ಪ್ರತಿಭೆಯೊಂದಿಗೆ ಗುರು ಹಿರಿಯರ ಆಶೀರ್ವಾದ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ : ಚಿತ್ರ ನಟ ನಿರ್ದೇಶಕ ದಿನೇಶ್ ಅತ್ತಾವರ

ವಿದ್ಯಾಲಯ

ನಂತೂರು: ಸಿಯಾರ ಗಾಯ್ಸ್ ನಂತೂರು ಅವರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಬಾರತೀ ಪದವಿ ಪೂರ್ವ ಕಾಲೇಜು ಸಹಭಾಗಿತ್ವದಲ್ಲಿ ನಡೆದ ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಚಿತ್ರನಟ ದಿನೇಶ್ ಅತ್ತಾವರ ಅವರು ಭಾಗವಹಿಸಿ, ಮಾತನಾಡಿ ಗುರುಹಿರಿಯರು ತಂದೆ ತಾಯಿಯರನ್ನು ಗೌರವದಿಂದ ಕಾಣಬೇಕು ಎಂದರು. ತಮ್ಮ ಬಾಲ್ಯದ ನೆನಪನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕೆಲವು ನಾಟಕದ ಸಂಭಾಷಣೆಯನ್ನು ಹೇಲಿ ಎಲ್ಲರನ್ನು ರಂಜಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ವಿದ್ಯಾ ಭಟ್ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಗೊಳಿಸಲು ಇಂತಹ ವೇದಿಕೆಗಳು ಅವಶ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕಾರ್ಯಾಲಯ ಕಾರ್ಯದರ್ಶಿ ಎಂ. ಟಿ. ಭಟ್ ಮಾತನಾಡಿ ವಿದ್ಯೆಯೊಂದಿಗೆ ಕಲೆಗಳನ್ನು ಕಲಿತಾಗ ಯಶಸ್ಸು ಸಾಧ್ಯ ಎಂದರು. ಹಿರಿಯ ಶಿಕ್ಷಕಿ ಸುಭದ್ರಾ ಭಟ್ ಉಪಸ್ಥಿತರಿದ್ದರು.

ರಂಗ ನಿರ್ದೇಶಕ ಜಗನ್ ಪವಾರ್ ಸ್ವಾಗತಿಸಿ, ಶಿಕ್ಷಕ ಅನಂತನಾರಾಯಣ ಪಾದಕಣ್ಣಾಯ ವಂದಿಸಿದರು. ಶಿಕ್ಷಕಿ ದಿವ್ಯಲತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಅನಂತರ ಧನುಷ್ ತಂಡದಿಂದ ಸಮೂಹಗೀತೆ ಮತ್ತು ಖ್ಯಾತ ನಿರ್ದೇಶಕ ಜಗನ್ ಪವಾರ್ ನಿರ್ದೇಶನದಲ್ಲಿ ಜನ ಮನ ಗೆದ್ದ ನಾಟಕ ಚಿತ್ರಪಟ ಅವಿನಾಶ್ ತಂಡದಿಂದ ಪ್ರದರ್ಶನ ಗೊಂಡಿತು.

Author Details


Srimukha

Leave a Reply

Your email address will not be published. Required fields are marked *