ಗೋಕರ್ಣ ದೇವಾಲಯದ ಆಡಳಿತಾಧಿಕಾರಿಗಳಿಗೆ Acid ದಾಳಿ ಬೆದರಿಕೆ

ಶ್ರೀಗೋಕರ್ಣ
ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶ್ರೀ ಸಂಸ್ಥಾನದವರ ಕಾರ್ಯದರ್ಶಿ ಮತ್ತು ಪದನಿಮಿತ್ತ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ  ಶ್ರೀ ಜಿ ಕೆ ಹೆಗಡೆ ಇವರ ಮೇಲೆ  ಆಸಿಡ್ ಧಾಳಿ ಮಾಡಲು ಸಂಚು ನಡೆದಿದೆ .
ದಿನಾಂಕ 05-01-2019 ರಂದು ರಾತ್ರಿ 11.00 ಘಂಟೆ ಸುಮಾರಿಗೆ ಶ್ರೀ ಜಿ ಕೆ ಹೆಗಡೆಯವರು ಅಮಾವಾಸ್ಯೆ ರಥೋತ್ಸವ ಮುಗಿಸಿ ದೇವಾಲಯದಿಂದ ವಸತಿಗೆ ನಡೆದು ಹೋಗತ್ತಿರುವಾಗ ಶ್ರೀ ವಿಶ್ವನಾಥ ಫಣಿರಾಜ್ ಗೋಪಿ ಇವರು ಬೈಕಿನಲ್ಲಿ ಬಂದು : “ಜಿ ಕೆ ಹೆಗಡೆಯವರೇ, ನಿಮಗೆ ಆಸಿಡ್ ಹಾಕಲು ಗೋಕರ್ಣದಲ್ಲಿ  ತಯಾರಿ ನಡೆದಿದೆ . ಆಸಿಡ್ ಬಾಟಲಿಯನ್ನು ತಂದು ಇಟ್ಟಿದ್ದಾರೆ . ಇದರಲ್ಲಿ ಗೋಕರ್ಣದ ಕೆಲವರು ಇದ್ದಾರೆ. ನೀವು ಬಹಳ ಎಚ್ಚರಿಕೆಯಿಂದ ಇರಬೇಕು” ಎಂದು ಹೇಳಿ ಹೋಗಿದ್ದಾರೆ .
ಈ ಬಗ್ಗೆ ಶ್ರೀ ಜಿ ಕೆ ಹೆಗಡೆಯವರು ಗೋಕರ್ಣ ಪೊಲೀಸ್ ಠಾಣೆಯಲ್ಲಿ  ರಕ್ಷಣೆ ಕೋರಿ ದೂರು ದಾಖಲಿಸಿದ್ದಾರೆ . ಈ ಹಿಂದೆ ನಕಲಿ ಸಿ ಡಿ ಕೇಸ್ ಕೇಸಿನಲ್ಲಿ ದೂರು ದಾಖಲಿಸಿದಾಗ  ಶ್ರೀ ಜಿ ಕೆ ಹೆಗಡೆಯವರಿಗೆ  ಕೊಲೆ ಬೆದರಿಕೆ ಬಂದಿತ್ತು ಮತ್ತು ಬ್ಲಾಕ್ ಮೇಲ್ ಪ್ರಕರಣದಲ್ಲಿಯೂ ಸಹ ಜೀವ ಬೆದರಿಕೆ ಕರೆ ಬಂದಿತ್ತು .
ಶ್ರೀರಾಮಚಂದ್ರಾಪುರ ಮಠದ ಆಡಳಿತದಲ್ಲಿ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯವು ಅಭಿವೃದ್ಧಿ ಹೊಂದುತ್ತಿರುವುದನ್ನು ಸಹಿಸದ ವಿರೋಧಿಗಳು ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಮತ್ತು ಇಲ್ಲಿನ ಕಾರ್ಯಕರ್ತರ ಧೃತಿಗೆಡಿಸಲು ಈ ರೀತಿಯ ಷಡ್ಯಂತ್ರ ರೂಪಿಸಿರಬಹುದು ಎಂದು ಸ್ಥಳೀಯರಲ್ಲಿ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *