ಗೋವಾಲಯಕ್ಕೆ ಸಹಾಯ ಹಸ್ತ ನೀಡಿದ ಹೆಗಡೆ ಶಾಂತಿಕಾ ಪರಮೇಶ್ವರಿ ದೇವಾಲಯ

ಕೋವಿಡ್ – ೧೯ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್ ಡೌನ್ ನ ಬಿಸಿ ಜನಸಾಮಾನ್ಯರಿಗಷ್ಟೇ ಅಲ್ಲದೇ ಭಾರತೀಯ ಗೋ ತಳಿಸಂರಕ್ಷಣೆ ಯಲ್ಲಿ ತೊಡಗಿಕೊಂಡಿರುವ ಕರಾವಳಿ ಭಾಗದ ಏಕೈಕ ಗೋಶಾಲೆ ಯಾದ ಹೊಸಾಡ ಗೋಶಾಲೆಯ ಗೋವುಗಳಿಗೂ ತಟ್ಟಿದೆ. ಗೋಪ್ರೇಮಿಗಳ ಸಹಕಾರದಿಂದಲೇ ನಡೆಯಬೇಕಿದ್ದ ಗೋಶಾಲೆಗೆ ಲಾಕ್ ಡೌನ್ ಪರಿಸ್ಥಿತಿಯಿಂದ ಸಹಜವಾಗಿ ಎಲ್ಲಾ ಆದಾಯದ ಬಾಗಿಲುಗಳೂ ಮುಚ್ಚಿದ್ದು ಹಿಂದೆಂದೂ ಎದುರಿಸದ ಕಷ್ಟ ಎದುರಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಬಡಗೋವುಗಳ ವೇದನೆಯ ಕೂಗು ಉತ್ತರ ಕನ್ನಡದ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಐತಿಹಾಸಿಕ , […]

Continue Reading

ಗೋಶಾಲೆಗಳಿಗೆ ಅನುದಾನಕ್ಕೆ ವಿನಂತಿ

ಕೈರಂಗಳ ಪುಣ್ಯಕೋಟಿನಗರ ಅಮೃತಧಾರಾ ಗೋಶಾಲೆ ಸೇವಾ ಸಮಿತಿಯ ಅಧ್ಯಕ್ಷರಾದ ರಾಜಾರಾಮ ಭಟ್ ರವರು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭೇಟಿ ಮಾಡಿ ಕೊರೋನಾ ಕರ್ಫ್ಯೂನಿಂದಾಗಿ ಹಸುಗಳ ಮೇವಿನ ಸಮಸ್ಯೆ ಬಂದಿರುವ ವಿಷಯವನ್ನು ಮಾನ್ಯ ಸಚಿವರಿಗೆ ಮನವರಿಕೆ ಮಾಡಿ ಅನುದಾನ ಮಂಜೂರು ಮಾಡಬೇಕೆಂದು ವಿನಂತಿಸಿದರು. ಸಮಸ್ಯೆಯನ್ನು ಆಲಿಸಿದ ಸಚಿವರು ಮುಂದೆ ಈ ಬಗ್ಗೆ ತಿರ್ಮಾನ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ಮೂಡಬಿದಿರೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ […]

Continue Reading

೧೦೦ ಚೀಲ ಹಿಂಡಿಯನ್ನು ಗೋಶಾಲೆಗೆ ಕೊಡುಗೆ

ಕೋವಿಡ್ – ೧೯ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್ ಡೌನ್ ಪರಿಸ್ಥತಿಯಿಂದ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದ ಭಾರತೀಯ ಗ್ಯೋಬ್ಯಾಂಕ್ ಹೋಸಾಡ ಗೋಶಾಲೆ ೩೦೦ ಗೋವುಗಳಿಗೆ ಕೆನರಾ ಆಟೋಮೊಬೈಲ್ ಕುಮಟಾ ಆಡಳಿತ ಮಂಡಳಿಯ ಸದಸ್ಯರಾದ ಭರತ ಭಂಡಾರಕರ್ ಅವರು ೧ ಲಕ್ಷಕ್ಕೂ ಹೆಚ್ಚಿನ ಮೌಲ್ಯದ ೧೦೦ ಚೀಲ ಹಿಂಡಿಯನ್ನು ಗೋಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ. ಹುಲ್ಲು ಹಿಂಡಿಯ ದರ ಮುಗಿಲು ಮುಟ್ಟಿದೆ. ಅಲ್ಪ ಸ್ವಲ್ಪ ಆದಾಯ ಬರುತ್ತಿದ್ದ ಗೊಬ್ಬರ ಮಾರಾಟ, ಗವ್ಯೋತ್ಪನ್ನ ಮಾರಾಟದಲ್ಲೂ ಇಳಿಮುಖವಾಗಿದೆ. ವರ್ಷಂಪ್ರತಿ ಗೋಸೇವೆ ಪ್ರಯುಕ್ತ ಈ ಸಮಯದಲ್ಲಿ […]

Continue Reading

ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಶ್ರೀ ಗೋಪಾಲಕೃಷ್ಣ ಪೂಜೆ, ಗೋಪೂಜೆ, ಭಜನೆ

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪುಣ್ಯ ಯೋಜನೆ ಕಾಮದುಘಾದಡಿಯಲ್ಲಿ ಕಾರ್ಯಚರಿಸುತ್ತಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿಯಂದು ಜರಗುವ ಗೋಪೂಜೆ, ಗೋಪಾಲಕೃಷ್ಣ ಪೂಜೆ ಹಾಗೂ ಭಜನೆ ಸೋಮವಾರ ಸಾಯಂಕಾಲ ೬ ರಿಂದ ವೇ. ಮೂ. ಕೃಷ್ಣ ಭಟ್ಟ ಗುಂಡ್ಯಡ್ಕ ಇವರ ನೇತೃತ್ವದಲ್ಲಿ ಜರಗಿತು. ಮಹಾಲಿಂಗೇಶ್ವರ ಭಜನಾ ಮಂಡಳಿ ಬಜಕೂಡ್ಲು ಇವರಿಂದ ಭಜನಾ ಸೇವೆಯು ಈ ಸಂಧರ್ಭದಲ್ಲಿ ಜರಗಿತು.

Continue Reading

ವಿಜಾಪುರದ ಗೋರಕ್ಷಾ ಕೇಂದ್ರ ಗೋಶಾಲೆಯ ಹಿರಿಯ ಮುಖಂಡರ ಬೇಟಿ

ಹೊಸಾಡ ಅಮೃತಧಾರಾ ಗೋಶಾಲೆಗೆ ವಿಜಾಪುರದ ಗೋರಕ್ಷಾ ಕೇಂದ್ರ ಗೋಶಾಲೆಯ ಹಿರಿಯ ಮುಖಂಡರು ಆಗಮಿಸಿ ಗೋಶಾಲೆಯನ್ನು ವೀಕ್ಷಿಸಿದರು. ಅಪಘಾತಕ್ಕೊಳಗಾದ, ಮುದಿ ವಯಸ್ಸಿನ ಮತ್ತು ಕಸಾಯಿಖಾನೆಗೆ ಹೋಗುವ ಗೋವುಗಳನ್ನು ಸಂರಕ್ಷಿಸುತ್ತಿರುವ ಗೋಪಾಲಕರನ್ನು ಮತ್ತು ನಿರ್ವಹಿಸುತ್ತಿರುವ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು. ವಿಜಾಪುರದ ಗೋ ರಕ್ಷಾ ಕೇಂದ್ರ ಗೋಶಾಲೆಯಲ್ಲಿ ೬೫೦ ಕ್ಕೂ ಹೆಚ್ಚಿನ ಗೋವುಗಳನ್ನು ಸಂರಕ್ಷಿಸಲಾಗುತ್ತಿದ್ದು, ನಾಲ್ಕೈದು ಸಂಸ್ಥೆಗಳು ಸೇರಿ ಈ ಗೋಶಾಲೆಯನ್ನು ನಡೆಸುತ್ತಿದ್ದೇವೆ ರಾಮನ ಗೌಡ ಬಾಪು ಗೌಡ ಪಾಟೀಲ್ ಯತ್ನಾಳ ಅವರಿಂದ ಈ ಸಂಸ್ಥೆ ಸ್ಥಾಪನೆಯಾಗಿದೆ. ಪ್ರತಿ ತಿಂಗಳು ೭ […]

Continue Reading

ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ

ಮಹಾನಂದಿ ಗೋಲೋಕದಲ್ಲಿ ವಿರಾಜಮಾನನಾಗಿರುವ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಿಯಲ್ಲಿ ಪ್ರತೀ ಹುಣ್ಣಿಮೆಯಂದು ಸಂಪನ್ನಗೊಳ್ಳುವ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ ನಡೆದಿರುತ್ತದೆ. ೬ನೇ ತಿಂಗಳಿನ ಈ ಪೂಜಾ ಕಾರ್ಯಕ್ರಮವನ್ನು ಪ್ರಧಾನ ಅರ್ಚಕರಾದ ವೇದಮೂರ್ತಿ ಸತೀಶ್ ಭಟ್ ರವರು ವಿಧ್ಯಾರ್ಥಿಗಳಾದ ಭರತ ಹಾಗೂ ಶ್ರೀಹರ್ಷ ಇವರೊಂದಿಗೆ ಸಾಂಗವಾಗಿ ನೆರವೇರಿಸಿಕೊಟ್ಟರು. ಶಿವಮೊಗ್ಗದ ಗುರುರಾಜ್ (ನೆಪ್ಚೂನ್) ದಂಪತಿಗಳ ಯಾಜಮಾನತ್ವದಲ್ಲಿ ನಡೆದಿರುತ್ತದೆ. ಸಮಿತಿಯ ಸದಸ್ಯರುಗಳಾದ ಮಳಲಿ ಅನಂತ ಭಟ್, ಶಂಕರನಾರಾಯಣ ಮಾಗಲು, ಶಂಕರ್ ಭಟ್ ಕಣಿವೆಬಾಗಿಲು, ನೆಲ್ಲುಂಡೆ ನಾಗೇಂದ್ರರಾಯರು ಇವರುಗಳೊಂದಿಗೆ ಗೋಲೋಕದ ಸಿಬ್ಬಂದಿಗಳು, ಗೋಪಾಲಕರು, ಶ್ರೀಮಠದ […]

Continue Reading

ಗೋಶಾಲೆಗೆ ಸಮರ್ಪಣೆ

ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ವೆಂಕಟ್ರಮಣ ಕೋಡುಮಾಡು ಅವರು ವೈವಾಹಿಕ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಸಂದರ್ಭ ೪೦ ಕಿಲೋ ಹಿಂಡಿಯನ್ನು ಗೋಗ್ರಾಸವಾಗಿ ಸಮರ್ಪಿಸಿದರು.

Continue Reading

ಹೋಳಿಗೆ ಮುರಳಿಗಾಯನ

ಹೊಸಾಡಿನ ಅಮೃತಧಾರಾ ಗೋಶಾಲೆಯಲ್ಲಿ ಹೋಳಿ ಹಬ್ಬದ ಸೂರ್ಯಾಸ್ತದ ಸಂದರ್ಭದಲ್ಲಿ ಗೋಲಾಕೃಷ್ಣ ವಿಗ್ರಹದ ಮುಂಭಾಗದಲ್ಲಿ ಮನಕ್ಕೆ ಮುದ ನೀಡುವ ಮುರಳಿ ಗಾಯನ ಹಾಗೂ ಗೋವುಗಳ ವೀಕ್ಷಣೆ ನಡೆಯಿತು.

Continue Reading

ಶಾಸಕ ಅಂಗಾರ ಬೇಟಿ

ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರ ಜೇಡ್ಲ ಸಂಪಾಜೆಗೆ ಸುಳ್ಯ ಶಾಸಕರಾದ ಅಂಗಾರ ಅವರು ಬೇಟಿ ನೀಡಿದರು. ಈ ಸಂದರ್ಭದಲ್ಲಿ ಗೋಶಾಲಾ ಸ್ಥಳ ದಾನಿಗಳಾದ ವೆಂಕಟ್ರಮಣಯ್ಯ ಇವರನ್ನು ಗೌರವಿಸಲಾಯಿತು. ಅರಂತೋಡು ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಸುಳ್ಯ ಭಾಜಾಪ ಅಧ್ಯಕ್ಷ ಹರೀಶ್ ಕಂಜಿಪಿಲಿ, ಹವ್ಯಕ ಮಹಾಮಂಡಲ ಉಪಾಧ್ಯಕ್ಷೆ ಶೈಲಜಾ ಭಟ್ ಕೆ ಟಿ, ಗೋಶಾಲಾ ಶ್ರೀಸಂಯೋಜಕ ತಿರುಮಲೇಶ್ವರ ಪ್ರಸನ್ನ, ಭಾರತೀಯ ಗೋಪರಿವಾರದ ಅಶೋಕ ಕೆದ್ಲ, ಡಾ. ರವಿ, ಮಧುಗೋಮತಿ, ರಾಮಚಂದ್ರ ಅಜ್ಜಕಾನ ಉಪಸ್ಥಿತರಿದ್ದರು.

Continue Reading

ಇರುವ ಸ್ಥಳ ಪರಿಶುದ್ಧತೆಯನ್ನು ಸೂಚಿಸುತ್ತದೆ – ಗಿರೀಶ್ ಭರದ್ವಾಜ

ಸುಳ್ಯ: ಶ್ರದ್ಧೆಯಿಂದ ಸೇವೆ ಮಾಡಿದರೆ ಸಂಪತ್ತು ಹಾಗೂ ಕೀರ್ತಿ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಯುವ ಸಮುದಾಯ ವಿದೇಶದ ಶೋಕೀ ಜೀವನದಕ್ಕೆ ಮಾರು ಹೋಗದೆ ಸ್ವದೇಶೀ ಸಂಸ್ಕೃತಿಯನ್ನು ಪ್ರೀತಿಸುವ ಕಾರ್ಯ ಮಾಡಬೇಕು. ಮಳೆ ನೀರು ಬೀಳುವ ಸ್ಥಳದ ಮೇಲೆ ಪರಿಶುದ್ಧತೆಯನ್ನು ಪಡೆಯುತ್ತದೆ. ವಿದೇಶಿ ತಳಿಗಳನ್ನು ಬಿಟ್ಟು, ನಮ್ಮ ತಳಿಗಳನ್ನು ಸಾಕಿ ಲಾಭ ಪಡೆಯುವ ಸಮಯ ಈಗ ಬಂದಿದೆ. ದೇಶೀ ದನಗಳಷ್ಟು ನಾಜೂಕು ಪ್ರಾಣಿಗಳು ಬೇರೊಂದಿಲ್ಲ, ಅವುಗಳ ದೇಹವನ್ನು ಸವರುವುದರಿಂದ ನಮ್ಮಲ್ಲಿನ ಒತ್ತಡವನ್ನು ಕಮ್ಮಿಮಾಡಿಕೊಳ್ಳಬಹುದಾಗಿದೆ ಎಂದು ಪದ್ಮಶ್ರೀ ಗಿರೀಶ್ ಭರದ್ವಾಜ […]

Continue Reading

ವ್ಯಕ್ತಿಯ ಸಾಧನೆಗೆ ತಾಯಿಯ ಆಶೀರ್ವಾದದ ಬಲ ಬೇಕು: ಜಶೋದಾ ಬೆನ್ ಮೋದಿ

ಹೊಸನಗರ: ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಶಂಕರಾಚಾರ್ಯರಿಗೆ ತಾಯಿಯ ಆಶೀರ್ವಾದ ಬಲ ವಿಶೇಷವಾಗಿತ್ತು. ಪ್ರತಿಯೊಬ್ಬರೂ ಇದನ್ನು ಗಮನಿಸಬೇಕಿದೆ, ಎಲ್ಲಿ ಆಧ್ಮಾತ್ಮಿಕ ಒಲವು ಇದೆಯೋ ಅಲ್ಲಿ ದೈವೀ ಬಲ ಇರಲಿದೆ ಎಂದು ಜಶೋದಾ ಬೆನ್ ಮೋದಿ ಹೇಳಿದರು. ರಾಮಚಂದ್ರಾಪುರಮಠದ ಮಹಾನಂದಿ ಗೋಲೋಕದ ಆವರಣದಲ್ಲಿರುವ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯದಲ್ಲಿ ಬುಧವಾರ ನಡೆದ ಕೋಟಿ ವಿಷ್ಣು ಸಹಸ್ರನಾಮ ಪಠಣ ಸಮರ್ಪಣೆ, ಸಹಸ್ರ ಛತ್ರ ಮೆರವಣಿಗೆ, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಛತ್ರ ಸಮರ್ಪಣೆ, ಸೋಪಾನಮಾಲೆ ನಿರ್ಮಾಣಕ್ಕೆ ಶಿಲಾನ್ಯಾಸ, ಗೋ ಬಂಧಮುಕ್ತಿ, […]

Continue Reading

ಹೊಸನಗರ ಮಹಾನಂದಿ ಗೋಲೋಕದಲ್ಲಿ ವೈಭವದ ‘ಕೃಷ್ಣಾರ್ಪಣಮ್’ ಸಂಪನ್ನ

  ಹೊಸನಗರ: ಹೊಸನಗರದ ಮಹಾನಂದಿ ಗೋಲೋಕದಲ್ಲಿ ಇಂದು ಪ್ರತಿಷ್ಠಾ ವರ್ಧಂತಿ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣದ ಸಮರ್ಪಣೆಯ ‘ಕೃಷ್ಣಾರ್ಪಣಮ್’ ಕಾರ್ಯಕ್ರಮಗಳು ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳವರ ಸಮ್ಮುಖದಲ್ಲಿ ನಡೆದವು. ಬೆಳಗ್ಗೆ 8 ಗಂಟೆಗೆ ಶ್ರೀಕರಾರ್ಚಿತ ಪೂಜೆ, 10 ಗಂಟೆಗೆ ಶ್ರೀಗುರುಭಿಕ್ಷಾ ಸೇವೆಗಳು ನಡೆದವು. 10:45ಕ್ಕೆ ಗೋಬಂಧಮುಕ್ತಿ ಗೋಶಾಲೆ ಲೋಕಾರ್ಪಣೆ ನಡೆಯಿತು. ಶ್ರೀ ದಿನೇಶ್ ಗುರೂಜಿ ಪಟ್ಟಣಗೆರೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಬಳಿಕ ಶ್ರೀಸಂಸ್ಥಾನದವರ ಸಾನಿಧ್ಯದಲ್ಲಿ ಶಿಲಾಸೋಪಾನಮಾಲೆ ಶಿಲಾನ್ಯಾಸ […]

Continue Reading

ಚಿತ್ರ ಸಮರ್ಪಣೆ

ಗೋಸ್ವರ್ಗದಲ್ಲಿ ನಡೆದ ಸರ್ವ ಸೇವಕ ಸಮಾವೇಶದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಗಳವರಿಗೆ ರವೀಂದ್ರ ಹೆಗಡೆ ಅವರು ಬಿಡಿಸಿದ ಚಿತ್ರವನ್ನು ಸಮರ್ಪಿಸಿ ಆಶೀರ್ವಾದ ಮಂತ್ರಾಕ್ಷತೆ ಪಡೆದರು.

Continue Reading

ಸೇವಕತ್ವ ದೇವತ್ವಕ್ಕೆ ಹತ್ತಿರ: ರಾಘವೇಶ್ವರ ಶ್ರೀ

ಸಿದ್ದಾಪುರ : ಸೇವಕತ್ವ ಕನಿಷ್ಟವಲ್ಲ, ಮನುಷ್ಯತ್ವಕ್ಕಿಂತ ಮೇಲಿನ ಮೆಟ್ಟಿಲು, ಅದು ಶ್ರೇಷ್ಠ. ನಾನು ನನಗಾಗಿ ಎಂದು ಸಾಮಾನ್ಯರು ಯೋಚಿಸಿದರೆ ದೇವರು ಅನವರತ ವಿಶ್ವಹಿತ ಚಿಂತನೆ ಮಾಡುತ್ತಾನೆ. ಸಮಾಜಕ್ಕಾಗಿ ಬದುಕುವವರು ದೇವರೇ ಆಗುತ್ತಾರೆ, ಸಾರ್ವಭೌಮನಾದ ಶ್ರೀರಾಮಚಂದ್ರನೂ ತನ್ನ ಬಗ್ಗೆ ಚಿಂತನೆ ನಡೆಸದೇ ಜೀವಕೋಟಿಗಳ ಕಲ್ಯಾಣಕ್ಕಾಗಿ, ಸರ್ವಭೂಮಿಯ ಹಿತಚಿಂತನೆಗಾಗಿ ಕಾರ್ಯ ಮಾಡುತ್ತಾನೆ ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು. ಶ್ರೀರಾಮದೇವ ಭಾನ್ಕುಳಿ ಮಠ ಆವಾರದ ಗೋಸ್ವರ್ಗದಲ್ಲಿ ಹಮ್ಮಿಕೊಂಡಿದ್ದ “ಸರ್ವಸೇವಕ ಸಮಾವೇಶ”ದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸರ್ವಭೂಮಿಯ ಹಿತಚಿಂತನೆ […]

Continue Reading

ಯಶಸ್ವಿಯಾದ ಗೋ ಸಂಧ್ಯಾ ಕಾರ್ಯಕ್ರಮ : ಸಾಕ್ಷಿಯಾದ ನಾಲ್ಕು ಸಾವಿರಕ್ಕೂ ಅಧಿಕ ಜನ

ಕುಮಟಾ: ಜಗತ್ತಿನ ಏಕೈಕ ಗೋ ಬ್ಯಾಂಕ್ ಎನಿಸಿಕೊಂಡಿರುವ ದೇಸೀ ಗೋ ತಳಿಯ ಸಂರಕ್ಷಣೆ ಹಾಗೂ ಸಂವರ್ಧನೆಗೆ ತನ್ನದೇ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಹೊಸಾಡದ ಅಮೃತಧಾರಾ ಗೋ ಶಾಲೆಯಲ್ಲಿ ಶ್ರೀ ಸಂಸ್ಥಾನದ ದಿವ್ಯ ಆಶೀರ್ವಾದದೊಂದಿಗೆ ನಡೆದ ಗೋ ಪ್ರೇಮಿಗಳ ವಾರ್ಷಿಕ ಗೋ ಸ್ನೇಹಕೂಟ ಹಾಗೂ ಬೆಳದಿಂಗಳೂಟದ ವಿಶೇಷ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಅಮೃತಧಾರಾ ಗೋಶಾಲೆಯ ಗೌರವಾಧ್ಯಕ್ಷರಾದ ಭಾರತೀ ಪಾಟಿಲ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪವಿತ್ರ ಗೋಮೂತ್ರ ಅರ್ಕದಿಂದ ಮಾಡಲ್ಪಟ್ಟ ಗೋ-ನಿರ್ಮಲ (ಫಿನೈಲ್ […]

Continue Reading

ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ

ಮಹಾನಂದಿ ಗೋಲೋಕದಲ್ಲಿ ವಿರಾಜಮಾನಸ್ಥನಾಗಿರುವ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಿಯಲ್ಲಿ ಪ್ರತೀ ಹುಣ್ಣಿಮೆಯಂದು ಸಂಪನ್ನಗೊಳ್ಳುವ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ ನಡೆದಿರುತ್ತದೆ. ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಸತೀಶ್ ಭಟ್ ನೇತೃತ್ವದಲ್ಲಿ ಶ್ರೀಯುತ ಮಂಜುನಾಥ ಭಟ್ ದಂಪತಿಗಳು ಮಳಲಿ ಇವರ ಯಾಜಮಾನತ್ವದಲ್ಲಿ ಈ ಕಾರ್ಯಕ್ರಮ ಸಾಂಗವಾಗಿ ನೆರವೇರಿದೆ. ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭವಾಗಿ ೫ ಹುಣ್ಣಿಮೆ ಕಳೆಯಿತು. ಈ ಬಾರಿ ನೂರಹದಿನೈದು ಪೂಜೆಗಳು ನೆರವೇರಿವೆ. ಈ ಸಂದರ್ಭದಲ್ಲಿ ಅಧ್ಯಕ್ಷರು ಡಾ.ಸೀತಾರಾಮ್ ಪ್ರಸಾದ್, ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ದಿವಾಕರ್ ಭಟ್, ಶಿವರಾಮ್ ಭಟ್ […]

