ಹೊಸಾಡ: ಅಮೃತಧಾರ ಗೋಶಾಲೆಯಲ್ಲಿ ಶ್ರೀ ರವಿಶಂಕರ ಗುರೂಜಿಗಳ ಶಿಷ್ಯವೃಂದದ ಆರ್ಟ್ ಒಫ್ ಲಿವಿಂಗ್ ಸಂಸ್ಥೆಯ ಕುಮಟಾ ವಿಭಾಗದಿಂದ ಒಂದು ದಿನದ ಶಿಬಿರ ವನ್ನು ಏರ್ಪಡಿಸಿಲಾಗಿತ್ತು.
ಕಾಮಧೇನು ಪೂಜೆ, ಭಾರತೀಯ ಗೋ ತಳಿ ಗೋವುಗಳ ದರ್ಶನ, ಧ್ಯಾನ, ಗುರು ಪೂಜೆ, ಭಜನೆ, ಶಾಹಿನಾಯಿ ವಾದನ, ಗವ್ಯೋತ್ಪನ್ನದ ಪ್ರಾಮುಖ್ಯತೆ ಹೀಗೆ ಹಲವು ಸಂಸ್ಕೃತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ೫೦ ಕಾರ್ಯಕರ್ತರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾದ ದತ್ತಾತ್ರೇಯ ಭಟ್ಟ ಹುಬ್ಬಳ್ಳಿ ಯವರು ಆಗಮಿಸಿ ಗವ್ಯೋತ್ಪನ್ನದ ಪ್ರಾಮುಖ್ಯತೆಯನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘಟನೆಯ ಪ್ರಮುಖರಾದ ವಿಠ್ಠಲ್ ಭಟ್ಟ, ಮುನ್ನೂರು ಇವರು, ಗೋಸಂರಕ್ಷಣೆಗಾಗಿ ನಾವು ಗಳಿಸಿದ ಒಂದು ಪಾಲನ್ನು ಗೋವಿಗೆ ಮೀಸಲಿಡ ಬೇಕು ಎಂಬ ಜಾಗ್ರತಿಯನ್ನು ಮೂಡಿಸಿದರು.
ವಿವೇಕ ಭಟ್ಟ ಇವರು ಶ್ರೀ ಗಳ ಕನಸು ಸಾಕಾರಗೊಂಡ ಮತ್ತು ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಗೋಬ್ಯಾಂಕ್ ನಡೆದು ಬಂದ ಹಾದಿಯ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿದರು.