೧೦೦ ಚೀಲ ಹಿಂಡಿಯನ್ನು ಗೋಶಾಲೆಗೆ ಕೊಡುಗೆ

ಗೋಶಾಲಾ

ಕೋವಿಡ್ – ೧೯ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್ ಡೌನ್ ಪರಿಸ್ಥತಿಯಿಂದ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದ ಭಾರತೀಯ ಗ್ಯೋಬ್ಯಾಂಕ್ ಹೋಸಾಡ ಗೋಶಾಲೆ ೩೦೦ ಗೋವುಗಳಿಗೆ ಕೆನರಾ ಆಟೋಮೊಬೈಲ್ ಕುಮಟಾ ಆಡಳಿತ ಮಂಡಳಿಯ ಸದಸ್ಯರಾದ ಭರತ ಭಂಡಾರಕರ್ ಅವರು ೧ ಲಕ್ಷಕ್ಕೂ ಹೆಚ್ಚಿನ ಮೌಲ್ಯದ ೧೦೦ ಚೀಲ ಹಿಂಡಿಯನ್ನು ಗೋಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ.

ಹುಲ್ಲು ಹಿಂಡಿಯ ದರ ಮುಗಿಲು ಮುಟ್ಟಿದೆ. ಅಲ್ಪ ಸ್ವಲ್ಪ ಆದಾಯ ಬರುತ್ತಿದ್ದ ಗೊಬ್ಬರ ಮಾರಾಟ, ಗವ್ಯೋತ್ಪನ್ನ ಮಾರಾಟದಲ್ಲೂ ಇಳಿಮುಖವಾಗಿದೆ. ವರ್ಷಂಪ್ರತಿ ಗೋಸೇವೆ ಪ್ರಯುಕ್ತ ಈ ಸಮಯದಲ್ಲಿ ಎಷ್ಟೋ ಪ್ರವಾಸಿಗರು, ದಾನಿಗಳು, ಉದ್ಯಮಿಗಳು, ವ್ಯಾಪಾರಿಗಳು ಆಗಮಿಸಿ ಗೋಗ್ರಾಸ, ಹುಲ್ಲು ಹಿಂಡಿಯನ್ನು ನೀಡುತ್ತಿದ್ದರು. ಆದರೆ ಸದ್ಯದ ಪರಿಸ್ಥಿತಿಯಿಂದ ದಾನಿಗಳ ನೆರವಿನಲ್ಲೂ ಸಹಜವಾಗಿ ಕ್ಷೀಣವಾಗಿದೆ.

Author Details


Srimukha

Leave a Reply

Your email address will not be published. Required fields are marked *