ಶ್ರೀನಿಕೇತನ ಚಿಣ್ಣರು ಗೋಸ್ವರ್ಗದಲ್ಲಿ

ಗೋಶಾಲಾ

ಗೋಸ್ವರ್ಗ: ಸೋಂದಾ ಸ್ವರ್ಣವಲ್ಲೀ ಮಠದ ಆಡಳಿತದಲ್ಲಿರುವ ಶಿರಸಿ ಇಸಳೂರು ಶ್ರೀನಿಕೇತನ ಶಿಕ್ಷಣ ಸಂಸ್ಥೆಯ ೩೫೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಗೋಸ್ವರ್ಗಕ್ಕೆ ಆಗಮಿಸಿದ್ದರು.

ಶಾಲಾ ಪ್ರವಾಸಕ್ಕಾಗಿ ಬಂದ ವಿದ್ಯಾರ್ಥಿಗಳು ಗೋವುಗಳ ಸಮೂಹ, ಗೋತೀರ್ಥದ ವರ್ಣಮಯ ಮತ್ಸ್ಯಗಳನ್ನು ನೋಡಿ ಹರ್ಷಗೊಂಡರು. ಹಲವು ಸ್ಥಳಗಳ ಸಂದರ್ಶನದಿಂದ ದಣಿವಾಗಿ ಬಂದ ಚಿಣ್ಣರಿಗೆ ಗೋಸ್ವರ್ಗದ ಗೋಸ್ವಾದು ತಂಪನ್ನೆರೆಯಿತು. ಗೋಸ್ವರ್ಗ, ಶ್ರೀರಾಮ ಸನ್ನಿಧಿಯ ದರ್ಶನ ಪೂರೈಸಿ ಗೋಸ್ವರ್ಗದ ಪ್ರಸಾದ ಭೋಜನ ಸ್ವೀಕರಿಸಿದ ವಿದ್ಯಾರ್ಥಿಗಳು ಭಾನ್ಕುಳಿ ಮಠದ ವಿಶಾಲ ಅಂಗಳದಲ್ಲಿ ನಲಿದಾಡಿದರು. ವಿದ್ಯಾರ್ಥಿಗಳ ಜೊತೆ ಪಾಲಕರು, ಶಿಕ್ಷಕ ವೃಂದದವರು ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಆಗಮಿಸಿದ್ದರು.

Author Details


Srimukha

Leave a Reply

Your email address will not be published. Required fields are marked *