ಗ್ರಾಮರಾಜ್ಯದ ಮುಖ್ಯಸ್ಥಾನಕ್ಕೆ ಭೇಟಿ

ಇತರೆ

 

ಬೆಂಗಳೂರು: ಗ್ರಾಮರಾಜ್ಯದ ಮುಖ್ಯಸ್ಥಾನಕ್ಕೆ ಯೋಜನಾ ಖಂಡದ ಶ್ರೀಸಂಯೋಜಕರಾದ ವಿದ್ವಾನ್ ಜಗದೀಶ ಶರ್ಮಾ ಸಂಪ ಭೇಟಿ ನೀಡಿದರು.

‘ಗ್ರಾಮರಾಜ್ಯ’ ನಮ್ಮ ದಿನಸಿ ಮತ್ತಿತರ ಗೃಹೋಪಯೋಗಿ ವಸ್ತುಗಳನ್ನು ರೈತರು ಮತ್ತು ಉತ್ಪಾದಕರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ತಲುಪಿಸುವ ಒಂದು ಸಮಾಜೋಪಯೋಗಿ ಸಂಸ್ಥೆ. ವಾಣಿಜ್ಯದ ಆಸಕ್ತಿ ಇರದ ಸೇವಾಸಂಸ್ಥೆ. ಈ ಮೂಲಕ ಗ್ರಾಮಗಳನ್ನು ಸದೃಢಗೊಳಿಸುವ ಮಹತ್ತ್ವಾಕಾಂಕ್ಷೆಯ ಅಭಿಯಾನ. ಜೊತೆಗೆ ಗ್ರಾಹಕರ ದೈನಂದಿನವನ್ನೂ ಸ್ವಸ್ಥಗೊಳಿಸುವ ಸದುದ್ದೇಶವೂ ಇದರದ್ದು. ಬೆಂಗಳೂರಿನಲ್ಲಿ ಕೇಂದ್ರಸ್ಥಾನವಲ್ಲದೆ, ಅಸಂಖ್ಯ ಶಾಖೆಗಳನ್ನೂ ಹೊಂದಿ, ರಾಜ್ಯದ ಆಯ್ದ ಪ್ರದೇಶಗಳಲ್ಲೂ ಇದು ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ ಅಂತರ್ಜಾಲದ ಮೂಲಕವೂ ವ್ಯವಹರಿಸಲು ಅವಕಾಶವಿದೆ.

ರಾಮರಾಜ್ಯದಲ್ಲಿ ಗ್ರಾಮಕ್ಕೆ ಅತ್ಯಂತ ಮಹತ್ತ್ವವಿದೆ. ಗ್ರಾಮಗಳು ಸದೃಢವಾದರೆ ಮಾತ್ರ ದೇಶ ಸದೃಢವಾಗಲು ಸಾಧ್ಯ. ನಗರೀಕರಣ ಹಲವು ಅನುಕೂಲಗಳನ್ನು ಒದಗಿಸುತ್ತದೆ ಎನ್ನುವುದು ನಿಜವಾದರೂ ದೂರಗಾಮಿಯಾಗಿ ನೋಡಿದಾಗ ಗ್ರಾಮಜೀವನವೇ ಅನುಕೂಲ. ಹಳ್ಳಿಗಳಿಗೆ ಸೌಕರ್ಯಗಳು ಒದಗಿದರೆ ಆ ಬದುಕು ಸೊಗಸು ಕೂಡಾ.

ಈ ನಿಟ್ಟಿನಲ್ಲಿ ಈ ಕಾರ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಗ್ರಾಮರಾಜ್ಯ ಮತ್ತು ಇಂಥ ಸಂಸ್ಥೆಗಳು ಬೆಳೆಯಬೇಕು. ಹಾಗೆಂದರೆ ನಾವೆಲ್ಲ ಸೇರಿ ಬೆಳೆಸಬೇಕು. ಗ್ರಾಮರಾಜ್ಯದ ಪೂರ್ಣ ಮಾಹಿತಿಗೆ: www.gramarajya.in ಗೆ ಭೇಟಿ ನೀಡಬಹುದು.

Leave a Reply

Your email address will not be published. Required fields are marked *