ಸೆ. 20 ರಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಾಗರ ಪುರ ಪ್ರವೇಶ- ಪೂರ್ಣಕುಂಭ ಸ್ವಾಗತ

ಇತರೆ

 

ಸಾಗರ: ಶ್ರೀ ರಾಮಚಂದ್ರಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಾಗರ ಪುರ ಪ್ರವೇಶ ಸೆ.20 ರಂದು ಸಂಜೆ 5 ಗಂಟೆಗೆ ಅತ್ಯಂತ ಅದ್ಧೂರಿ ಯಾಗಿ ನಡೆಯಲಿದೆ. ಸಾಗರ ಪೇಟೆ ಪೊಲೀಸ್ ಠಾಣೆ ಎದುರು ಪೂರ್ಣಕುಂಭ ಸ್ವಾಗತ ಹಾಗೂ ಬೃಹತ್ ಮೆರವಣಿಗೆಯಲ್ಲಿ ಶ್ರೀಗಳನ್ನು ಬರಮಾಡಿ ಕೊಳ್ಳಲಾಗುತ್ತಿದೆ ಎಂದು ಕೆ.ಎಸ್.ಗುರುಮೂರ್ತಿ ಹೇಳಿದರು.

 

ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಸೆ. 22ರಿಂದ ಅ. 4 ರವರೆಗೆ ಸಾಗರದ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಸಭಾ ಭವನದಲ್ಲಿ ಹೊಸನಗರ ರಾಮಚಂದ್ರಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ನವರಾತ್ರ ನಮಸ್ಯಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

 

ಸೆ. 22 ರಿಂದ ನವರಾತ್ರಿ ನಮಸ್ಯಾ ಧಾರ್ಮಿಕ ಕಾರ್ಯಕ್ರಮ ಪ್ರಾರಂಭ ಗೊಳ್ಳಲಿದೆ. ಪ್ರತಿದಿನ ಮಧ್ಯಾಹ್ನ 3.30 ರಿಂದ 5 ಗಂಟೆಯವರೆಗೆ ಶ್ರೀಗಳವರಿಂದ ಲಲಿತೋಪಾಖ್ಯಾನ ಪ್ರವಚನ ಇರುತ್ತದೆ. ನಂತರ ದುರ್ಗಾ ಪೂಜೆ, ದೀಪ ನಮಸ್ಕಾರ ಕುಂಕುಮಾರ್ಚನೆ ಏರ್ಪಡಿಸಲಾಗಿದೆ. ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ನಡೆಯಲಿದೆ. ಏಕಾದಶಿ ದಿನಾಂಕ 03/10/2025 ರಂದು ವಿಶೇಷವಾಗಿ  ಶ್ರೀಚಕ್ರ ಆರಾಧನೆ ಇರುತ್ತದೆ. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದ ಭೋಜನ ವ್ಯವಸ್ಥೆ ಇರುತ್ತದೆ ಎಂದರು. ನವರಾತ್ರ ನಮಸ್ಯಾ ಸಮಿತಿಯ ಪ್ರಸನ್ನ ಹೆಗಡೆ ಕೆರೆಕೈ ಮಾತನಾಡಿ ಅ. 4 ರಂದು ಬೆಳಿಗ್ಗೆ ವಿಶೇಷ ಪೂಜೆ, ಗಣಪತಿ ಹವನ, ಭಿಕ್ಷಾಸೇವೆ ನಡೆಯಲಿದ್ದು, ನವರಾತ್ರ ನಮಸ್ಯ ವೇದಿಕೆಯಲ್ಲಿ ಮದ್ಯಾಹ್ನ ಮೂರು ಗಂಟೆಗೆ ಶ್ರೀ ರಾಘವೇಶ್ವರ ಭಾರತಿ ಶ್ರೀಗಳಿಂದ ಧರ್ಮಸಭೆ ಮತ್ತು ಆಶಿರ್ವಚನ, ಮಂತ್ರಾಕ್ಷತೆ ಹಮ್ಮಿಕೊಂಡಿದೆ ಎಂದರು.

 

ನವರಾತ್ರ ನಮಸ್ಯಾ ಅಂಗವಾಗಿ ಭವ್ಯ ವೇದಿಕೆಯಲ್ಲಿ ಲಲಿತಾ ಮೂರ್ತಿ ಪ್ರತಿಷ್ಠಾಪನೆ, ಅಲ್ಲಿಯೇ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಕುಂಕುಮಾರ್ಚನೆ ನಡೆಯುತ್ತದೆ. ವಿವಿಧ ಸಮಾಜಗಳ ಸಮಾಗಮ ಇದ್ದು, ವಿವಿಧ ಸಮಾಜದ ಪ್ರಮುಖರನ್ನು ಗೌರವಿಸಲಾಗುತ್ತದೆ. ಇದೊಂದು ಎಲ್ಲಾ ಸಮಾಜದವರಿಗೂ ಉತ್ತಮ ಮಾರ್ಗದರ್ಶನ ಹಾಗೂ ಶ್ರೀಚಕ್ರ ಪೂಜೆ ವಿಶೇಷವಾದುದು.

 

ಶ್ರೀಚಕ್ರ ಪೂಜೆಯು ನವಾವರಣ ಪದ್ಧತಿಯ  ವಿಧಿವಿಧಾನಗಳಿಂದ ವಿಶೇಷವಾಗಿ ನಡೆಸಲಾಗುತ್ತಿದೆ, ಏಕಾದಶಿಯಂದು (03/10/2025) ಸಂಜೆ 4.00ಘಂಟೆಯಿಂದ ರಾತ್ರಿ 9.00ಘಂಟೆಯವರೆಗೆ ಶ್ರೀಚಕ್ರ ಪೂಜೆಯು ನಡೆಯಲಿದೆ ಎಂದರು.

 

ಗೋಷ್ಟಿಯಲ್ಲಿ ಐಸಿರಿ ಗುರುಪ್ರಸಾದ್, ಮುರಳಿ ಗೀಜಗಾರು, ರಮೇಶ್ ಹೆಗಡೆ ಗುಂಡೂಮನೆ, ಶಿವರಾಮಯ್ಯ, ವೆಂಕಟರಾವ್ ಕಾನುಗೋಡು, ನಾರಾಯಣ ಖಂಡಿಕಾ, ಮಹೇಶ್ ಹೆಗಡೆ ಚಟ್ಣಳ್ಳಿ, ಗುರುಪಾದ ಕೆರೆಕೊಪ್ಪ ಹಾಜರಿದ್ದರು.

 

ವರದಿ: ರವಿಶಂಕರ್ ಹೆಗಡೆ

ಪತ್ರಿಕಾ ವರದಿಗಾರರು

Leave a Reply

Your email address will not be published. Required fields are marked *