ಮುಳ್ಳೇರಿಯ ಮಂಡಲದಲ್ಲಿ ಗುರಿಕ್ಕಾರರ ಗುರುಮಾರ್ಗ ಕಾರ್ಯಾಗಾರ

ಇತರೆ

ಮುಳ್ಳೇರಿಯಾ: ಮುಳ್ಳೇರಿಯಾ ಮಂಡಲದ ನಾಲ್ಕು ಕೆಂದ್ರಗಳಲ್ಲಿ ದಿನಾಂಕ 30/11/2025 ಹಾಗೂ 01/12/2025 ರಂದು ಗುರಿಕ್ಕಾರರ ಗುರುಮಾರ್ಗ ಕಾರ್ಯಾಗಾರ ನಡೆಯಿತು.

30 ನೇ ತಾರೀಕಿನಂದು ಬೆಳಗ್ಗೆ ಪೆರಡಾಲ, ಪಳ್ಳತ್ತಡ್ಕ, ಎಣ್ಮಕಜೆ, ಚಂದ್ರಗಿರಿ ವಲಯಗಳಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ, ಮಧ್ಯಾಹ್ನ ನಂತರ ಕುಂಬಳೆ, ನೀರ್ಚಾಲು, ಕಾಸರಗೋಡು, ಗುಂಪೆ ವಲಯಗಳಿಗೆ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ, 1 ನೇ ತಾರೀಕಿನಂದು ಬೆಳಗ್ಗೆ ಸುಳ್ಯ, ಗುತ್ತಿಗಾರು, ಈಶ್ವರ ಮಂಗಲ ವಲಯಗಳಿಗೆ ಸರಳಿಕುಂಜದ ಧರ್ಮಾರಣ್ಯದಲ್ಲಿ ಮಧ್ಯಾಹ್ನ ನಂತರ ಕೊಡಗು ವಲಯದ ಕುಮಾರ ಕೃಪಾದಲ್ಲಿ ಕಾರ್ಯಾಗಾರ ನಡೆಯಿತು.

ಮಹಾಮಂಡಲ ಅಧ್ಯಕ್ಷ  ಹರಿಪ್ರಸಾದ ಪೆರಿಯಾಪು ಗುರಿಕ್ಕಾರರ ಹಾಗೂ ಶಿಷ್ಯರ ಸಂಬಂಧದ ಕುರಿತು ಮಾರ್ಗದರ್ಶನ ಮಾಡಿದರು ಹಾಗೂ ಗುರಿಕ್ಕಾರರ ಗೊಂದಲಗಳಿಗೆ ಪರಿಹಾರ ತಿಳಿಸಿದರು‌.

ಸಂಪನ್ಮೂಲ ವ್ಯಕ್ತಿಗಳಾಗಿ‌ ಆಗಮಿಸಿ ಗುರಿಕ್ಕಾರರ ಸ್ಥಾನದ ಬಗ್ಗೆ ಉಂಡೆಮನೆ ವಿಶ್ವೇಶ್ವರ ಭಟ್ ಹಾಗೂ ಮಂಗಳೂರು ಹೋಬಳಿ  ಪ್ರಮುಖರಾದ ವೇ. ಮೂ ಮುಗುಳಿ ತಿರುಮಲೇಶ್ವರ ಭಟ್ ಗುರಿಕ್ಕಾರರ ನಡವಳಿಕೆ ಎಂಬ ವಿಷಯದ ಕುರಿತು ಮಾಹಿತಿಯನ್ನು ನೀಡಿದರು. ಮಂಗಳೂರು ಮಂಡಲ ಗುರುಕುಲ ಪ್ರಕಲ್ಪದ  ಶ್ರೀಸಂಯೋಜಕ ವೇ. ಮೂ. ಶಿವಪ್ರಸಾದ ಭಟ್ ಅಮೈ ಗುರಿಕ್ಕಾರರು, ವೈದಿಕರು ಹಾಗೂ ಸಂಘಟನೆ ಎಂಬ ವಿಷಯದ ಕುರಿತು ಮಾರ್ಗದರ್ಶನ ನೀಡಿದರು‌.

ಮಂಡಲ ಗುರಿಕ್ಕಾರ ಸತ್ಯನಾರಾಯಣ ಮೊಗ್ರ ಅಧ್ಯಕ್ಷತೆ ವಹಿಸಿದ್ದರು‌. ಮಹಾಮಂಡಲ ಕಾರ್ಯದರ್ಶಿ ಮಹೇಶ ಚಟ್ಣಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸೇವಾ ವಿಭಾಗದ, ಮುಳ್ಳೇರಿಯಾ ಮಂಡಲದ ಸಂಯೋಜಕ ಕೃಷ್ಣಮೂರ್ತಿ ಮಾಡಾವು ಅವರ ಸಮಗ್ರ ಸಂಯೋಜನೆಯಲ್ಲಿ ಕಾರ್ಯಾಗಾರವು ನಡೆಯಿತು. ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ ಕಾರ್ಯಕ್ರಮ ನಿರೂಪಿಸಿದರು. ಲೇಖ ವಿಭಾಗದ ಕಿರಣ ಶಂಕರ, ಕೋಶ ವಿಭಾಗದ ಪರಮೇಶ್ವರ ಪೆರುಮುಂಡ ಮಂಡಲ ಪದಾಧಿಕಾರಿಗಳು, ವಲಯ ಪದಾಧಿಕಾರಿಗಳು ಭಾಗವಹಿಸಿದರು.

 

 

ವರದಿ:- ಶಿಷ್ಯಮಾಧ್ಯಮ, ಮುಳ್ಳೇರಿಯಾ ಮಂಡಲ

Leave a Reply

Your email address will not be published. Required fields are marked *