರಿ ‘ಅಗ್ನಿಹೋತ್ರದ ವೈಶಿಷ್ಟ್ಯ’ದ ಕುರಿತಾಗಿ ಬೆಳಕು ಚೆಲ್ಲಲಿದ್ದಾರೆ. ‘ಗಾಯತ್ರಿ ಉಪದೇಶ – ಉಪನಯನ’ ವಿಚಾರವಾಗಿ ವಿದ್ವಾನ್ ಜಗದೀಶ ಶರ್ಮಾ ವಿಚಾರ ಮಂಡಿಸಲಿದ್ದು,
‘ಗಾಯತ್ರಿ ಮಂತ್ರದ ವೈಜ್ಞಾನಿಕ ಹಿನ್ನಲೆ’ ಕುರಿತಾಗಿ ಡಾ|| ರಂಗರಾಜ ಅಯ್ಯಂಗಾರ್ ತಿಳಿಸಿಕೊಡಲಿದ್ದಾರೆ.
ವಿದುಷಿ ಲತಾಲಕ್ಷ್ಮೀಶ್ ನಿರ್ದೇಶನದಲ್ಲಿ ಸಂಯೋಗ ಕಲಾಶಾಲೆಯ ಪ್ರಸ್ತುತಿಯ ‘ಗಾಯತ್ರಿ ವಂದನಮ್ – ನೃತ್ಯ ನಮನ’ ಹಾಗೂ ಶ್ರೀಮತಿ ಅರುಂಧತಿ ವಸಿಷ್ಠ ಹಾಗೂ ಶ್ರೀ ಮನೋಜ್ ವಸಿಷ್ಠರಿಂದ ‘ಗಾಯತ್ರಿ ನಾದನಮನ’ ಕಾರ್ಯಕ್ರಮಗಳು ನಡೆಯಲಿವೆ.
‘ನಿತ್ಯಕರ್ಮ – ಬ್ರಹ್ಮಯಜ್ಞ’ ಕುರಿತಾಗಿ ಡಾ| ಪಾದೆಕಲ್ಲು ವಿಷ್ಣು ಭಟ್ಟ, ಉಡುಪಿ, ‘ಗಾಯತ್ರಿ ಸಂದೇಶ’
ಸಂಧ್ಯಾವಂದನೆಯ ಮಹತ್ತ್ವ ಕುರಿತಾಗಿ ವಿದ್ವಾನ್ ಹಿತ್ಲಳ್ಳಿ ನಾಗೇಂದ್ರ ಭಟ್ಟ, ಯಲ್ಲಾಪುರ ವಿಚಾರಗಳನ್ನು ಪ್ರಸ್ತುತಪಡಿಸಲಿದ್ದು, ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಂದ
“ಮಹಾಬ್ರಾಹ್ಮಣ – ಕಾವ್ಯ ವಾಚನ” ಹಾಗೂ ಉದಯೋನ್ಮುಖ ಗಾಯಕ ಶ್ರೀ ಗುರುಕಿರಣ್ ಹೆಗಡೆ ಅವರಿಂದ ಗಾಯತ್ರಿ ನಾದನಮನ ನಡೆಯಲಿದೆ.
ಸಂಧ್ಯಾವಂದನೆ ಯಾವಾಗ ? ಹೇಗೆ ? ವಿಚಾರವಾಗಿ ವಿದ್ವಾನ್ ಕೂಟೇಲು ರಾಮಕೃಷ್ಣ ಭಟ್ಟ ಹಾಗೂ ಗಾಯತ್ರಿ ಮಹಿಮೆ ಕುರಿತಾಗಿ ವಿದ್ಯಾವಾಚಸ್ಪತಿ ಡಾ| ಅರಳುಮಲ್ಲಿಗೆ ಪಾರ್ಥಸಾರಥಿ ಉಪನ್ಯಾಸ ನೀಡಲಿದ್ದಾರೆ.
ಸಂಜೆ ‘ಗಾಯತ್ರಿ ದರ್ಶನ’
ಯಕ್ಷಗಾನ ತಾಳಮದ್ದಳೆ – ಪ್ರಸಂಗ ನಡೆಯಲಿದ್ದು, ಯಕ್ಷಕಲೆಯ ಮೂಲಕ ಗಾಯತ್ರಿ ಆರಾಧನೆ ಸಂಪನ್ನವಾಗಲಿದೆ.
ಸಮಾರೋಪ ಸಮಾರಂಭ “ಗಾಯತ್ರಿ ಸಭಾ” ದಲ್ಲಿ ಶ್ರೀ ಎಸ್. ಸುರೇಶ್ ಕುಮಾರ್, ಮಾನ್ಯ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಡಾ. ಕೆ. ಪಿ. ಪುತ್ತೂರಾಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.
ರಂಗಪೂಜೆ, ಗಾಯತ್ರಿ ಹವನ , ಗಾಯತ್ರಿ ನಮನ ಮುಂತಾದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನವಾಗಲಿವೆ.
ಧಾರ್ಮಿಕ – ವೈಚಾರಿಕ – ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ವಿಚಾರಗಳ ಸಮ್ಮಿಲನದ “ಗಾಯತ್ರಿ ಮಹೋತ್ಸವ” ಭಾನುವಾರ ಬೆಳಗ್ಗೆ 7.30 ರಿಂದ ರಾತ್ರಿ 8.30 ವರೆಗೆ ಸಂಪನ್ನವಾಗಲಿದ್ದು, ದಿನಪೂರ್ತಿ ಗಾಯತ್ರಿ ದೇವಿಯ ಆರಾಧನೆ ವಿವಿಧ ಆಯಾಮಗಳಲ್ಲಿ ನಡೆಯಲಿದೆ.
ಈ ವಿನೂತನ ಪುಣ್ಯಪರ್ವದಲ್ಲಿ ಪಾಲ್ಗೊಳ್ಳಲು ಸರ್ವರನ್ನೂ ಶ್ರೀ ಅಖಿಲ ಹವ್ಯಕ ಮಹಾಸಭೆ ಆಹ್ವಾನಿಸುತ್ತದೆ.