ಗೋ-ಮಯ ಪರಿಸರದ ಸವಿಯನುಂಡ ಸಂತರು

ಗೋಶಾಲಾ

ಗೋಸ್ವರ್ಗ: ಬೆಂಗಳೂರು ಕೆ.ಆರ್ ಪುರದ ರಾಮಕೃಷ್ಣಾಶ್ರಮದ ಮುಖ್ಯಸ್ಥರಾದ ಸ್ವಾಮಿ ಚಂದ್ರೇಶಾನಂದಜೀ ರವರು ಗೋಸ್ವರ್ಗಕ್ಕೆ ಚಿತ್ತೈಸಿದ್ದರು.

ಗೋಸ್ವರ್ಗವನ್ನು ವೀಕ್ಷಿಸಿ, ಮಾಹಿತಿ ಪಡೆದರು. ಗವ್ಯೋತ್ಪನ್ನಗಳ ಬಗೆಗೆ ವಿವರ ಪಡೆದರು. ಶ್ರೀಸಂಸ್ಥಾನದವರ ದೂರದರ್ಶಿತ್ವ, ಸಂಕಲ್ಪ ಸಿದ್ಧಿ, ಗೋಸಂರಕ್ಷಣಾ ಕಾರ್ಯ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕಲ್ಪನೆಗಳ ಕುರಿತು ಅತೀವ ಹರ್ಷ ವ್ಯಕ್ತಪಡಿಸಿದರು. ಬೆಂಗಳೂರಿನ ಇನ್ನೂ ಹಲವು ಭಕ್ತರೊಡಗೂಡಿ ಮತ್ತೊಮ್ಮೆ ಬಂದು ಗೋಸ್ವರ್ಗದಲ್ಲಿಯೇ ದಿನಪೂರ್ತಿ ಕಳೆವುದಾಗಿ ತಿಳಿಸಿದ್ದಾರೆ. ನಾಲ್ಕೈದು ಜನ ಭಕ್ತರೊಡನೆ ಆಗಮಿಸಿದ್ದ ಶ್ರೀಗಳು ರಾಮಸನ್ನಿಧಿ, ಸಪ್ತಸನ್ನಿಧಿ, ಗೋಸನ್ನಿಧಿಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.

Author Details

Avatar
Srimukha

Leave a Reply

Your email address will not be published. Required fields are marked *