ಗೋ-ಗೋವರ್ಧನಗಿರಿಧಾರಿಗಳಾರಾಧನೆಗಿದೋ ಸುವರ್ಣಾವಕಾಶ…

ದೇವಾಲಯ

ಹೊಸನಗರ: ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಮಹಾನಂದಿ ಗೋಲೋಕ ಎಂಬ ಗೋಶಾಲೆಯಲ್ಲಿ ಮುಂದಿನ ತಿಂಗಳು ಫೆಬ್ರವರಿ 25 ರಂದು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ “ಕೃಷ್ಣಾರ್ಪಣಮ್ ~ ಗೋದೀಪ ಮಹೋತ್ಸವ” ಎಂಬ
ವಿಶಿಷ್ಟ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದೆ.

ತನ್ನ ಸಂಪೂರ್ಣ ಜೀವಿತಾವಧಿಯೂ ವಾತ್ಸಲ್ಯದಿಂದ ನಮ್ಮನ್ನು ಪೊರೆಯುವ ಗೋಮಾತೆಯನ್ನು ಪ್ರೀತಿಯಿಂದ ಆರಾಧಿಸುವ “ಗೋದೀಪ ಮಹೋತ್ಸವ” ಕಾರ್ಯಕ್ರಮ ನಡೆಯಲಿದೆ. ಅಂತೆಯೇ ನಂದಗೋಕುಲದಲ್ಲಿ ಗೋವುಗಳನ್ನು, ಗೋಪಾಲಕರನ್ನು ರಕ್ಷಿಸಲೋಸುಗ ಗೋವರ್ಧನಗಿರಿಯನ್ನೆತ್ತಿದ, ಸಮಸ್ತ ಗೋವಂಶಕ್ಕೆ ಶ್ರೀರಕ್ಷೆಯಾಗಿ ಮಹಾನಂದಿ ಗೋಲೋಕದಲ್ಲಿ ವಿರಾಜಮಾನನಾಗಿರುವ ಶ್ರೀಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವರ ಪ್ರತಿಷ್ಠಾ ವರ್ಧಂತಿ, ಭಾಗವತ ಸಪ್ತಾಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಫೆಬ್ರವರಿ 24 ರಂದು ಮಂಗಳವಾರ ಪೂರ್ವಾಹ್ನ ಲೋಕಕಲ್ಯಾಣಕ್ಕಾಗಿ ವಿವಿಧ ಹವನಗಳು ನಡೆಯಲಿವೆ. ಫೆಬ್ರವರಿ 25 ರಂದು ಬುಧವಾರ ಬೆಳಿಗ್ಗೆ ಶ್ರೀ ಪೂಜೆ, ಪಾದುಕಾ ಪೂಜೆ, ಸೋಪಾನ ಪೂಜೆ, ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮಗಳು ನಡೆಯಲಿರುವುವು. ಅನಂತರ ಪೂರ್ವಾಹ್ನ ಶ್ರೀ ಗುರುಭಿಕ್ಷಾ ಸೇವೆ, ಶ್ರೀ ಗೋವರ್ಧನಗಿರಿಧಾರಿಯ ಸನ್ನಿಧಿಯಲ್ಲಿ ವಿಷ್ಣುಸಹಸ್ರನಾಮ ಪಾರಾಯಣ ಸಮರ್ಪಣೆ, ಸರ್ವದುರಿತ-ಭಯನಿವಾರಣೆಯ ಪ್ರಾರ್ಥನೆಯೊಂದಿಗೆ ಛತ್ರ ಸಮರ್ಪಣೆ, ಪಾಂಚಜನ್ಯ ಸಮರ್ಪಣೆ, ಗೋವುಗಳಿಗೆ ವಿಶೇಷ ಗೋಗ್ರಾಸ ಸಮರ್ಪಣೆ, ವಿಷ್ಣು ಸಹಸ್ರನಾಮ ಲೇಖನ ಯಜ್ಞ ಪುಸ್ತಕ ಸಮರ್ಪಣೆಗಳು ನಡೆಯಲಿದ್ದು, ಸಾಯಂಕಾಲ ಗೋದತ್ತು ಪಡೆದ 108 ದಾನಿಗಳೊಂದಿಗೆ ಸಂವಾದ, ದಾನಿಗಳಿಗೆ ಗೌರವ ಸಮ್ಮಾನ, ಗೋಸೂಕ್ತ ಪಾರಾಯಣ, 108 ದಾನಿ ಮಹೋದಯರಿಂದ ವಿಶೇಷ ಗೋಪೂಜೆ, ಮಾತೆಯರಿಂದ 1008 ಗೋನೀರಾಜನ, ಶ್ರೀ ಸಂಸ್ಥಾನದವರಿಂದ ಗೋಸಂದೇಶ ಎಂಬೀ ಕಾರ್ಯಕ್ರಮಗಳು ಜರುಗಲಿವೆ. ಇಂತು ಹೊಸನಗರದ ಮಹಾನಂದಿ ಗೋಲೋಕದಲ್ಲಿ “ಕೃಷ್ಣಾರ್ಪಣಮ್ ~ ಗೋದೀಪ ಮಹೋತ್ಸವ” ಕಾರ್ಯಕ್ರಮಗಳು ನಡೆಯಲಿವೆ.

Leave a Reply

Your email address will not be published. Required fields are marked *