ಡಿ.15ರಿಂದ ಡಿ.21 : ಕಂಬಳಬೆಟ್ಟು ಶಾಲೆಯಲ್ಲಿ ವಾರ್ಷಿಕ ವಿಶೇಷ ಶಿಬಿರ

ವಿದ್ಯಾಲಯ

ನಂತೂರು : ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಆಡಳಿತಕ್ಕೊಳಪಟ್ಟಿರುವ ಶ್ರೀ ಭಾರತೀ ಪದವಿ ಕಾಲೇಜು ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರವು ವಿಟ್ಲ ಸಮೀಪದ ಕಂಬಳಬೆಟ್ಟು ದ.ಕ.ಜಿ.ಪಂ.ಉ.ಹಿ. ಪ್ರಾ. ಶಾಲೆಯಲ್ಲಿ ಡಿ.15ರಿಂದ ಡಿ.21ರ ವರೆಗೆ ನಡೆಯಲಿದೆ.

ಡಿ.15ರಂದು ಸಂಜೆ ಗಂಟೆ 4.30ಕ್ಕೆ ಧರ್ಮನಗರ ಸೇವಾ ವಿಶ್ವಸ್ಥ ಮಂಡಳಿಯ ಸಂಚಾಲಕ ಕೆ.ಟಿ.ವೆಂಕಟೇಶ್ವರ ಭಟ್ ನೂಜಿ ಉದ್ಘಾಟಿಸುತ್ತಾರೆ. ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅಧ್ಯಕ್ಷತೆ ವಹಿಸುತ್ತಾರೆ. ಕಂಬಳಬೆಟ್ಟು ಜುಮ್ಮಾ ಮಸೀದಿ ಅಧ್ಯಕ್ಷ ಮೊದಿನ್ ಹಾಜಿ ಅವರು ಶ್ರಮದಾನ ಉದ್ಘಾಟಿಸುತ್ತಾರೆ. ಮುಖ್ಯ ಅತಿಥಿಗಳಾಗಿ ಕಂಬಳಬೆಟ್ಟು ಸಿಆರ್‌ಪಿ ಕುಕ್ಕ ಕೆ.,  ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ, ಆಡಳಿತಾಧಿಕಾರಿ ಪ್ರೊ.ಕೆ.ಶಂಕರ ಭಟ್, ತಿಮ್ಮಪ್ಪ ಸಫಲ್ಯ, ಆಲಂಗಾರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರ ವರ್ಮುಡಿ ಪದ್ಮಿನಿ ರಾಮ ಭಟ್ ಆಲಂಗಾರು, ಭವಾನಿ ರೈ ಕೊಲ್ಯ, ಅಬ್ದುಲ್‌ರಹಿಮಾನ್, ರಾಧಾಕೃಷ್ಣ ವರ್ಮ ಮತ್ತಿತರರು ಭಾಗವಹಿಸಲಿದ್ದಾರೆ.ಬಳಿಕ ಯಕ್ಷಗಾನ ತಾಳಮದ್ದಳೆಯಿದೆ.

ಪ್ರತಿದಿನ ಬೆಳಗ್ಗೆ 6.30ಕ್ಕೆ ಗಣ್ಯರಿಂದ ಧ್ವಜಾರೋಹಣ, ಮಧ್ಯಾಹ್ನ 2.30ರಿಂದ 4ರ ವರೆಗೆ ಶೈಕ್ಷಣಿಕ ಕಾರ್ಯಕ್ರಮ, ಸಂಜೆ 6.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಲಾಪ, ದಿಕ್ಸೂಚಿ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ.19ರಂದು ಇಡ್ಕಿದು ಹಾಗೂ ವಿಟ್ಲಮುಡ್ನೂರು ಗ್ರಾ.ಪಂ. ಸಹಭಾಗಿತ್ವದಲ್ಲಿ ಸ್ವಚ್ಛತೆಯೆಡೆಗೆ ನಮ್ಮ ನಡಿಗೆ ಮತ್ತು ಡಿ.20ರಂದು ಜಲಸಂರಕ್ಷಣೆಯ ಉದ್ದೇಶದಿಂದ ಮೂಡೈಮಾರು ಎಂಬಲ್ಲಿ ನೀರಿನ ಒಡ್ಡು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ಡಿ.21ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯೆ ಜಯಶ್ರೀ ಕೋಡಂದೂರು, ತಾ.ಪಂ.ಸದಸ್ಯೆ ವನಜಾಕ್ಷಿ ಎಸ್.ಭಟ್, ವಿಟ್ಲಮುಡ್ನೂರು ಗ್ರಾ.ಪಂ.ಅಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ದಯಾನಂದ ಶೆಟ್ಟಿ ಅಬೀರಿ, ಸದಸ್ಯ ಮಹಾಬಲೇಶ್ವರ ಭಟ್ ಆಲಂಗಾರು, ಹಾಸನ ಆಸ್ಪತ್ರೆಯ ವೈದ್ಯ ಡಾ.ಬಶೀರ್, ಶಾಲೆ ಶತಮಾನೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಮೂಡೈಮಾರು, ಕಾಲೇಜಿನ ಉಪಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ, ಕಂಬಳಬೆಟ್ಟು ಮುಖ್ಯ ಶಿಕ್ಷಕಿ ವಾರಿಜಾ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನ್‌ದಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅಶೋಕ್ ಎಸ್. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *