ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ

ಗೋಲೋಕ: ಹೊಸನಗರ ಮಹಾನಂದಿ ಗೋಲೋಕದಲ್ಲಿ ವಿರಾಜಮಾನನಾಗಿರುವ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಾನದಲ್ಲಿ ಪ್ರತೀ ಹುಣ್ಣಿಮೆಯಂದು ನಡೆಯುವ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ ಸಂಪನ್ನಗೊಂಡಿದೆ. ಪ್ರಧಾನ ಅರ್ಚಕರಾದ ವೇದ ಮೂರ್ತಿ ಸತೀಶ್ ಭಟ್ ನೇತೃತ್ವದಲ್ಲಿ ಪ್ರಕಾಶ್ ಭಟ್ ದಂಪತಿಗಳು ಶಿವಮೊಗ್ಗ ಇವರ ಯಾಜಮಾನತ್ವದಲ್ಲಿ ಈ ಕಾರ್ಯಕ್ರಮ ನೆರವೇರಿದೆ. ಸುಮಾರು ನೂರನಲವತ್ತೈದು ಪೂಜೆ ನೆರವೇರುವುದರೊಂದಿಗೆ ನೂರಾರು ಗೋಭಕ್ತರು ಭಾಗವಹಿಸಿದ್ದರು. ಕೃಷ್ಣಪ್ರಸಾದ ಎಡಪ್ಪಾಡಿ, ಜಿ.ಟಿ.ದಿವಾಕರ್, ಶಿವರಾಮ್ ಭಟ್, ಕೃಷ್ಣರಾಜ್ ಅರಸ್, ಇವರುಗಳೊಂದಿಗೆ ಗೋಲೋಕ ಸಮಿತಿಯ ಸದಸ್ಯರುಗಳು ಕೂಡ ಭಾಗವಹಿಸಿದ್ದರು. ಸಂಜೆ ೬ ಗಂಟೆಗೆ […]

Continue Reading

ಗೋವುಗಳ ದತ್ತು ಸ್ವೀಕಾರ

ಹೊಸಾಡ: ಅಮೃತಧಾರಾ ಗೋಬ್ಯಾಂಕ್‌ಗೆ ಲಾಸಾ ಸೂಪರ್ ಜೆನಿರಿಕ್ ನಿರ್ದೇಶಕ ಶಿವಾನಂದ ಜಿ. ಹೆಗಡೆ ಮತ್ತು ಸಹೋದ್ಯೋಗಿಗಳು ಆಗಮಿಸಿ ಅಭಯ ಗೋ ದತ್ತು ಯೋಜನೆಯಡಿಯಲ್ಲಿ ೫೦ ಗೋವುಗಳನ್ನು ದತ್ತು ಸ್ವೀಕರಿಸಿ ಹೊಸ ಚರಿತ್ರೆಯನ್ನು ಸೃಷ್ಟಿಸಿದರು.

Continue Reading

ಪಶು ಆಹಾರ ಸಮರ್ಪಣೆ

ಬಜಗೋಡ್ಲು: ಇಡಿಯಡ್ಕದ ಶಂಕರನಾರಾಯಣ ಭಟ್ ಮತ್ತು ಶಕುಂತಲಾ ಬಜಗೋಡ್ಲುಗೋಶಾಲೆಗೆ ಆಗಮಿಸಿ, ಒಂದು ಚೀಲ ಬೂಸಾ ಸಮರ್ಪಿಸಿದರಲ್ಲದೆ ತಾವೇ ಕೈಯಾರೆ ಗೋವುಗಳಿಗೆ ನೀಡುವ ಕೆಲಸವನ್ನೂ ಮಾಡಿದರು.

Continue Reading

ಗೋವುಗಳ ಮೇವುಗಾಗಿ ಮುಳಿಹುಲ್ಲು ಸಂಗ್ರಹ

ಬಜಕೂಡ್ಲು: ಅಮೃತಧಾರಾ ಗೋಶಾಲೆಯ ಗೋವುಗಳ ಮೇವುಗಾಗಿ ಮುಳಿಹುಲ್ಲು ಸಂಗ್ರಹಿಸುವ ಶ್ರಮದಾನವು ಜ.೧೨ ದಂದು ಪೆರ್ಲ ಪರಿಸರದಲ್ಲಿ ಜರಗಿತು. ಶ್ರಮದಾನದಲ್ಲಿ ಅಕ್ಷಯ ಯುವಕ ಮಂಡಲ ಬಿರ್ಮುಲೆಯ ಮಾಧವ, ಪ್ರಕಾಶ್ ಕಾಮತ್, ರವಿ, ರಮೇಶ, ಸದಾಶಿವ, ವಿನೋದ, ಗಂಗಾಧರ, ರೋಹಿತ್ ಕುಲಾಲ್, ರಮೇಶ ನಾಯಕ್, ಹಾಗು ಹುಲ್ಲು ಕತ್ತರಿಸುವ ಯಂತ್ರದಲ್ಲಿ ಉತ್ತರ ಪ್ರದೇಶದ ಗೌತಮ್, ಬಿಮಲ್,ಶೇರ್ ಸಿಂಗ್ ಹಾಗು ಅನಿಲ್ ಮತ್ತು ಹುಲ್ಲು ಸಾಗಾಟದಲ್ಲಿ ಶಿವಪ್ರಸಾದ್ ಟ್ರನ್ಸಪೋರ್ಟನ ರಾಮಣ್ಣ ಸಹಕರಿಸಿದರು. ಶ್ರಮದಾನದಲ್ಲಿ ಮುಳ್ಳೇರಿಯಾ ಮಹಾಮಂಡಲದ ಅಧ್ಯಕ್ಷರು, ಎಣ್ಮಕಜೆ ಹವ್ಯಕ ವಲಯದ […]

Continue Reading

ಗೋವಿನ ಜತೆಗೆ ಚಿಗುರು ತಂಡ

ಮಾಲೂರು: ಶ್ರೀರಾಘವೇಂದ್ರ ಗೋ ಆಶ್ರಮದಲ್ಲಿ “ಚಿಗುರು” ಗ್ರೂಪ್ ನ ೨೦ ಸದಸ್ಯರು ಗೋ ವೀಕ್ ಎಂಡ್ ಆಚರಿಸಿದರು. ಜ.೧೧ ಸಂಜೆಯಿಂದ ಜ. ೧೨ ಸಂಜೆಯವರೆಗೆ ಶ್ರೀ ರಾಘವೇಂದ್ರ ಗೋ ಆಶ್ರಮದಲ್ಲಿ ವಿಹರಿಸಿ, ವಿವಿಧ ಆಟೋಟ, ಚಟುವಟಿಕೆ ನಡೆಸಿ ಗೋ ಶಾಲೆಗೂ ಕಾಣಿಕೆ ಸಮರ್ಪಿಸಿದರು.

Continue Reading

ಗೋಪಾಲ್ಸ್ ಟೀಮ್ ಸಂಕ್ರಮಣ ಆಚರಣೆ

ಮಾಲೂರು: ಗೋಪಾಲ್ಸ್ ಟೀಮ್ನ್ ಸುಮಾರು ೫೦೦ ಜನ ಶ್ರೀ ರಾಘವೇಂದ್ರ ಗೋ ಆಶ್ರಮದಲ್ಲಿ ಸಂಕ್ರಮಣ ಆಚರಣೆ ಮಾಡಿ ಸಂತೋಷ ಪಟ್ಟರು. ಗೋ ಶಾಲೆ ವತಿಯಿಂದ ಎತ್ತಿನಬಂಡಿ ಸವಾರಿ, ಎಲ್ಲರಿಗೂ ಊಟೋ ಪಚಾರ ಮಾಡಲಾಯಿತು. ಕಾರ್ಯಕ್ರಮಕ್ಕೆ ಗೋಶಾಲೆಯ ಎಲ್ಲರೂ ಗೋಪಾಲ್ಸ್ ತಂಡಕ್ಕೆ ಸಂಪೂರ್ಣ ಸಹಕಾರ ನೀಡಿದರು.

Continue Reading

ಶ್ರೀನಿಕೇತನ ಚಿಣ್ಣರು ಗೋಸ್ವರ್ಗದಲ್ಲಿ

ಗೋಸ್ವರ್ಗ: ಸೋಂದಾ ಸ್ವರ್ಣವಲ್ಲೀ ಮಠದ ಆಡಳಿತದಲ್ಲಿರುವ ಶಿರಸಿ ಇಸಳೂರು ಶ್ರೀನಿಕೇತನ ಶಿಕ್ಷಣ ಸಂಸ್ಥೆಯ ೩೫೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಗೋಸ್ವರ್ಗಕ್ಕೆ ಆಗಮಿಸಿದ್ದರು. ಶಾಲಾ ಪ್ರವಾಸಕ್ಕಾಗಿ ಬಂದ ವಿದ್ಯಾರ್ಥಿಗಳು ಗೋವುಗಳ ಸಮೂಹ, ಗೋತೀರ್ಥದ ವರ್ಣಮಯ ಮತ್ಸ್ಯಗಳನ್ನು ನೋಡಿ ಹರ್ಷಗೊಂಡರು. ಹಲವು ಸ್ಥಳಗಳ ಸಂದರ್ಶನದಿಂದ ದಣಿವಾಗಿ ಬಂದ ಚಿಣ್ಣರಿಗೆ ಗೋಸ್ವರ್ಗದ ಗೋಸ್ವಾದು ತಂಪನ್ನೆರೆಯಿತು. ಗೋಸ್ವರ್ಗ, ಶ್ರೀರಾಮ ಸನ್ನಿಧಿಯ ದರ್ಶನ ಪೂರೈಸಿ ಗೋಸ್ವರ್ಗದ ಪ್ರಸಾದ ಭೋಜನ ಸ್ವೀಕರಿಸಿದ ವಿದ್ಯಾರ್ಥಿಗಳು ಭಾನ್ಕುಳಿ ಮಠದ ವಿಶಾಲ ಅಂಗಳದಲ್ಲಿ ನಲಿದಾಡಿದರು. ವಿದ್ಯಾರ್ಥಿಗಳ ಜೊತೆ ಪಾಲಕರು, ಶಿಕ್ಷಕ ವೃಂದದವರು […]

Continue Reading

ಆರ್ಟ್ ಒಫ್ ಲಿವಿಂಗ್ ಸಂಸ್ಥೆಯ ಕುಮಟಾ ವಿಭಾಗದಿಂದ ಒಂದು ದಿನದ ಶಿಬಿರ

ಹೊಸಾಡ: ಅಮೃತಧಾರ ಗೋಶಾಲೆಯಲ್ಲಿ ಶ್ರೀ ರವಿಶಂಕರ ಗುರೂಜಿಗಳ ಶಿಷ್ಯವೃಂದದ ಆರ್ಟ್ ಒಫ್ ಲಿವಿಂಗ್ ಸಂಸ್ಥೆಯ ಕುಮಟಾ ವಿಭಾಗದಿಂದ ಒಂದು ದಿನದ ಶಿಬಿರ ವನ್ನು ಏರ್ಪಡಿಸಿಲಾಗಿತ್ತು. ಕಾಮಧೇನು ಪೂಜೆ, ಭಾರತೀಯ ಗೋ ತಳಿ ಗೋವುಗಳ ದರ್ಶನ, ಧ್ಯಾನ, ಗುರು ಪೂಜೆ, ಭಜನೆ, ಶಾಹಿನಾಯಿ ವಾದನ, ಗವ್ಯೋತ್ಪನ್ನದ ಪ್ರಾಮುಖ್ಯತೆ ಹೀಗೆ ಹಲವು ಸಂಸ್ಕೃತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ೫೦ ಕಾರ್ಯಕರ್ತರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾದ ದತ್ತಾತ್ರೇಯ ಭಟ್ಟ ಹುಬ್ಬಳ್ಳಿ ಯವರು ಆಗಮಿಸಿ ಗವ್ಯೋತ್ಪನ್ನದ ಪ್ರಾಮುಖ್ಯತೆಯನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ […]