Continue Reading

ಹೊಸಾಡುವಿನಲ್ಲಿ ಗೋ ಸಂಧ್ಯಾ

ಹೊಸಾಡು ಅಮೃತಧಾರಾ ಗೋಬ್ಯಾಂಕ್ ಆರವರಣದಲ್ಲಿ ಫೆ.೮ರಂದು ಸಂಜೆ ೫ಗಂಟೆಗೆ ಗೋಪ್ರೇಮಿಗಳ ವಾರ್ಷಿಕ ಗೋ ಸ್ನೇಹಕೂಟ ಹಾಗೂ ಬೆಳದಿಂಗಳೂಟ ಕಾರ್ಯಕ್ರಮ ಗೋಸಂಧ್ಯಾ ಗೋವಿನತ್ತ ನಮ್ಮ ಚಿತ್ತ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಶಾಲೆ ಗೌರವಾಧ್ಯಕ್ಷೆ ಭಾರತಿ ಪಾಟೀಲ ವಹಿಸಲಿದ್ದು, ಕುಮಟಾ – ಹೊನ್ನಾವರ ಶಾಸಕ ದಿನಕರ ಕೆ. ಶೆಟ್ಟಿ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಭಟ್ಕಳ – ಹಿನ್ನಾವರ ಶಾಸಕ ಸುನೀಲ ನಾಯ್ಕ, ಯಲ್ಲಾಪುರ ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಭಾಗವಹಿಸಲಿದ್ದಾರೆ. ಲಾಸಾ ಸೂಪರ್ ಜೆನಿರಿಕ್ಸ್ ನಿರ್ದೇಶಕ ಎಸ್. ಜಿ. […]

Continue Reading

ಗೋಸ್ವರ್ಗಕ್ಕೆ ಬೇಟಿ

ಗೋಸ್ವರ್ಗ: ಮುಖ್ಯಮಂತ್ರಿ ಯಡಿಯೂರಪ್ಪನವರ ತಾಂತ್ರಿಕ ಸಲಹೆಗಾರರಾದ ನಾಗರಾಜಯ್ಯ ಮತ್ತು ಎಸ್ ರಮೇಶ್ ಅವರು ಗೋಸ್ವರ್ಗಕ್ಕೆಬೇಟಿ ನೀಡಿ ಗೋವುಗಳ ಜತೆಗೆ ಕಾಲ ಕಳೆದರು. ಗೋವುಗಳ ಮಾಹಿತಿ ಪಡೆದುಕೊಂಡು ಸಂತಸ ಪಟ್ಟರು. ಗುರುಮೂರ್ತಿ ಶಿಕಾರಿಪುರ ಅವರು ಜೋತೆಗಿದ್ದರು.

Continue Reading

ಗೋಸಂಕ್ರಾಂತಿ ಆಚರಣೆ

ಮಾಲೂರು: ಬೆಂಗಳೂರು ಗಾಯಿತ್ರಿ ಪರಿವಾರದ ಸುಮಾರು ೧೫೦ ಸದಸ್ಯರನ್ನೊಳಗೊಂಡು ತಂಡ ಮಾಲೂರು ಶ್ರೀ ರಾಘವೇಂದ್ರ ಗೋ ಆಶ್ರಮದಲ್ಲಿ ವಿಜೃಂಭಣೆಯಿಂದ ಗೋಸಂಕ್ರಾಂತಿ ಆಚರಿಸಿದರು. ಅನಿಲ್, ಪಟೇಲ್, ಪ್ರಫುಲ್, ಗೋಶಾಲೆ ಪರವಾಗಿ ಮಹಾಬೀರ್ ಸೋನಿಕ, ಕೃಷ್ಣ ಭಟ್, ಮುರಳೀಕೃಷ್ಣ, ಮಂಜುನಾಥ್ ಭಟ್, ಅನಂತ, ಲಕ್ಷ್ಮೀಶ ಮತ್ತಿತರರು ಹಾಜರಿದ್ದರು.

Continue Reading

ಗೋವುಗಳಿಗೆ ಮೇವು

ಬಜಕೂಡ್ಲು: ಅಮೃತಧಾರಾ ಗೋಶಾಲೆಯ ಗೋವುಗಳ ಮೇವಿಗಾಗಿ ಉಮೇಶ ಸಾಲೆ ಅವರು ತಮ್ಮ ಹಾಳೆ ತಟ್ಟೆ ತಯಾರಿಕಾ ಘಟಕದಿಂದ ಒಂದು ಫಿಕ್‌ಅಪ್ ಹಾಳೆಯ ಮೇವನ್ನು ಗೋವುಗಳಿಗಾಗಿ ಸಮರ್ಪಿಸಿದರು. ಅಜಿತ್ ಕುಂಚಿನಡ್ಕ, ಗಣರಾಜ ಕಡಪ್ಪು, ರಾಮ ಮೂಲ್ಯ ಈ ಕಾರ್ಯಕ್ಕೆ ಸಹಾಯವಿತ್ತರು.

Continue Reading