ಮಾತೃತ್ವಮ್ ಒಣಹುಲ್ಲು ಸಮರ್ಪಣೆ
ಜೇಡ್ಲ: ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರಕ್ಕೆ ಮಾತೃತ್ವಮ್ ವತಿಯಿಂದ ಒಣಹುಲ್ಲು ಸಮರ್ಪಣೆ ಮಾಡಲಾಗಿದೆ. ಬೆಲ್ಲ, ಹಿಂಡಿ ನೀಡಿ ಅರಸಿನ ಕುಂಕುಮ ಹಚ್ಚಿ ಆರತಿಯೊಂದಿಗೆ ಗೋಪೂಜೆ ಮಾಡಿ ಮಾತೆಯರು ಸಂಭ್ರಮಿಸಿದರು. ಕಾಮದುಘಾ ಸಂಚಾಲಕ ಡಾ.ವೈ.ವಿ.ಕೃಷ್ಣಮೂರ್ತಿ, ಗೋಶಾಲೆ ಶ್ರೀಸಂಯೋಜಕ ತಿರುಮಲ ಪ್ರಸನ್ನ, ಗೋಶಾಲೆ ಸಮಿತಿಯ ಅಧ್ಯಕ್ಷರಾದ ಪ್ರೊಫೆಸರ್ ಶ್ರೀಕೃಷ್ಣ ಭಟ್ ತೆಕ್ಕೆಕೆರೆ, ಮಂಗಳೂರು ಪ್ರಾಂತ ಮಾತೃತ್ವಮ್ ಅಧಕ್ಷೆ ಸುಮಾ ರಮೇಶ್, ಕಾಸರಗೋಡು ನಗರ ಮಾತೃತ್ವಮ್ ಅಧಕ್ಷೆ ಕುಸುಮಾ ಪೆರುಮುಖ,ಕಾರ್ಯದರ್ಶಿ ಗೀತಾ ಅನಘ ಮತ್ತು ಮಾಸದ ಮಾತೆಯರು ಹಾಜರಿದ್ದರು.
Continue Reading