ಹಟ್ಟಿಯಂಗಡಿಯಲ್ಲಿ ಫೆ.05 ರಂದು ಶ್ರೀಸಂಸ್ಥಾನದವರ ದಿವ್ಯ ಸಾನಿಧ್ಯ

ಇತರೆ

ಶ್ರೀ ಸಿದ್ದಿ ವಿನಾಯಕ ದೇವಸ್ಥಾನ, ಹಟ್ಟಿಯಂಗಡಿಯಲ್ಲಿ ದಿನಾಂಕ 05-02-26 ರಂದು ಶ್ರೀಸಂಸ್ಥಾನದವರ ದಿವ್ಯ ಸಾನಿಧ್ಯದಲ್ಲಿ ನೂತನ ನವಗ್ರಹ ದೇವಸ್ಥಾನ ಲೋಕಾರ್ಪಣೆ, ನವಗ್ರಹ ಪ್ರತಿಷ್ಠೆ, ಹಾಗೂ ಬ್ರಹ್ಮಕಲಶೋತ್ಸವವು ನಡೆಯಲಿದೆ.‌

ದಿನಾಂಕ 04-02-26ರ ಸಂಜೆ ಶ್ರೀಸಂಸ್ಥಾನದವರು ಹಟ್ಟಿಯಂಗಡಿಗೆ‌ ಚಿತ್ತೈಸಲಿದ್ದು, ಕ್ಷೇತ್ರದ ವತಿಯಿಂದ ಪೂರ್ಣ ಕುಂಭ ಸ್ವಾಗತ ಹಾಗೂ ಧೂಳಿ ಪಾದಪೂಜೆ ಜರುಗಲಿದೆ. 02-02-26 ಇಂದ 05-02-26 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ವಾರ್ಷಿಕೋತ್ಸವ ಹಾಗೂ 1008 ತೆಂಗಿನಕಾಯಿ ಮಹಾಗಣಪತಿ ಹವನ , ಸಂಕಷ್ಟಹರ ಚತುರ್ಥಿ ಮಹಾಪೂಜೆ, ಹಾಗೂ ಬ್ರಹ್ಮಕಲಶೋತ್ಸವವು ಶ್ರೀಕ್ಷೇತ್ರದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *