ಮಾತೃತ್ವಮ್ ‘ ನ ಮಂಗಳೂರು ನಗರಸಮಿತಿಯ ಸಭೆ

ಇತರೆ

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ‘ ಮಾತೃತ್ವಮ್ ‘ ನ ಮಂಗಳೂರು ನಗರಸಮಿತಿಯ ಸಭೆಯು 18 – 07 – 2022 ರಂದು ಅಂತರ್ಜಾಲದ ಗೂಗಲ್ ಮೀಟ್ ಮೂಲಕ ನೆರವೇರಿತು.

ಗುರುವಂದನೆ ಗೋಸ್ತುತಿಯೊಂದಿಗೆ ಆರಂಭವಾದ ಸಭೆಯಲ್ಲಿ ಮಂಗಳೂರು ನಗರಸಮಿತಿ ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಅಮೈ ಪ್ರಾಸ್ತಾವಿಕ ನುಡಿಗಳನ್ನಾಡಿ ಮಂಗಳೂರು ನಗರದ ಮಾತೃತ್ವಮ್ ಸಮಿತಿಯ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ ಸವಿಸ್ತಾರವಾಗಿ ತಿಳಿಸಿದರು.

ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀಮತಿ ಈಶ್ವರಿ ಬೇರ್ಕಡವು
” ಮಂಗಳೂರು ನಗರಸಮಿತಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಸ್ತುತ ಕಾರ್ಯನಿರತವಾಗಿರುವ ಮಾತೃತ್ವಮ್ ಸಮಿತಿಯೇ ಮುಂದಿನ ಅವಧಿಗೂ ಮುಂದುವರಿಸುವಂತೆ ಶ್ರೀಸಂಸ್ಥಾನದವರ ಆದೇಶವಾಗಿದೆ ಹಾಗೂ ಮಾಸದಮಾತೆಯರೆಲ್ಲರೂ ಇದಕ್ಕೆ ಸಹಕಾರ ನೀಡಬೇಕು ” ಎಂದು ಕೋರಿದರು.

ಕೇಂದ್ರ ಪ್ರಧಾನ ಕಾರ್ಯದರ್ಶಿ ಶ್ರೀಮತಿ ನಾಗರತ್ನ ಜಿ ಭಟ್
ಮಾತೃತ್ವಮ್ ಸಮಿತಿಯ ಗೂಗಲ್ ಮೀಟ್ ಸಭೆಯು ಇತರ ಸಮಿತಿಯವರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿ ಇಂತಹ ಸಭೆಗಳಿಂದ ಮಾತೃತ್ವಮ್ ಯೋಜನೆಯ ಕಾರ್ಯಗಳು ತ್ವರಿತಗತಿಯಲ್ಲಿ ಮುಂದುವರಿಯಲು ಅತ್ಯಂತ ಉಪಯುಕ್ತ ‘ ಎಂದು ನುಡಿದರು.

ಪ್ರಧಾನ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಶೈಲಜಾ ಪೋಳ್ಯ  ಇವರು ಲಕ್ಷಭಾಗಿನಿಯಾದ ಮಾತೆಯರ , ಭಾಗಿನ ಪಡೆದವರ , ಶ್ರೀಮುಖದಲ್ಲಿ ಲೇಖನ ಪ್ರಕಟವಾದ ಮಾತೆಯರ ವಿವರಗಳನ್ನು ನೀಡಿದರು. ಗೋಸೇವೆಗೆ ಕೈ ಜೋಡಿಸುವ ದಾನಿಗಳಿಗೆ ದೇಶೀಯ ಗೋತಳಿ ಹಾಗೂ ಗೋ ಉತ್ಪನ್ನಗಳ ಮಹತ್ವದ ಬಗ್ಗೆ ಮಾಹಿತಿ ನೀಡಬೇಕೆಂದು ಕೋರಿದರು.

ಕೇಂದ್ರ ಕೋಶಾಧ್ಯಕ್ಷೆ ಶ್ರೀಮತಿ ಜಯಶೀಲ ಶ್ರೀನಿವಾಸ್ ಅವರು ಪ್ರತಿಯೊಬ್ಬ ಮಾಸದ ಮಾತೆಯರೂ ಸಕ್ರಿಯವಾಗಿ ಗೋಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿ ರಶೀದಿ ಯಲ್ಲಿ PAN number ನಮೂದಿಸುವ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು

ಕೇಂದ್ರ ಸಮಿತಿಯ ವಿವೇಕ ಲಕ್ಷ್ಮಿಯಾದ ಮಲ್ಲಿಕಾ ಜಿ.ಕೆ ಭಟ್ ಅವರು ಗೋಸೇವೆ ಮಾಡಲು ವಯಸ್ಸಿಗಿಂತ ಮನಸ್ಸು ಮುಖ್ಯ ಎಂದು ನುಡಿದರು.

ಮಂಗಳೂರು ಪ್ರಾಂತ್ಯ ಅಧ್ಯಕ್ಷೆ ಶ್ರೀಮತಿ ಸುಮಾ ರಮೇಶ್ ‘ ಪ್ರತಿಯೊಬ್ಬರಿಗೂ ಮನೆಯಿಂದಲೇ ಗೋಸೇವೆ ಮಾಡಲು ಶ್ರೀಗುರುಗಳು ಮಾತೃತ್ವಮ್ ಯೋಜನೆಯ ಮೂಲಕ ಅವಕಾಶ ಒದಗಿಸಿಕೊಟ್ಟಿದ್ದಾರೆ . ಇನ್ನಷ್ಟು ಮಾತೆಯರು ಗೋಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ‘ ಎಂದರು.

ಮಂಗಳೂರು ನಗರ ಸಮಿತಿಯ ಕೋಶಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಅವರು ನಗರ ಸಮಿತಿಯಲ್ಲಿ ಸಕ್ರಿಯರಾಗಿರುವ ಮಾಸದಮಾತೆಯರ ಅಂಕಿಅಂಶಗಳನ್ನು ನೀಡಿದರು.

ಮಂಗಳೂರು ಮಂಡಲ ಅಧ್ಯಕ್ಷರಾದ
ಗಣೇಶ ಮೋಹನ ಕಾಶಿಮಠ ಗುರಿ ತಲುಪಿದ ಮತ್ತು ಲಕ್ಷಭಾಗಿನಿಯಾದ ಮಾತೆಯರ ಕಾರ್ಯ ವನ್ನು ಶ್ಲಾಘಿಸಿ, ಅಭಿನಂದಿಸಿದರು.

ಮಾಸದ ಮಾತೆಯರಾದ ಕೃಷ್ಣಕುಮಾರಿ ಬದನಾಜೆ ಹಾಗೂ ಶ್ರೀದೇವಿ ಚಂಬರಕಟ್ಟ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಮಂಗಳೂರು ನಗರ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀ ಪ್ರಕಾಶ್ ಸ್ವಾಗತಿಸಿ ನಿರೂಪಿಸಿದ ಸಭೆಯಲ್ಲಿ ಕೇಂದ್ರ ಸಮಿತಿಯ ವಿದ್ಯಾ ಲಕ್ಷ್ಮಿ ಅಂಕಿತಾ ನೀರ್ಪಾಜೆ, ಮಂಗಳೂರು ಮಂಡಲ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ ಹಳೆಮನೆ, ಮಂಗಳೂರು ಪ್ರಾಂತ್ಯ ಕಾರ್ಯದರ್ಶಿ ಶ್ರೀಮತಿ ಸರಿತಾ ಪ್ರಕಾಶ್ , ಹೆಚ್ಚಿನ ಸಂಖ್ಯೆಯಲ್ಲಿ ಮಾಸದಮಾತೆಯರು ಹಾಗೂ ವಿದ್ಯಾಲಕ್ಷ್ಮಿಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಶಾಂತಿಮಂತ್ರದೊಂದಿಗೆ ಸಭೆ ಸಂಪನ್ನವಾಯಿತು.

Author Details


Srimukha

Leave a Reply

Your email address will not be published. Required fields are marked *