Continue Reading

ಶಿರಸಿಯ ಮಾರ್ವಾಡಿ ವಿಷ್ಣು ಸಮಾಜ ಬಾಂಧವರಿಂದ ಗೋಗ್ರಾಸ ಸಮರ್ಪಣೆ

ಗೋಸ್ವರ್ಗ: ಗೋವುಗಳಿಗೆ ಅಮವಾಸ್ಯೆ ಹಾಗೂ ಗ್ರಹಣದ ದಿನದಂದು ಶಿರಸಿಯ ಮಾರ್ವಾಡಿ ವಿಷ್ಣು ಸಮಾಜ ಬಾಂಧವರು ಗೋಗ್ರಾಸ ಸಮರ್ಪಿಸಿದರು. ಗೋಪ್ರೀಮಿಗಳಾದ ಶಿರಸಿಯಲ್ಲಿ ನೆಲೆಸಿರುವ ರಾಜಸ್ಥಾನದ ಮಾರ್ವಾಡಿ ಸಮಾಜದವರು 50ಕೆ.ಜಿ ಹಿಂಡಿ ಹಾಗೂ 50ಕೆ.ಜಿ ಬೆಲ್ಲವನ್ನು ತಂದು ಗೋಸ್ವರ್ಗದ ಗೋವುಗಳಿಗೆ ನೀಡಿದರು.

Continue Reading

ಮಾತೃತ್ವಮ್ ನಿಂದ ಮೇವು ಸ್ವಾಗತ

ಗೋಸ್ವರ್ಗ: ಮಾತೃತ್ವಮ್ ಸಂಘಟನೆಯಿಂದ ಗೋಸ್ವರ್ಗ ೨ ಲಾರಿ ಮೇವನ್ನು ಬರಮಾಡಿಕೊಳ್ಳಲಾಯಿತು. ಸಿದ್ದಾಪುರ ನಗರದ ಮಾತೃತ್ವಮ್ ಅಧ್ಯಕ್ಷೆ ರಾಧಿಕಾ ಭಟ್ಟ, ಕಾರ್ಯದರ್ಶಿ ಚಂದ್ರಮತಿ ಆರ್ ಹೆಗಡೆ ಹರ್ಗಿ, ಕೋಶಾಧ್ಯಕ್ಷೆ ಮೇಧಾ ಭಟ್ಟ, ಭವತಾರಿಣಿ ಸಮತಿಯ ಅಧ್ಯಕ್ಷೆ ಸಾವಿತ್ರಿ ಹೆಗಡೆ, ಹಾಗೂ ಮಾಸದ ಮಾತೆಯರಾದ ಇಂದಿರಾ ಶಾನಭಾಗ, ಸರಸ್ವತಿ ಹೆಗಡೆ, ಅನಿತಾ ಭಟ್ಟ, ಪೂಜಾಭುವನಿ, ಸುಜಯಾ ಹೆಗಡೆ, ಹೇಮಾ ಅಡಿಗಳ್, ಹಾಗೂ ಗೀತಾ ಹೆಗಡೆ,ಪಧ್ಮಾ ಹೆಗಡೆ, ಸಂದರ್ಭದಲ್ಲಿಪಾಲ್ಗೊಂಡರು.

Continue Reading

ವಿಧ್ಯಾರ್ಥಿ ವಿಕಸನ ಶಿಬಿರ ಮತ್ತು ಸಂತತಿ ಮಂಗಲ

ಗೋಸ್ವರ್ಗ: ಶ್ರೀರಾಮದೇವ ಭಾನ್ಕುಳಿಮಠದಲ್ಲಿ ಸಿದ್ದಾಪುರ ಮಂಡಲದ ಮಾತೃವಿಭಾಗ ಮತ್ತು ವಿದ್ಯಾರ್ಥಿ ವಿಭಾಗದ ಸಂಯೋಜನೆಯಲ್ಲಿ ಮಂಡಲ ಮತ್ತು ಎಲ್ಲಾ ವಲಯಗಳ ಸಹಭಾಗಿತ್ವದಲ್ಲಿ ವಿಧ್ಯಾರ್ಥಿ ವಿಕಸನ ಶಿಬಿರ ಮತ್ತು ಸಂತತಿ ಮಂಗಲ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮ ಉದ್ಘಾಟಿಸಿದ ಮಹಾಮಂಡಲದ ಅಧ್ಯಕ್ಷರಾದ ಆರ್ ಎಸ್ ಹೆಗಡೆ ಮಾತನ್ನಾಡುತ್ತ ಶ್ರೀ ರಾಮಚಂದ್ರಾಪುರ ಮಠವು ಮಹಾಮಂಡಲ ವ್ಯಾಪ್ತಿಯಲ್ಲಿ ಪ್ರತೀ ಮಂಡಲದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದೆ, ಪ್ರತೀ ಶಿಷ್ಯರು ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದು ಹವ್ಯಕ ಧರ್ಮದ ಮಹತ್ವವನ್ನು ಅರಿತು ನಡೆಯಬೇಕಾಗಿದೆಯೆಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಶಿಕ್ಷಣ […]

