ಕೋವಿಡ್ – ೧೯ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್ ಡೌನ್ ನ ಬಿಸಿ ಜನಸಾಮಾನ್ಯರಿಗಷ್ಟೇ ಅಲ್ಲದೇ ಭಾರತೀಯ ಗೋ ತಳಿಸಂರಕ್ಷಣೆ ಯಲ್ಲಿ ತೊಡಗಿಕೊಂಡಿರುವ ಕರಾವಳಿ ಭಾಗದ ಏಕೈಕ ಗೋಶಾಲೆ ಯಾದ ಹೊಸಾಡ ಗೋಶಾಲೆಯ ಗೋವುಗಳಿಗೂ ತಟ್ಟಿದೆ.
ಗೋಪ್ರೇಮಿಗಳ ಸಹಕಾರದಿಂದಲೇ ನಡೆಯಬೇಕಿದ್ದ ಗೋಶಾಲೆಗೆ ಲಾಕ್ ಡೌನ್ ಪರಿಸ್ಥಿತಿಯಿಂದ ಸಹಜವಾಗಿ ಎಲ್ಲಾ ಆದಾಯದ ಬಾಗಿಲುಗಳೂ ಮುಚ್ಚಿದ್ದು ಹಿಂದೆಂದೂ ಎದುರಿಸದ ಕಷ್ಟ ಎದುರಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಬಡಗೋವುಗಳ ವೇದನೆಯ ಕೂಗು ಉತ್ತರ ಕನ್ನಡದ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಐತಿಹಾಸಿಕ , ಸುಪ್ರಸಿದ್ಧ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಗೆ ಮುಟ್ಟಿದೆ. ತಕ್ಷಣವೇ ಸ್ಪಂದಿಸಿ ೫೦ ಸಾವಿರ ಚೆಕ್ ದೇಣಿಗೆ ನೀಡಿ ನೆರವಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ವಾರ್ಷಿಕವಾಗಿ ದೇಣಿಗೆ ನೀಡುತ್ತಾ ಅಳಿವಿನಂಚಿನಲ್ಲಿರುವ ಭಾರತೀಯ ಗೋತಳಿ ಸಂರಕ್ಷಣೆಗೆ ಕೈ ಜೋಡಿಸಿದ ಜಿಲ್ಲೆಯ ಪ್ರಪ್ರಥಮ ದೇವಸ್ಥಾನ ವಾಗಿದೆ.