ಅಂದಿನ ತ್ರೇತಾಯುಗವ
ಇಂದಿನ ಕಲಿಯುಗದಲಿ
ಪ್ರತ್ಯಕ್ಷ ಕಾಣಿಸಿದ
ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ…!
ನೂರಾರು- ಜೀವರ ಸೇರಿಸಿ
ಗಿರಿನಗರ ಮಠವನ್ನೇ
ನವ- ಅಯೋಧ್ಯಾ ಪುರವಾಗಿಸಿದ
ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ..!
ಧಾರಾ– ರಾಮಾಯಣದ
ದೋಣಿಯಲಿ ನಮ್ಮೆಲ್ಲರ ಕುಳ್ಳಿರಿಸಿ
ಜೀವನಕ್ಕೆ- ಶಿಕ್ಷಣವ ಕೊಡಿಸಿದಾ
ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ..!
ಸಮಾಜದ ಮನೆ ಮನೆಗಳಲ್ಲಿ
ಗೋಪ್ರೇಮ,ಗೋಭಕ್ತಿಯಾ ಭಿತ್ತಿ
ರಾಮಕಥಾ,ಗೋಕಥವ ಮಾಡಿದ
ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ..!
ಜೀವದ ನಲಿವಿಗೆ ನಲವತ್ತು ಮೆಟ್ಟಿಲ
ಸಾಧನಾ- ಪಂಚಕದ ನೂರಾರು ಕಂತಿನಲಿ
ಜೀವದಾ ಸಾಧನೆಯ ಮಾಡಿಸುವ,
ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ..!
ನಿತ್ಯವೂ ಶ್ರೀ ಸೂಕ್ತಿಯ ಅನ್ನವನು ಭಾವದಲಿ ಉಣ್ಣಿಸಿ
ಗುರುವಾಣಿಯಲಿ ಮುಳುಗಿಸಿದ
ಜ್ಞಾನ, ಭಕ್ತಿ, ವೈರಾಗ್ಯವ ಕಲಿಸುವ
ಅವಿಚ್ಛಿನ್ನ ಪರಂಪರಾ- ಮಠದ
ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ..!