ಭಾನ್ಕುಳಿ ಜೂ. 28 : ಶ್ರೀರಾಮದೇವ ಬಾನ್ಕುಳಿಮಠದಲ್ಲಿ ಶ್ರೀ ಶ್ರೀಗಳ ನಿರ್ದೇಶನದಂತೆ ಶ್ರೀರಾಮ ಜನ್ಮೋತ್ಸವವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಯಿತು. ಮಠದ ಅರ್ಚಕರು ,ಯಜಮಾನ ದಂಪತಿಗಳು, ನಿಯಾಮಕರು, ಬಂದ ಶಿಷ್ಯಭಕ್ತರೊಡಗೂಡಿ ಶ್ರೀರಾಮ ಜಪ, ಭಜನರಾಮಾಯಣ ಪಠನ, ರಾಮ ಭಜನೆ ಮಾಡಿ, ವಿದ್ಯುಕ್ತವಾಗಿ ಪೂಜಿಸಿ , ಶ್ರೀ ಬಾಲರಾಮನನ್ನು ತೊಟ್ಟಿಲಲ್ಲಿಟ್ಟು ತೂಗಿ ಸಂಭ್ರಮಿಸಿದರು. ಗಣಪತಿ ಹೆಗಡೆ ಗುಂಜಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಡಾ. ವೈ. ವಿ. ಕೃಷ್ಣಮೂರ್ತಿಯವರು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತು ಶ್ರೀಗಳ ಆಶಯವನ್ನು ಸವಿಸ್ತಾರವಾಗಿ ವಿವರಿಸಿದರು. ಆಮೇಲೆ ಮಹಾಗುರುಕುಲಕ್ಕಾಗಿ ಸಮರ್ಪಣೆ ನಡೆಯಿತು. ಒಟ್ಟೂ 3421 ರೂ ಸಂಗ್ರಹಣೆಯಾಯಿತು.
ಅನಂತರ ಪ್ರಸಾದ ಪನಿವಾರ ಪಾನಕ ಸಿಹಿತಿಂಡಿಗಳ ವಿತರಣೆ ನಡೆದು ಕಾರ್ಯಕ್ರಮವು ಸಂಪನ್ನಗೊಂಡಿತು.