ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ವಿಶೇಷ ದಾಖಲೆ ಮಾಡಿದೆ.
ವಿಜ್ಞಾನ ವಿಭಾಗದಲ್ಲಿ ಶೇ. 100 ಫಲಿತಾಂಶ ದಾಖಲಿಸಿದರೆ ವಾಣಿಜ್ಯ ವಿಭಾಗದಲ್ಲಿ ಶೇ. 95 ಫಲಿತಾಂಶ ದಾಖಲಿಸಿದೆ. ಮೂವರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಭೈರವಿ ವಿನಾಯಕ ಹೆಗಡೆ ಅವರು ಶೇ. 84.33 ಅಂಕ ಗಳಿಸಿದ್ದಾರೆ. ಅವರು ಸಂಸ್ಕೃತದಲ್ಲಿ 98 ಅಂಕ ಮತ್ತು ಭೌತಶಾಸ್ತ್ರದಲ್ಲಿ87 ಅಂಕ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸಾಕ್ಷಿ ಎಲ್.ಕರ್ಕೇರ ಅವರು ಶೇ. 90 ಅಂಕ ಗಳಿಸಿದ್ದಾರೆ. ಅವರು ಸಂಸ್ಕೃತದಲ್ಲಿ 96 ಅಂಕ ಮತ್ತು ಬಿಸಿನೆಸ್ ಸ್ಟಡೀಸ್ ನಲ್ಲಿ 97, ಅಕೌಂಟೆನ್ಸಿ ಮತ್ತು ಕಂಪ್ಯೂಟರ್ ಸೈನ್ಸ್ನಲ್ಲಿ ತಲಾ 96 ಅಂಕ ಪಡೆದಿದ್ದಾರೆ. ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಭೈರವಿ ವಿನಾಯಕ ಹೆಗಡೆ ಅವರು ಶೇ. 84.33 ಅಂಕ ಗಳಿಸಿದ್ದಾರೆ. ಅವರು ಸಂಸ್ಕೃತದಲ್ಲಿ 98 ಅಂಕ ಮತ್ತು ಭೌತಶಾಸ್ತ್ರದಲ್ಲಿ87 ಅಂಕ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶಿವಪ್ರಸಾದ್ ಅವರು ಶೇ. 89.50 ಅಂಕ ಗಳಿಸಿದ್ದಾರೆ. ಅವರು ಸಂಸ್ಕೃತದಲ್ಲಿ 97 ಅಂಕ ಮತ್ತು ಬಿಸಿನೆಸ್ ಸ್ಟಡೀಸ್ ನಲ್ಲಿ 97, ಅಕೌಂಟೆನ್ಸಿ ಮತ್ತು ಕಂಪ್ಯೂಟರ್ ಸೈನ್ಸ್ ನಲ್ಲಿ ತಲಾ 96 ಅಂಕ ಪಡೆದಿದ್ದಾರೆ. ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕೌಶಲ್ಯ ಶೆಟ್ಟಿ ಅವರು ಶೇ. 89.17 ಅಂಕ ಗಳಿಸಿದ್ದಾರೆ. ಅವರು ಕನ್ನಡದಲ್ಲಿ 90 ಅಂಕ ಮತ್ತು ಎಕನಾಮಿಕ್ಸ್ ನಲ್ಲಿ 96 ಬಿಸಿನೆಸ್ ಸ್ಟಡೀಸ್ ನಲ್ಲಿ 90, ಅಕೌಂಟೆನ್ಸಿಯಲ್ಲಿ 93 ಮತ್ತು ಕಂಪ್ಯೂಟರ್ ಸೈನ್ಸ್ ನಲ್ಲಿ 96 ಅಂಕ ಪಡೆದಿದ್ದಾರೆ. ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ.