ಗೋವಿಗಾಗಿ ಹಲಸು ಮೇಳ ; ಸಿದ್ಧತಾ ಸಭೆ

ಸಮಾರಂಭ

➖➖➖➖➖➖➖➖
“ಹಲಸು ಬೆಳೆಸಿ ಗೋವು ಉಳಿಸಿ” ಎಂಬ ಧ್ಯೇಯ ವಾಕ್ಯದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜೂನ್ 8ರಂದು ನಡೆಸಲಿರುವ ” ಹಲಸು ಮೇಳ ” ಎಂಬ ಬೃಹತ್ ಸಮಾರಂಭದ ಸಿದ್ಧತೆಗಾಗಿ ಸಮಾಲೋಚನಾ ಸಭೆಯು ವಿದ್ಯಾಪೀಠದಲ್ಲಿ ಜರಗಿತು. ಮುಳ್ಳೇರಿಯಾ ಮಂಡಲಾಧ್ಯಕ್ಷರಾದ ಪ್ರೊ ಶ್ರೀಕೃಷ್ಣ ಭಟ್ಟ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

 

ಸಮಾರಂಭವು ಮುಳ್ಳೇರಿಯಾ ಹವ್ಯಕ ಮಂಡಲ, ಅಮೃತಧಾರಾ ಗೋಶಾಲೆ ಬಜಕ್ಕೂಡ್ಲು ಪೆರ್ಲ, ಮತ್ತು ಮಹಿಳೋದಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರಗಲಿದೆ. ಸಭೆಯಲ್ಲಿ ಡಾ. ವೈ. ವಿ. ಕೃಷ್ಣಮೂರ್ತಿಯವರು ಕಾರ್ಯಕ್ರಮದ ಸಮಗ್ರ ಕಾರ್ಯಯೋಜನೆಯ ಮಾಹಿತಿಯನ್ನಿತ್ತರು. ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ಟ ಸರ್ಪಮಲೆ ಅವರು ಕಾರ್ಯಕ್ರಮ ಸಂಯೋಜನೆ ಮಾಡಿ ಸಭಾ ನಿರೂಪಣೆ ಮಾಡಿದರು.
ಕಾರ್ಯಕ್ರಮದ ಯಶಸ್ವಿಗಾಗಿ ಡಾ. ವೈ. ವಿ. ಕೃಷ್ಣಮೂರ್ತಿ ಅವರನ್ನು ಮಾರ್ಗದರ್ಶಕರಾಗಿಯೂ ಶ್ರೀ ಶಿವಪ್ರಸಾದ್ ವರ್ಮುಡಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಇರುವ ಕಾರ್ಯಕಾರಿ ಸಮಿತಿ ಮತ್ತು ಕಾರ್ಯಕ್ರಮದ ಯಶಸ್ವಿಗೆ ವಿವಿಧ ವಿಭಾಗ ಸಮಿತಿಗಳನ್ನು ರಚಿಸಲಾಯಿತು.

 

ಶ್ರೀಮತಿ ಈಶ್ವರಿ ಬೇರ್ಕಡವು, ಕುಸುಮ ಪೆರ್ಮುಖ ಇವರ ನೇತೃತ್ವದಲ್ಲಿ 1 ಲಕ್ಷ ಹಲಸಿನ ಹಪ್ಪಳ ತಯಾರಿಸಲು ಮತ್ತು ಇದರ ವಿಕ್ರಯದಿಂದ ಬಂದ ಹಣವನ್ನು ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಗೆ ನೀಡಲು ಮುಳ್ಳೇರಿಯ ಮಂಡಲದ ಮಾತೆಯರು ತೀರ್ಮಾನಿಸಿದರು.
ಮಹಾಮಂಡಲ, ಮಂಡಲ, ಮತ್ತು ವಲಯ ಪದಾಧಿಕಾರಿಗಳು, ಗೋ ಶಾಲೆಯ ಪದಾಧಿಕಾರಿಗಳು, ಮಹಿಳೋದಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *