ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೆ ಪ್ರಯುಕ್ತ ಶ್ರೀರಾಮಚಂದ್ರಾಪುರ ಮಠದ ಮಾತೃತ್ವಮ್ ಆಯೋಜಿಸಿದ ದೇಸೀ ಗವ್ಯ ಉತ್ಪನ್ನ ಮಾರಾಟ ಮಳಿಗೆಯನ್ನು ಮಂಗಳವಾರ ಉದ್ಘಾಟಿಸಲಾಯಿತು.
ದೇವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಬಡಜ ಉದ್ಘಾಟಿಸಿ, ಮಾತನಾಡಿ, ಗವ್ಯ ಉತ್ಪನ್ನದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಅವರು ಮಾತನಾಡಿ, ಸ್ವದೇಶೀ ಗೋವುಗಳನ್ನು ಉಳಿಸಿ, ಬೆಳೆಸುವುದು ಮುಖ್ಯ. ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಕಾರ್ಯರೂಪಕ್ಕೆ ತಂದ ಈ ಯೋಜನೆಯನ್ನು ಮುಂದುವರಿಸುವುದು ಪ್ರತಿಯೊಬ್ಬರ ಕರ್ತವ್ಯ. ದೇಸೀ ಗೋವನ್ನು ಉಳಿಸಲು ಮಾಸದ ಮಾತೆಯರಾಗಿ ಸಹಕರಿಸಬೇಕು. ಈ ಮಾರಾಟ ಮಳಿಗೆಯಲ್ಲಿ ಸಿಗುವ ಗವ್ಯ ಉತ್ಪನ್ನಗಳನ್ನು ಬಳಸಬೇಕು ಎಂದು ಹೇಳಿದರು.
ಆಡಳಿತ ಸಮಿತಿ ಅಧ್ಯಕ್ಷ ಸುರೇಶ್ ಕೆ.ಎಸ್.ಮುಕ್ಡಾಪು, ಸದಸ್ಯ ಸುರೇಶ ಪೂಜಾರಿ, ದೇಜಪ್ಪ ಕೋಲ್ಪೆ, ಕೆಮಣಾಜೆ ಕೃಷ್ಣಪ್ಪ ಸಫಲ್ಯ, ತಾ.ಪಂ.ಸದಸ್ಯ ವನಜಾಕ್ಷಿ ಭಟ್, ಹವ್ಯಕ ಮಹಾಮಂಡಲದ ಉಪಾಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಮಾತೃತ್ವಮ್ ವಿಭಾಗದ ವಿವೇಕಲಕ್ಷ್ಮೀ ಮಲ್ಲಿಕಾ ಜಿ.ಕೆ.ಭಟ್ ಕಲ್ಲಡ್ಕ, ಮಾಸದ ಮಾತೆಯರು ಉಪಸ್ಥಿತರಿದ್ದರು.
ಮಂಗಳೂರು ಪ್ರಾಂತ್ಯದ ಮಾತೃತ್ವಮ್ ಅಧ್ಯಕ್ಷೆ ಸುಮಾ ರಮೇಶ್ ಪ್ರಸ್ತಾವಿಸಿ, ಸ್ವಾಗತಿಸಿ, ವಂದಿಸಿದರು.