ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀರಾಮನ ಜನ್ಮೋತ್ಸವ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು. ಶ್ರೀ ಮಠದ ಶಿಷ್ಯ ಭಕ್ತರು, ಪ್ರಾಂಶುಪಾಲರುಗಳು ಸೇರಿ ಒಟ್ಟು 40 ಮಂದಿ ಬೋಧಕ, ಬೋಧಕೇತರ ವೃಂದದವರು, ಸುಮಾರು 250 ವಿದ್ಯಾರ್ಥಿಗಳು ಜತೆಯಾಗಿ ಕುಳಿತು ರಾಮತಾರಕ ಮಂತ್ರ, ಭಜನೆ, ಭಜನ ರಾಮಾಯಣ ಪಠಣ ನೆರವೇರಿಸಿದರು. ಮಂಗಳೂರು ಹವ್ಯಕ ಮಂಡಲ ಮಾತೃಪ್ರಧಾನರಾದ ಶ್ರೀಮತಿ ಸುಮಾ ರಮೇಶ ಅವರ ತಂಡದಿಂದ ಭಜನೆ, ಸಂಸ್ಥೆಯ ಸೇವಾ ಸಮಿತಿ ಸದಸ್ಯರೂ ಮಂಗಳೂರು ಮಧ್ಯಹವ್ಯಕ ವಲಯ ಅಧ್ಯಕ್ಷರೂ ಆದ ಶ್ರೀ ರಮೇಶ ಭಟ್ಟ ಸರವು ಅವರಿಂದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸ್ಥಾಪಿಸಲುದ್ದೇಶಿಸಿರುವ ವಿಷ್ಣು ಗುಪ್ತ ವಿಶ್ವ ವಿದ್ಯಾಪೀಠದ ಬಗ್ಗೆ, ಧಾರಾ-ರಾಮಾಯಣದ ಬಗ್ಗೆ ಮಾಹಿತಿ ಬಳಿಕ ಪ್ರಸ್ತುತಿ ಪ್ರಸಾರ ಹಾಗೂ ಪ್ರಸಾದ ವಿತರಣೆ ನಡೆಯಿತು.