ಹೊಸಾಡ: ಬೆಳಗಾವಿ ಸೌಬತ್ತಿ ಮುರಗೋಡ ಶ್ರೀ ಕ್ಷೇತ್ರ ಕೆಂಗೇರಿ ಶ್ರೀ ಪೂಜ್ಯ ದಿವಾಕರ ದೀಕ್ಷಿತ ಗುರುಮಹಾರಾಜರು ಗುರುವಾರ ಹೊಸಾಡ ಅಮೃತಧಾರ ಗೋಶಾಲೆಗೆ ಭೇಟಿ ನೀಡಿದರು.
ಸಾವಿನ ಮನೆಯ ಕದ ತಟ್ಟಿ ಬಂದ, ಅನಾಥವಾದ, ವೃದ್ಧ ಹಾಗೂ ಅಪಘಾತಕ್ಕೀಡಾದ ಗೋವುಗಳನ್ನು ಸಲಹುತ್ತಿರುವ ಹೊಸಾಡ ಗೋಶಾಲೆಯು ಗಾವೋ ವಿಶ್ವಸ್ಯ ಮಾತರಃ ಎಂಬ ವಾಕ್ಯಕ್ಕೆ ಸೂಕ್ತವಾದ ಸ್ಥಳ ಎಂದು ಹೇಳಿದಾಗ ನಿಜಕ್ಕೂ ಭಾವುಕರಾದೆವು. ಗೋಶಾಲೆಯನ್ನು ಮಾಡಲು ಬೇಕಾದ ಉಪಯುಕ್ತ ಮಾಹಿತಿಯನ್ನು ಕೇಳಿದರು.
ಮೊದಲಿಗೆ ಕಾಮಧೇನುವಿಗೆ ಪೂಜೆಯನ್ನು ಅರ್ಪಿಸಿ, ಗೋವುಗಳಿಗೆ ಗೋಗ್ರಾಸವನ್ನು ನೀಡಿ
ಪ್ರಸಾದ ಭೋಜನವನ್ನು ಸ್ವೀಕರಿಸಿ, ನಂತರ ಮಂತ್ರಾಕ್ಷತೆಯನ್ನು ನೀಡಿದರು.