ಹೊನ್ನಾವರ: ಡಿಸೆಂಬರ್ 28ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ನೈದಾನದಲ್ಲಿ ನಡೆಯಲಿರುವ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳ ಉದ್ಘಾಟನೆಯು ವಿಭಿನ್ನವಾಗಿರಲಿದೆ. ಕರ್ನಾಟಕದಲ್ಲಿ ಹವ್ಯಕರ ಮೂಲಸ್ಥಾನವಾದ ಹೈಗುಂದದ ದೇವಳದಿಂದ ಜ್ಯೋತಿಯನ್ನು ಬೆಳಗಿಸಿ ರಥಯಾತ್ರೆಯಲ್ಲಿ ಭಾನ್ಕುಳಿಯ ಗೋಸ್ವರ್ಗದ ಮೂಲಕವಾಗಿ ಬೆಂಗಳೂರಿನ ಅರಮನೆ ಮೈದಾನಕ್ಕೆ ತರಲಾಗುತ್ತದೆ. ಈ ಪವಿತ್ರ ಜ್ಯೋತಿಯಿಂದ ದೀಪ ಬೆಳಗುವ ಮೂಲಕ ಸಮ್ಮೇಳನವು ಉದ್ಘಾಟನೆಗೊಳ್ಳಲಿದೆ.
ಡಿಸೆಂಬರ್ 26ರ ಬೆಳಗ್ಗೆ ಹೈಗುಂದದಿಂದ ಹೊರಟ ಜ್ಯೋತಿಯು ಹೊನ್ನಾವರವನ್ನು ತಲುಪಿದೆ. ಇಲ್ಲಿ ಹೊನ್ನಾವರ ಹವ್ಯಕಮಂಡಲದ ಸದಸ್ಯರು ರಥವನ್ನು ಸ್ವಾಗತಿಸಿ ಮುಂದಿನ ಯಾತ್ರೆಗೆ ಶುಭ ಹಾರೈಸಿದರು.