Continue Reading

ಗೋವುಗಳ ಜತೆಗೆ ಹುಟ್ಟು ಹಬ್ಬ ಆಚರಣೆ

ಹೊಸಾಡ: ಪಾಶ್ಚಾತ್ಯ ಸಂಸ್ಕೃತಿಯಂತೆ ಜನ್ಮದಿನವನ್ನು ಆಚರಿಸುವ ಈ ದಿನದಲ್ಲಿ ಗೋವಿನ ಜೊತೆ ಆಚರಿಸಿದ ಗೋಪ್ರೇಮಿಯೊಬ್ಬರು ಎಲ್ಲರಿಗೂ ಮಾದರಿಯಾಗಿದ್ದಾರೆ. ಕಿಶೋರ ಶೆಟ್ಟಿ ಕುಮಟಾ ಇವರು ತಮ್ಮ ಜನ್ಮದಿನವನ್ನು ಹೊಸಾಡ ಗೋಶಾಲೆಯಲ್ಲಿರುವ ಗೋವುಗಳ ಜೊತೆಗೆ ಆಚರಿಸಿದರು. ಬದುಕಿನುದ್ದಕ್ಕೂ ಅಮೃತವನ್ನು ನೀಡುವ ಗೋವೆ ನಮ್ಮ ಮಾತೆ ಎಂಬ ಭಾವ ಅವರದಾಗಿದೆ.

Continue Reading

ಮಾತೃತ್ವಮ್‍ನಿಂದ 10 ಲಕ್ಷ ರೂಪಾಯಿ ಮೌಲ್ಯದ ಮೇವು ವಿತರಣೆ

ವೇಣೂರು: ಸಮಾಜದ ಸಹಭಾಗಿತ್ವದಲ್ಲಿ ಭಾರತೀಯ ಗೋ ತಳಿಗಳನ್ನು ಸಂರಕ್ಷಿಸುವ ಮೌನ ಕ್ರಾಂತಿಗೆ ಮಾತೃತ್ವಮ್ ಮುನ್ನುಡಿ ಬರೆದಿದೆ ಎಂದು ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ನುಡಿದರು. ಭಾರತೀಯ ಗೋತಳಿಗಳನ್ನು ಉಳಿಸಿ ಬೆಳೆಸುವ ಗೋಶಾಲೆಗಳಿಗೆ 10 ಲಕ್ಷ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಸುಮಾರು 60 ಲೋಡ್ ಒಣಹುಲ್ಲು ವಿತರಿಸುವ ಯೋಜನೆ ಅಂಗವಾಗಿ ವೇಣೂರು ಸಮೀಪದ ಗುಂಡೂರು ಅಮೃತಧಾರಾ ಗೋಶಾಲೆಗೆ ಸಾಂಕೇತಿಕವಾಗಿ ಒಂದು ಲೋಡ್ ಒಣಹುಲ್ಲು ಹಸ್ತಾಂತರಿಸಿ ಅವರು ಮಾತನಾಡಿದರು. “ಗೋವಿನ ಹೊಟ್ಟೆ ತಣಿಸುವ ಪುಣ್ಯ ಕೆಲಸದಲ್ಲಿ ಸಾವಿರಾರು ಮಂದಿ ಮಾತೆಯರು […]

Continue Reading

ಬಜಕೂಡ್ಲು ಗೋಶಾಲೆಯಲ್ಲಿ ದೇಶೀ ಗೋಮಯದ ಹಣತೆ ತಯಾರಿ

ಬಜಕೂಡ್ಲು: ಕಾಮದುಘಾ ಯೋಜನೆಯಡಿ ಕಾರ್ಯಾಚರಿಸುತ್ತಿರುವ ಅಮೃತಧಾರಾ ಗೋಶಾಲೆ, ಗೋಲೋಕ ಬಜಕೂಡ್ಲು ಇಲ್ಲಿ ಸ್ವಚ್ಛ ಭಾರತ ಪರಿಕಲ್ಪನೆಯಲ್ಲಿ ದೇಶೀ ಗೋವಿನ ಗೋಮಯದಿಂದ ಪ್ರಾಯೋಗಿಕವಾಗಿ ಹಣತೆಗಳನ್ನು ಯಶಸ್ವಿಯಾಗಿ ತಯಾರಿಸಲಾಯಿತು. ಮುಂದಿನ ಹಂತದಲ್ಲಿ ಬೃಹತ್ ಮಟ್ಟದಲ್ಲಿ ಗೋಮಯದ ಹಣತೆಗಳನ್ನು ತಯಾರಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಗೋಶಾಲೆಯ ಪದಾಧಿಕಾರಿಗಳಾಗಿರುವ ಜಗದೀಶ್ ಗೋಳಿತ್ತಡ್ಕ, ಗಣರಾಜ ಕಡಪ್ಪು ಇವರು ಯೋಜನೆಯ ರೂವಾರಿಗಳಾಗಿ ಕಾರ್ಯನಿರತರಾಗಿದ್ದಾರೆ.

Continue Reading

ಗೋಸ್ವರ್ಗದಲ್ಲಿ ಸಂಗೀತ ಸೇವೆ

ಗೋಸ್ವರ್ಗ: ಗೋಸೌಖ್ಯ ಕೇಂದ್ರಿತವಾದ ಗೋಸ್ವರ್ಗದಲ್ಲಿ ಗೋವುಗಳ ಶ್ರವಣಾನಂದಕ್ಕಾಗಿಯೇ ನೆಡೆಯುವ ಸಂಗೀತ ಸೇವೆ ಸ್ವರ್ಗಸಂಗೀತ. ಈಬಾರಿಯ ಸೇವೆ ಪಶು ವೈದ್ಯರಾದ ಮಂಜುನಾಥ ಬಿ.ಪಿ ಇವರಿಂದ ನೆರವೇರಿತು. ವೃತ್ತಿಯಲ್ಲಿ ಪಶುವೈದ್ಯರಾಗಿ ಪ್ರವೃತ್ತಿಯಲ್ಲಿ ಸಂಗೀತದಆರಾಧಕರಾದ ಶ್ರೀಯುತರು ಪಂ.ಪರಮೇಶ್ವರ ಹೆಗಡೆಯವರ ಶಿಷ್ಯರು. ಪಶುವೈದ್ಯರಾಗಿರುವುದರಿಂದ ಗೋವುಗಳ ಕುರಿತು ಪ್ರೀತಿ, ಕಾಳಜಿ ಇರುವ ಮಂಜುನಾಥರವರು ಬೆಂಗಳೂರಿನಿಂದ ಆಗಮಿಸಿ ತಮ್ಮ ಹಿಂದೂಸ್ಥಾನಿ ಸಂಗೀತಸೇವೆಯನ್ನು ಗೋಮಾತೆಯ ಪದತಲದಲ್ಲಿ ಸಮರ್ಪಿಸಿದರು. ಹಾರ್ಮೋನಿಯಂ ರಾಜೇಂದ್ರ ಕೊಳಗಿ ಹಾಗೂ ತಬಲಾದಲ್ಲಿ ಸ್ವರ್ಗಸಂಗೀತದ ನೇತೃತ್ವ ವಹಿಸಿರುವ ಶ್ರೀ ಶ್ರೀಕಾಂತ ಕಾಳಮಂಜಿ ಸಹಕರಿಸಿದರು. ಗುರುವಂದನೆ ಮೂಲಕ ಆರಂಭವಾದ […]

