ಮುಖಾರಿಕಂಡದಲ್ಲಿ ಸೇವಾಅರ್ಘ್ಯ : ಗೋವಿಗಾಗಿ ಮೇವು-ಮೇವಿಗಾಗಿ ನಾವು

ಗೋವು

ಮುಖಾರಿಕಂಡ: ಶ್ರೀಸಂಸ್ಥಾನದವರ ದಿಗ್ದರ್ಶನದಲ್ಲಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಯ `ಗೋವಿಗಾಗಿ ಮೇವು-ಮೇವಿಗಾಗಿ ನಾವು’ ಯೋಜನೆಯ ಅಂಗವಾಗಿ ದಿನಾಂಕ 23.12.2018ರಂದು ಸೀತಾಂಗೋಳಿ ಮುಖಾರಿಕಂಡದಲ್ಲಿ ನಡೆದ ‘ಸೇವಾ ಅರ್ಘ್ಯ’ದಲ್ಲಿ ವಿವಿಧ ಕ್ಲಬ್‌ ಗಳ ಸದಸ್ಯರು ಪಾಲ್ಗೊಂಡು ಗೋಸೇವೆಗೈದರು.

 

ಕಳೆದ ಕೆಲವು ವಾರಗಳಿಂದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಮೇವು ಸಂಗ್ರಹಕ್ಕಾಗಿ ವಿವಿಧೆಡೆ ಶ್ರಮದಾನಗಳನ್ನು ನಡೆಸಲಾಗುತ್ತಿತ್ತು. ಅದರಂತೆ ಸೀತಾಂಗೋಳಿ ಮುಖಾರಿಕಂಡದಲ್ಲಿ ಪ್ರಕೃತಿ ಸಹಜವಾಗಿ ಬೆಳೆದ ಮುಳಿಹುಲ್ಲನ್ನು ಕಟಾವು ಮಾಡಿ ಸಾಗಿಸಲಾಯಿತು.

 

ಈ ಗೋಸೇವಾಕಾರ್ಯವನ್ನು ಕಾಮಧೇನು ಧ್ವಜಾರೋಹಣಗೈಯುವ ಮೂಲಕ ಪುತ್ತಿಗೆ ಗ್ರಾಮಪಂಚಾಯತ್ ಸದಸ್ಯ ಶ್ರೀ ಚಂದ್ರ ಮುಖಾರಿಕಂಡ ಉದ್ಘಾಟಿಸಿದರು. ಕೋಡಿಮೂಲೆ ಡಾ| ಸುರೇಶ ಭಟ್ ದಂಪತಿ ಫಲ ಸಮರ್ಪಿಸಿದರು. ಗೋಕರ್ಣ ಮಂಡಲದ ಕಾಮದುಘಾ ಕಾರ್ಯದರ್ಶಿ ಡಾ| ವೈ.ವಿ. ಕೃಷ್ಣಮೂರ್ತಿ ಅವರು ಮಾತನಾಡಿ, ಮಳೆಗಾಲದ ಅನಂತರ ವಿವಿಧೆಡೆಗಳಲ್ಲಿ ಹುಲುಸಾಗಿ ಬೆಳೆದ ಹುಲ್ಲು ಉಪಯೋಗವಾಗದೆ ನಾಶವಾಗುತ್ತಿದೆ. ಅಲ್ಲದೆ ಬಿಸಿಲಲ್ಲಿ ಒಣಗಿ ಅನೇಕ ಕಡೆಗಳಲ್ಲಿ ಬೆಂಕಿಗೆ ಆಹುತಿಯಾಗಿರುವ ಘಟನೆಗಳೂ ನಮ್ಮ ಕಣ್ಣ ಮುಂದಿದೆ. ಇದನ್ನೆಲ್ಲ ಮನಗಂಡು ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಗೋವನ್ನು ಸಾಕಲು ಅಸಾಧ್ಯವಾದವರು ಈ ಮೂಲಕವೂ ಗೋಸೇವಾ ಕಾರ್ಯದಲ್ಲಿ ಪಾಲ್ಗೊಳ್ಳಬಹುದು. ಇಂದು ಇಲ್ಲಿ ಸೇರಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೇವೆಸಲ್ಲಿಸಿ ಧನ್ಯರಾದರು ಎಂದು ಹೇಳಿದರು.

