ಗೋಸ್ವರ್ಗ: ಗೋಸೌಖ್ಯ ಕೇಂದ್ರಿತವಾದ ಗೋಸ್ವರ್ಗದಲ್ಲಿ ಗೋವುಗಳ ಶ್ರವಣಾನಂದಕ್ಕಾಗಿಯೇ ನೆಡೆಯುವ ಸಂಗೀತ ಸೇವೆ ಸ್ವರ್ಗಸಂಗೀತ. ಈಬಾರಿಯ ಸೇವೆ ಪಶು ವೈದ್ಯರಾದ ಮಂಜುನಾಥ ಬಿ.ಪಿ ಇವರಿಂದ ನೆರವೇರಿತು.
ವೃತ್ತಿಯಲ್ಲಿ ಪಶುವೈದ್ಯರಾಗಿ ಪ್ರವೃತ್ತಿಯಲ್ಲಿ ಸಂಗೀತದಆರಾಧಕರಾದ ಶ್ರೀಯುತರು ಪಂ.ಪರಮೇಶ್ವರ ಹೆಗಡೆಯವರ ಶಿಷ್ಯರು. ಪಶುವೈದ್ಯರಾಗಿರುವುದರಿಂದ ಗೋವುಗಳ ಕುರಿತು ಪ್ರೀತಿ, ಕಾಳಜಿ ಇರುವ ಮಂಜುನಾಥರವರು ಬೆಂಗಳೂರಿನಿಂದ ಆಗಮಿಸಿ ತಮ್ಮ ಹಿಂದೂಸ್ಥಾನಿ ಸಂಗೀತಸೇವೆಯನ್ನು ಗೋಮಾತೆಯ ಪದತಲದಲ್ಲಿ ಸಮರ್ಪಿಸಿದರು. ಹಾರ್ಮೋನಿಯಂ ರಾಜೇಂದ್ರ ಕೊಳಗಿ ಹಾಗೂ ತಬಲಾದಲ್ಲಿ ಸ್ವರ್ಗಸಂಗೀತದ ನೇತೃತ್ವ ವಹಿಸಿರುವ ಶ್ರೀ ಶ್ರೀಕಾಂತ ಕಾಳಮಂಜಿ ಸಹಕರಿಸಿದರು. ಗುರುವಂದನೆ ಮೂಲಕ ಆರಂಭವಾದ ಕಾರ್ಯಕ್ರಮ ಗೋಗಂಗಾರತಿಯೊಂದಿಗೆ ಜಗಜ್ಜನನಿಗೆ ಸಮರ್ಪಿತವಾಯಿತು.