Continue Reading

ಗೋಸ್ವರ್ಗಕ್ಕೆ ಶುಭ ಹಾರೈಸಿದ ಚಿದಂಬರಾಶ್ರಮ ಶ್ರೀಗಳು

ಗೋಸ್ವರ್ಗ: ಸವದತ್ತಿ ತಾಲೂಕಿನ ಮುರಗೋಡದ ಶ್ರೀಶಿವ ಚಿದಂಬರಾಶ್ರಮದ ಪರಮಪೂಜ್ಯ ಶ್ರೀಶ್ರೀ ದಿವಾಕರ ದೀಕ್ಷಿತ ಮಹಾರಾಜರು ಗೋಸ್ವರ್ಗಕ್ಕೆ ಚಿತ್ತೈಸಿದ್ದರು. ಸ್ವತಹ ಗೋಶಾಲೆ ಮಾಡುವ ಯೋಜನೆಯಂತೆ ಬೇರೆ ಬೇರೆ ಗೋಶಾಲೆಗಳ ಸಂದರ್ಶನ ಮಾಡುತ್ತ ಈದಿನ ಗೋಸ್ವರ್ಗಕ್ಕೆ ಆಗಮಿಸಿದ್ದರು. ಗೋಸ್ವರ್ಗ ಯೋಜನೆ ಸಂಪೂರ್ಣ ಮಾಹಿತಿ ಪಡೆದು, ವೀಕ್ಷಣೆ ಮಾಡಿ ವ್ಯವಸ್ಥೆಗಳ ಕುರಿತು ಸಂತಸ ವ್ಯಕ್ತಪಡಿಸಿದರು. ಗೋಗ್ರಾಸ, ಮತ್ಸ್ಯಗ್ರಾಸ ಸಮರ್ಪಿಸ ಪ್ರಸಾದ ಸ್ವೀಕರಿಸಿ ಶುಭ ಹಾರೈಸಿದರು. ಆಗಮಿಸಿದ ಶ್ರೀಗಳಿಗೆ ಗೋಸ್ವರ್ಗದಿಂದ ಫಲಕಾಣಿಕೆ ಸಮರ್ಪಿಸಿ ಗೌರವಿಸಲಾಯಿತು.

Continue Reading

ಹೊಸಾಡ ಗೋಶಾಲೆಗೆ ಕೆಂಗೇರಿ ಶ್ರೀ ಬೇಟಿ

ಹೊಸಾಡ: ಬೆಳಗಾವಿ ಸೌಬತ್ತಿ ಮುರಗೋಡ ಶ್ರೀ ಕ್ಷೇತ್ರ ಕೆಂಗೇರಿ ಶ್ರೀ ಪೂಜ್ಯ ದಿವಾಕರ ದೀಕ್ಷಿತ ಗುರುಮಹಾರಾಜರು ಗುರುವಾರ ಹೊಸಾಡ ಅಮೃತಧಾರ ಗೋಶಾಲೆಗೆ ಭೇಟಿ ನೀಡಿದರು. ಸಾವಿನ ಮನೆಯ ಕದ ತಟ್ಟಿ ಬಂದ, ಅನಾಥವಾದ, ವೃದ್ಧ ಹಾಗೂ ಅಪಘಾತಕ್ಕೀಡಾದ ಗೋವುಗಳನ್ನು ಸಲಹುತ್ತಿರುವ ಹೊಸಾಡ ಗೋಶಾಲೆಯು ಗಾವೋ ವಿಶ್ವಸ್ಯ ಮಾತರಃ ಎಂಬ ವಾಕ್ಯಕ್ಕೆ ಸೂಕ್ತವಾದ ಸ್ಥಳ ಎಂದು ಹೇಳಿದಾಗ ನಿಜಕ್ಕೂ ಭಾವುಕರಾದೆವು. ಗೋಶಾಲೆಯನ್ನು ಮಾಡಲು ಬೇಕಾದ ಉಪಯುಕ್ತ ಮಾಹಿತಿಯನ್ನು ಕೇಳಿದರು. ಮೊದಲಿಗೆ ಕಾಮಧೇನುವಿಗೆ ಪೂಜೆಯನ್ನು ಅರ್ಪಿಸಿ, ಗೋವುಗಳಿಗೆ ಗೋಗ್ರಾಸವನ್ನು ನೀಡಿ […]

Continue Reading

ಗೋಲೋಕಕ್ಕೆ ಪ್ರಮಾಣ ಪತ್ರ

ಗೋಲೋಕ: ಕರ್ನಾಟಕ ಸರಕಾರದಿಂದ ಮಾಹಾನಂದಿ ಗೋಲೋಕಕ್ಕೆ ದೊರೆತಂತಹ ಪ್ರಮಾಣ ಪತ್ರವನ್ನು ಪಶು ಸಂಗೋಪನಾ ಸಚಿವರಾದ ಪ್ರಭು ಚೌಹಾಣ್ ಇವರಿಂದ ಗೋಲೋಕದ ಅಧ್ಯಕ್ಷರಾದ ಡಾಕ್ಟರ್ ಸೀತಾರಾಮ ಪ್ರಸಾದ್ ಹಾಗೂ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಎಡಪ್ಪಾಡಿ ಅವರು ಸ್ವೀಕರಿಸಿದರು.

Continue Reading

ಹೊಸಾಡಕ್ಕೆ ಪ್ರಮಾಣ ಪತ್ರ

ಹೊಸಾಡ: ಕರ್ನಾಟಕ ಸರ್ಕಾರದಿಂದ ಹೊಸಾಡ ಅಮ್ರತಧಾರಾ ಗೋಶಾಲೆಗೆ ಪಶುಸಂಗೋಪನಾ ಸಚಿವರಾದ ಪ್ರಭು ಚಹ್ವಾಣ್ ಅವರಿಂದ ಗೋಶಾಲೆಯ ಪರವಾಗಿ ವಿನಾಯಕ ಎಸ್. ಭಟ್ ಅವರು ಪ್ರಮಾಣ ಪತ್ರ ವನ್ನು ಸ್ವೀಕರಿಸಿದರು.

Continue Reading

ಮಾತೃತ್ವಮ್ ಒಣಹುಲ್ಲು ಸಮರ್ಪಣೆ

ಜೇಡ್ಲ: ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರಕ್ಕೆ ಮಾತೃತ್ವಮ್ ವತಿಯಿಂದ ಒಣಹುಲ್ಲು ಸಮರ್ಪಣೆ ಮಾಡಲಾಗಿದೆ. ಬೆಲ್ಲ, ಹಿಂಡಿ ನೀಡಿ ಅರಸಿನ ಕುಂಕುಮ ಹಚ್ಚಿ ಆರತಿಯೊಂದಿಗೆ ಗೋಪೂಜೆ ಮಾಡಿ ಮಾತೆಯರು ಸಂಭ್ರಮಿಸಿದರು. ಕಾಮದುಘಾ ಸಂಚಾಲಕ ಡಾ.ವೈ.ವಿ.ಕೃಷ್ಣಮೂರ್ತಿ, ಗೋಶಾಲೆ ಶ್ರೀಸಂಯೋಜಕ ತಿರುಮಲ ಪ್ರಸನ್ನ, ಗೋಶಾಲೆ ಸಮಿತಿಯ ಅಧ್ಯಕ್ಷರಾದ ಪ್ರೊಫೆಸರ್ ಶ್ರೀಕೃಷ್ಣ ಭಟ್ ತೆಕ್ಕೆಕೆರೆ, ಮಂಗಳೂರು ಪ್ರಾಂತ ಮಾತೃತ್ವಮ್ ಅಧಕ್ಷೆ ಸುಮಾ ರಮೇಶ್, ಕಾಸರಗೋಡು ನಗರ ಮಾತೃತ್ವಮ್ ಅಧಕ್ಷೆ ಕುಸುಮಾ ಪೆರುಮುಖ,ಕಾರ್ಯದರ್ಶಿ ಗೀತಾ ಅನಘ ಮತ್ತು ಮಾಸದ ಮಾತೆಯರು ಹಾಜರಿದ್ದರು.

Continue Reading