 

10 ಹುಲ್ಲು ಕತ್ತರಿಸುವ ಯಂತ್ರವನ್ನು ಬಳಸಿ ಮುಳಿಹುಲ್ಲನ್ನು ಕಟಾವು ಮಾಡಲಾಗಿತ್ತು. 90ಕ್ಕೂ ಅಧಿಕ ಗೋಕಿಂಕರರು ಆ ಹುಲ್ಲನ್ನು ಲಾರಿಗೆ ತುಂಬಿಸಿ, ಬಜಕೂಡ್ಲು ಗೋಶಾಲೆಗೆ ಸಾಗಿಸಿದರು.

 

ಕೋಡಿಮೂಲೆ ಫ್ರೆಂಡ್ಸ್ ಕ್ಲಬ್, ವೀರ ಹನುಮಾನ್ ಪ್ರೆಂಡ್ಸ್ ಕ್ಲಬ್, ಮಹಿಳಾ ಘಟಕ ಕೋಡಿಮೂಲೆ ಮುಖಾರಿಕಂಡ, ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಈಶ್ವರೀ ಶ್ಯಾಮ ಭಟ್ ಬೇರ್ಕಡವು, ಉಲ್ಲೇಖ ಪ್ರಧಾನ ಬಳ್ಳಮೂಲೆ ಶ್ರೀ ಗೋವಿಂದ ಭಟ್, ಡಾ. ಮಾಲತಿ ಪ್ರಕಾಶ ಭಟ್, ಶ್ರೀ ಶ್ಯಾಮ ಭಟ್ ಬೇರ್ಕಡವು, ಮುಳ್ಳೇರಿಯಾ ಮಂಡಲದ ಕೋಶಾಧಿಕಾರಿ ಶ್ರೀ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಉಲ್ಲೇಖ ಪ್ರಧಾನ ಶ್ರೀ ಕೃಷ್ಣಮೋಹನ, ಜೀವಿಕಾವಿಭಾಗ ಪ್ರಧಾನ ಶ್ರೀ ಸತ್ಯಶಂಕರ ಭಟ್ಟ, ಸಹಾಯ ವಿಭಾಗದ ಶ್ರೀ ಪುರುಷೋತ್ತಮ ಭಟ್, ವಿದ್ಯಾರ್ಥಿವಾಹಿನೀ ಪ್ರಧಾನ ಶ್ರೀ ಕೇಶವಪ್ರಸಾದ ಎಡಕ್ಕಾನ, ಕುಂಬಳೆ ವಲಯಾಧ್ಯಕ್ಷ ಶ್ರೀ ಬಾಲಕೃಷ್ಣ ಶರ್ಮ, ಗುಂಪೆ ವಲಯ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ಕುಂಬಳೆ ವಲಯ ಕಾರ್ಯದರ್ಶಿ ಶ್ರೀ ಗೋಪಾಲಕೃಷ್ಣ ಭಟ್, ಕುಂಬಳೆ ವಲಯ ಸೇವಾ ಪ್ರಧಾನ ಶ್ರೀ ಸೂರ್ಯನಾರಾಯಣ, ವಿವಿಧ ವಲಯ ಗುರಿಕ್ಕಾರರು, ಪದಾಧಿಕಾರಿಗಳು, ಮಾತೆಯರು, ವಿದ್ಯಾರ್ಥಿಗಳು, ಮಾತೆಯರು ಭಾಗವಹಿಸಿದ್ದರು.

 

ಮುಂದಿನ ಸೇವಾಅರ್ಘ್ಯವು ಮುಖಾರಿಕಂಡದಲ್ಲಿ 02.01.2019ರಂದು ಅಪರಾಹ್ಣ 2 ಗಂಟೆಗೆ ಮಾಡುವುದೆಂದು ನಿಶ್ಚಯಿಸಲಾಯಿತು.

 

Author Details


Srimukha

1 thought on “ಮುಖಾರಿಕಂಡದಲ್ಲಿ ಸೇವಾಅರ್ಘ್ಯ : ಗೋವಿಗಾಗಿ ಮೇವು-ಮೇವಿಗಾಗಿ ನಾವು

  1. #ಸೇವಾಅರ್ಘ್ಯ ಗೋವಿಗಾಗಿ ಮೇವು ಮೇವಿಗಾಗಿ ನಾವು

Leave a Reply

Your email address will not be published. Required fields are marked *